ತರೌಬಾ (ಟ್ರಿನಿಡಾಡ್):2024 ರ ಟಿ 20 ವಿಶ್ವಕಪ್ನ 32 ನೇ ಪಂದ್ಯದಲ್ಲಿ ಉಗಾಂಡಾವನ್ನು ನ್ಯೂಜಿಲೆಂಡ್ 9 ವಿಕೆಟ್ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಉಗಾಂಡಾ ತಂಡ ಕೇವಲ 40 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ 5.2 ಓವರ್ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ನ್ಯೂಜಿಲೆಂಡ್ ಪರ ಓಪನರ್ ಡೆವೊನ್ ಕಾನ್ವೆ 22 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಆದರೆ, ಟಿಮ್ ಸೌಥಿ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿ 3 ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ ಎರಡು ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಉಗಾಂಡ ತಂಡ 18.4 ಓವರ್ಗಳಲ್ಲಿ 40 ರನ್ಗಳಿಸಿ ಆಲೌಟ್ ಆಯಿತು. ಈ ವೇಳೆ, ರೋನಕ್ ಪಟೇಲ್ ಮತ್ತು ಸೈಮನ್ ಸೆಸ್ಜಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಸೆಸ್ಜಿ ಮೊದಲ ಎಸೆತದಲ್ಲಿಯೇ ಔಟಾದರು. ಆದರೆ ಪಟೇಲ್ 2 ರನ್ಗಳಿಸಿ ಪೆವಿಲಿಯನ್ಗೆ ಮರಳಿದರು. ವೈಸವ ತಂಡದ ಪರ ಗರಿಷ್ಠ 11 ರನ್ ಗಳಿಸಿದರು. 18 ಎಸೆತಗಳನ್ನು ಎದುರಿಸಿದ ಅವರು 2 ಬೌಂಡರಿ ಬಾರಿಸಿದರು. ದಿನೆಕ್ ನಕ್ರಾಣಿ 4 ರನ್ ಗಳಿಸಿ ಔಟಾದರು. ನಾಯಕ ಮಸಾಬ 3 ರನ್ಗಳಿಸಿ ಅಜೇಯರಾಗಿ ಉಳಿದರು.
ನ್ಯೂಜಿಲೆಂಡ್ನ ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿದರು. ಮಿಚೆಲ್ ಸ್ಯಾಂಟ್ನರ್ 3.4 ಓವರ್ ಗಳಲ್ಲಿ 8 ರನ್ ನೀಡಿ 2 ವಿಕೆಟ್ ಪಡೆದರು. ಬೌಲ್ಟ್ 4 ಓವರ್ ಗಳಲ್ಲಿ ಕೇವಲ 7 ರನ್ ನೀಡಿ 2 ವಿಕೆಟ್ ಪಡೆದರು. ಸೌಥಿ 4 ಓವರ್ಗಳಲ್ಲಿ ಕೇವಲ 4 ರನ್ ನೀಡಿ 3 ವಿಕೆಟ್ ಪಡೆದರು. ರಚಿನ್ ರವೀಂದ್ರ 3 ಓವರ್ ಗಳಲ್ಲಿ 9 ರನ್ ನೀಡಿ 2 ವಿಕೆಟ್ ಪಡೆದರು. ಲಾಕಿ ಫರ್ಗುಸನ್ 1 ವಿಕೆಟ್ ಪಡೆದರು.