ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಇದು 25 ವರ್ಷದ ಬಲಗೈ ಬ್ಯಾಟ್ಸ್‌ಮನ್‌ನ ಟೆಸ್ಟ್ ವೃತ್ತಿಜೀವನದ 5ನೇ ಶತಕವಾಗಿದ್ದು, ಈ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆಯೊಮದನ್ನು ಗಿಲ್ ಮುರಿದಿದ್ದಾರೆ.
ಯಾವ ದಾಖಲೆ:ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕೆ ಎರಡನೇ ಸ್ಥಾನಕ್ಕೆತಲುಪಿದ್ದಾರೆ. ಶನಿವಾರ ಬಾಂಗ್ಲಾದೇಶದ ವಿರುದ್ಧ ಗಳಿಸಿದ ಶತಕವು ಟೆಸ್ಟ್ ಕ್ರಿಕೆಟ್ ಮತ್ತು WTC ನಲ್ಲಿ ಗಿಲ್ ಅವರ 5ನೇ ಶತಕವಾಗಿದೆ. ಈ ಕಾರಣದಿಂದಾಗಿ ಅವರು ವಿರಾಟ್ ಕೊಹ್ಲಿ(4 ಶತಕ), ರಿಷಬ್ ಪಂತ್ (4 ಶತಕ) ಮತ್ತು ಮಯಾಂಕ್ ಅಗರ್ವಾಲ್ (4ಶತಕ) ಅವರನ್ನು ಹಿಂದಿಕ್ಕಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿದೆ. 37 ವರ್ಷದ ಬಲಗೈ ಬ್ಯಾಟ್ಸ್‌ಮನ್ ಇದುವರೆಗೆ ಆಡಿರುವ 33 ಡಬ್ಲ್ಯುಟಿಸಿ ಪಂದ್ಯಗಳಲ್ಲಿ 9 ಬಾರಿ ಶತಕ ಸಿಡಿಸಿದ್ದಾರೆ.
ಡಿಕ್ಲೇರ್ ಘೋಷಿಸಿದ ಭಾರತ:ಚೆನ್ನೈ ಟೆಸ್ಟ್‌ನ ಮೂರನೇ ದಿನ ಭಾರತ ತನ್ನ ಎರಡನೇ ಇನ್ನಿಂಗ್ಸ್ ಅನ್ನು 4 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಬಾಂಗ್ಲಾದೇಶಕ್ಕಿಂತ ಭಾರತ ಒಟ್ಟು 514 ರನ್‌ಗಳ ಮುನ್ನಡೆ ಸಾಧಿಸಿದೆ. ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಶುಭ್‌ಮನ್ ಗಿಲ್ ಮತ್ತು ರಿಷಬ್ ಪಂತ್ ಶತಕ ಬಾರಿಸಿದರು. ಪಂತ್ 109 ರನ್ ಗಳಿಸಿದ ಬಳಿಕ ಮೆಹದಿ ಹಸನ್ ಮಿರಾಜ್ಗೆ ವಿಕೆಟ್ ಒಪ್ಪಿಸಿದರು. ಅದೇ ಸಮಯದಲ್ಲಿ, ಗಿಲ್ 10 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 119 ರನ್‌ಗಳ ಕಲೆ ಹಾಕಿ ಅಜೇಯರಾಗಿ ಉಳಿದರು.
ಇದನ್ನೂ ಓದಿ:632 ದಿನಗಳ ನಂತರ ಭರ್ಜರಿ ಶತಕ ಸಿಡಿಸಿದ ಪಂತ್: ಬಾಂಗ್ಲಾ ಬೌಲರ್ಗಳ ಮೇಲೆ ರಿಷಭ್ ಸವಾರಿ! - Rishab Pant century