ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಎದುರಾಳಿಗಳನ್ನು ಬೆವರಿಳಿಸುವ ಹಿಟ್ಮ್ಯಾನ್ಗೆ ಪ್ರಪಂಚದ ಮೂಲೆಮೂಲೆಗಳಲ್ಲೂ ಅಭಿಮಾನಿಗಳಿದ್ದಾರೆ.
ರೋಹಿತ್ ಅವರನ್ನು ಭೇಟಿಯಾಗಿ ಅವರಿಂದ ಆಟೋಗ್ರಾಫ್ ಪಡೆಯಬೇಕೆಂದು ಮೈದಾನ ಸೇರಿದಂತೆ ಅವರ ಮನೆ, ಓಡಾಡುವ ರಸ್ತೆಗಳಲ್ಲಿ ನಿತ್ಯ ಅಭಿಮಾನಿಗಳು ಕಾಣಿಸಿಕೊಳ್ಳುತಲೇ ಇರುತ್ತಾರೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಬ್ಯಾಟ್ ಹಿಡಿದು ಬಂದ ತನ್ನ ಪುಟ್ಟ ಬಾಲಕಿಯನ್ನು ರೋಹಿತ್ ಶರ್ಮಾ ಭೇಟಿ ಮಾಡಿ ಆಟೋಗ್ರಾಫ್ ನೀಡಿದ್ದಾರೆ. ಬಾಲಕಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ಅವರು ಆಟೋಗ್ರಾಫ್ ನೀಡಿದ್ದಾರೆ. ಬಳಿಕ ನೆರೆದಿದ್ದ ಇತರ ಅಭಿಮಾನಿಗಳಿಗೂ ಆಟೋಗ್ರಾಫ್ ಕೊಟ್ಟರು.
ಈ ಹಿಂದೆ, ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿ ರೋಹಿತ್ರನ್ನು ಭೇಟಿ ಮಾಡಲು ಯತ್ನಿಸಿದ್ದರು. ಫೀಲ್ಡಿಂಗ್ ಮಾಡುತ್ತಿದ್ದಾಗ ಮೈದಾನಕ್ಕೆ ನುಗ್ಗಿದ್ದ ಅವರ ಅಭಿಮಾನಿಯನ್ನು ಅಮೆರಿಕದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ತಮ್ಮ ಅಭಿಮಾನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸ್ ಸಿಬ್ಬಂದಿಗೆ ಮನವಿ ಮಾಡಿದ್ದರು.
ಇದನ್ನೂ ಓದಿ:ವಿಶ್ವದ 10 ಅತ್ಯಂತ ಜನಪ್ರಿಯ ಕ್ರೀಡೆಗಳು ಯಾವುವು ಹೇಳಿ ನೋಡೋಣ! - Most Popular Sports