ಕರ್ನಾಟಕ

karnataka

ETV Bharat / sports

ಕೆಂಪು, ವೈಟ್​ ಬಾಲ್ ಕ್ರಿಕೆಟ್ ಸರಣಿ: ನವೆಂಬರ್​ನಲ್ಲಿ ಶ್ರೀಲಂಕಾ 'ಎ' ತಂಡ ಇಸ್ಲಾಮಾಬಾದ್​ಗೆ ಪ್ರಯಾಣ

ಶ್ರೀಲಂಕಾ 'ಎ' ಮತ್ತು ಪಾಕಿಸ್ತಾನ 'ಎ' ತಂಡಗಳ ನಡುವಿನ ಐದು ಪಂದ್ಯಗಳ ಕೆಂಪು ಮತ್ತು ವೈಟ್ ಬಾಲ್ ಸರಣಿಯು ಇಸ್ಲಾಮಾಬಾದ್​ನಲ್ಲಿ ನಡೆಯಲಿದೆ

ಪಿಸಿಬಿ
ಪಿಸಿಬಿ (IANS)

By ETV Bharat Karnataka Team

Published : 5 hours ago

ಲಾಹೋರ್: ಶ್ರೀಲಂಕಾ 'ಎ' ಮತ್ತು ಪಾಕಿಸ್ತಾನ 'ಎ' ತಂಡಗಳ ನಡುವಿನ ಐದು ಪಂದ್ಯಗಳ ಕೆಂಪು ಮತ್ತು ವೈಟ್ ಬಾಲ್ ಸರಣಿಯು ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿ ನಡೆಯಲಿದೆ. ನವೆಂಬರ್​ನಲ್ಲಿ ಇಸ್ಲಾಮಾಬಾದ್ ಕ್ಲಬ್​ನಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ರವಿವಾರ ದೃಢಪಡಿಸಿದೆ.

ಶ್ರೀಲಂಕಾ 'ಎ' ತಂಡ ನವೆಂಬರ್ 11ರಿಂದ 21ರವರೆಗೆ ಎರಡು ನಾಲ್ಕು ದಿನಗಳ ಪಂದ್ಯಗಳನ್ನಾಡಲಿದ್ದು, ನವೆಂಬರ್ 25, 27 ಮತ್ತು 29ರಂದು 50 ಓವರ್​ಗಳ ಮೂರು ಪಂದ್ಯಗಳ ಸರಣಿಯಲ್ಲಿ ಆಡಲಿದೆ.

ನಾಲ್ಕು ದಿನಗಳ ಎರಡೂ ಪಂದ್ಯಗಳಿಗೆ, ಸ್ಥಳೀಯ ಸಮಯ ಬೆಳಿಗ್ಗೆ 9 ಗಂಟೆಗೆ ಟಾಸ್ ನಡೆಯಲಿದ್ದು, ಮೊದಲ ಎಸೆತವನ್ನು 30 ನಿಮಿಷಗಳ ನಂತರ ಎಸೆಯುವ ನಿರೀಕ್ಷೆಯಿದೆ. 50 ಓವರ್​ಗಳ ಸರಣಿಯ ಮೂರು ಪಂದ್ಯಗಳು ಹಗಲು-ರಾತ್ರಿ ಪಂದ್ಯಗಳಾಗಿದ್ದು, ಮಧ್ಯಾಹ್ನ 1:30 ಕ್ಕೆ ಟಾಸ್ ನಡೆಯಲಿದೆ. ಪಂದ್ಯದ ಮೊದಲ ಎಸೆತವನ್ನು ಮಧ್ಯಾಹ್ನ 2 ಗಂಟೆಗೆ ಎಸೆಯುವ ನಿರೀಕ್ಷೆಯಿದೆ.

"ಪಿಸಿಬಿ ತನ್ನ ಯುವ ಪ್ರತಿಭೆಗಳನ್ನು ಬೆಂಬಲಿಸುವುದನ್ನು ಮುಂದುವರಿಸಿದೆ. ಪಾಕಿಸ್ತಾನ ಶಾಹೀನ್ಸ್​ ಮೂರು ತಿಂಗಳಲ್ಲಿ ತಮ್ಮ ಎರಡನೇ ತವರು ಸರಣಿಯಲ್ಲಿ ಆಡಲು ಸಜ್ಜಾಗಿದೆ. ಆಗಸ್ಟ್​ನಲ್ಲಿ ಬಾಂಗ್ಲಾದೇಶ 'ಎ' ತಂಡ ಎರಡು ನಾಲ್ಕು ದಿನಗಳ ಮತ್ತು ಮೂರು ಪಂದ್ಯಗಳ 50 ಓವರ್​ಗಳ ಸರಣಿಗಾಗಿ ಇಸ್ಲಾಮಾಬಾದ್​ಗೆ ಪ್ರಯಾಣಿಸಿತ್ತು" ಎಂದು ಪಿಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವರ್ಷದ ತವರು ಸರಣಿಯ ಹೊರತಾಗಿ, ಪಾಕಿಸ್ತಾನ ಶಾಹೀನ್ಸ್​ ಆಸ್ಟ್ರೇಲಿಯಾದ ಡಾರ್ವಿನ್​ನಲ್ಲಿ ಬಾಂಗ್ಲಾದೇಶ 'ಎ' ವಿರುದ್ಧ ಎರಡು ನಾಲ್ಕು ದಿನಗಳ ಪಂದ್ಯಗಳು, ನಾರ್ದರ್ನ್ ಟೆರಿಟರಿ ಮತ್ತು ಬಾಂಗ್ಲಾದೇಶ 'ಎ' ವಿರುದ್ಧ ಎರಡು 50 ಓವರ್​ಗಳ ಪಂದ್ಯಗಳಲ್ಲಿ ಆಡಿತ್ತು ಮತ್ತು ಟಾಪ್ ಎಂಡ್ ಟಿ 20 ಸರಣಿಯಲ್ಲಿಯೂ ಭಾಗವಹಿಸಿತ್ತು. ಶಾಹೀನ್ಸ್​ ಇತ್ತೀಚೆಗೆ ಮಸ್ಕತ್​ನಲ್ಲಿ ನಡೆದ ಎಸಿಸಿ ಪುರುಷರ ಟಿ 20 ಎಮರ್ಜಿಂಗ್ ಟೀಮ್ಸ್ ಏಷ್ಯಾ ಕಪ್​​ನಲ್ಲಿ ಸ್ಪರ್ಧಿಸಿತ್ತು.

ಪಂದ್ಯಗಳ ವೇಳಾಪಟ್ಟಿ:

7 ನವೆಂಬರ್ - ಇಸ್ಲಾಮಾಬಾದ್ ಗೆ ಆಗಮನ

ನವೆಂಬರ್ 11-14 - ಪಾಕಿಸ್ತಾನ ಶಾಹೀನ್ಸ್​ ವಿರುದ್ಧ ಮೊದಲ ನಾಲ್ಕು ದಿನಗಳ ಪಂದ್ಯ; ಇಸ್ಲಾಮಾಬಾದ್ ಕ್ಲಬ್

ನವೆಂಬರ್ 18-21 - ಪಾಕಿಸ್ತಾನ ಶಾಹೀನ್ಸ್​ ವಿರುದ್ಧ 2ನೇ ನಾಲ್ಕು ದಿನಗಳ ಪಂದ್ಯ; ಇಸ್ಲಾಮಾಬಾದ್ ಕ್ಲಬ್

ನವೆಂಬರ್ 25: ಪಾಕಿಸ್ತಾನ ಶಾಹೀನ್ಸ್​ ವಿರುದ್ಧ ಮೊದಲ 50 ಓವರ್ ಗಳ ಪಂದ್ಯ; ಇಸ್ಲಾಮಾಬಾದ್ ಕ್ಲಬ್

ನವೆಂಬರ್ 27: ಪಾಕಿಸ್ತಾನ ಶಾಹೀನ್ಸ್​ ವಿರುದ್ಧ 2ನೇ 50 ಓವರ್ ಗಳ ಪಂದ್ಯ; ಇಸ್ಲಾಮಾಬಾದ್ ಕ್ಲಬ್

ನವೆಂಬರ್ 29: ಪಾಕಿಸ್ತಾನ ಶಾಹೀನ್ಸ್​ ವಿರುದ್ಧ 3ನೇ 50 ಓವರ್ ಗಳ ಪಂದ್ಯ; ಇಸ್ಲಾಮಾಬಾದ್ ಕ್ಲಬ್

ಇದನ್ನೂ ಓದಿ : 67 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್​ ಸರಣಿ ಗೆದ್ದ ನ್ಯೂಜಿಲೆಂಡ್​: 12 ವರ್ಷ ಬಳಿಕ ತವರಿನಲ್ಲಿ ಸರಣಿ ಸೋತ ಟೀಂ ಇಂಡಿಯಾ

ABOUT THE AUTHOR

...view details