ಕರ್ನಾಟಕ

karnataka

ETV Bharat / sports

ಆರ್​ಸಿಬಿ ಟಾರ್ಗೆಟ್​ ಲಿಸ್ಟ್​ನಲ್ಲಿ ಪಂತ್ ಹೆಸರೇ ಮೊದಲು​: ತಂಡಕ್ಕೆ ಸೇರಿಸಲು 3 ಪ್ರಮುಖ ಕಾರಣಗಳಿವು!

ಆರ್​ಸಿಬಿ ತಂಡ ತನ್ನ ಟಾರ್ಗೆಟ್​ ಲಿಸ್ಟ್​ ಪಟ್ಟಿಯಲ್ಲಿ ರಿಷಭ್​ ಪಂತ್​ ಹೆಸರನ್ನು ಅಗ್ರಸ್ಥಾನದಲ್ಲಿರಿಸಿದೆ. ಈ ಮೂರು ಕಾರಣಕ್ಕಾಗಿ ಪಂತ್​ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬೆಂಗಳೂರು ಯೋಜನೆ ರೂಪಿಸಿದೆ.

ರಿಷಭ್​ ಪಂತ್​
ರಿಷಭ್​ ಪಂತ್​ (IANS)

By ETV Bharat Sports Team

Published : Oct 24, 2024, 7:16 PM IST

Rishabh Pant IPL Auction:ಮುಂದಿನ ವರ್ಷ ನಡೆಯಲಿರುವ 18ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ (IPL) ಆರಂಭಕ್ಕೂ ಮೊದಲೇ ಭಾರೀ ಕುತೂಹಲ ಕೆರಳಿಸಿದೆ. ಕಾರಣ ಕೆಲ ಸ್ಟಾರ್​ ಆಟಗಾರರು ಈ ಬಾರಿ ತಮ್ಮ ಹಾಲಿ ತಂಡಗಳನ್ನು ತೊರೆದು ಹೊಸ ತಂಡಕ್ಕೆ ಸೇರಲಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ರಿಷಭ್​ ಪಂತ್​ ಹೆಸರು ಭಾರೀ ಟ್ರೆಂಡಿಂಗ್​ನಲ್ಲಿದೆ.

ಕಿವೀಸ್​ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲಿ ಅದ್ಬುತ ಪ್ರದರ್ಶನ ತೋರುತ್ತಿರುವ ಪಂತ್​ ಈ ಬಾರಿ ಐಪಿಎಲ್​ ಮೆಗಾ ಹರಾಜಿಗೆ ಎಂಟ್ರಿ ಕೊಡಲಿದ್ದಾರೆ ಎಂದು ವರದಿಗಳಾಗಿವೆ. ಅಲ್ಲದೇ ಅವರಿಗೆ ಈಗಾಗಲೇ ಕೆಲ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಸೇರುವಂತೆ ಆಫರ್​ ಕೂಡ ನೀಡಿವೆ ಎಂದು ಸುದ್ದಿ ಹರಿದಾಡಲಾರಂಭಿಸಿದೆ.

ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಈ ಬಾರಿ ಸಾಕಷ್ಟು ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಈ ಹಿನ್ನೆಲೆ ತಂಡಕ್ಕೆ ಹೊಸ ನಿರ್ದೇಶಕ ಹಾಗೂ ಮುಖ್ಯ ಕೋಚ್​ ಅನ್ನು ನೇಮಕ ಮಾಡಿಕೊಂಡಿದೆ. ಇದರ ಜೊತೆ ನಾಯಕತ್ವ ಬದಲಾವಣೆಗೂ ಚಿಂತನೆ ನಡೆಸಿದ್ದು ರಿಷಬ್ ಪಂತ್ ಅವರನ್ನು ನಾಯಕತ್ವದ ಕೆಳಗಿಳಿಸಿ ಮತ್ತು ಹೊಸ ನಾಯಕನನ್ನು ನೇಮಿಸಲು ಫ್ರಾಂಚೈಸಿ ಯೋಜಿಸುತ್ತಿದೆ ಎಂದು ವರದಿಗಳಾಗಿವೆ. ಈ ಹಿನ್ನೆಲೆ ಪಂತ್​ ತಂಡ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಿಷಭ್​ ಪಂತ್​ (IANS)

ಇದನ್ನೂ ಓದಿ:ಮೊಟ್ಟ ಮೊದಲ IPL ವಿಕೆಟ್​ ಪಡೆದ ಬೌಲರ್ ಯಾರು?: ಆರ್​ಸಿಬಿ ಹೆಸರಲ್ಲಿದೆ ಈ ದಾಖಲೆ

ಆರ್​ಸಿಬಿ ಕಣ್ಣು:ಏತನ್ಮಧ್ಯೆ ಪಂತ್​ ಮೇಲೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ಕೂಡ ಕಣ್ಣಿಟ್ಟಿದೆ. ಹರಾಜಿನಲ್ಲಿ ಬಂದರೆ ಹೇಗಾದರೂ ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಆರ್​ಸಿಬಿ ನಿರ್ಧರಿಸಿದೆ ಎಂದು ವರದಿಯಾಗಿದೆ. ಆದರೆ ಈ ಮೂರು ಕಾರಣಗಳಿಗಾಗಿ ಆರ್‌ಸಿಬಿ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದೆ ಎಂದು ವರದಿಯಾಗಿದೆ. ಆ ಮೂರು ಕಾರಣಗಳು ಯಾವುವು ಗೊತ್ತಾ?

ನಾಯಕತ್ವ:ಪಂತ್ ಅವರನ್ನು ತಂಡಕ್ಕೆ ತೆಗೆದುಕೊಳ್ಳಲು ಪ್ರಮುಖ ಕಾರಣ ನಾಯಕತ್ವ. ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಪಂತ್‌ಗೆ ಇದೆ. ಅವರು ಹಲವು ಋತುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು. ಒತ್ತಡದಲ್ಲಿಯೂ ತಂಡವನ್ನು ಸಮರ್ಥವಾಗಿ ನಡೆಸಬಲ್ಲರು.

ರಿಷಭ್​ ಪಂತ್​ (Getty Images)

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್:ಆರ್‌ಸಿಬಿಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳ ಕೊರತೆ ವರ್ಷಗಳಿಂದ ಕಾಡುತ್ತಿದೆ. ಆಸೀಸ್ ಬ್ಯಾಟರ್​ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಕ್ಯಾಮರೂನ್ ಗ್ರೀನ್ ಖರೀದಿಸಿದರೂ ತಂಡಕ್ಕೆ ದೊಡ್ಡ ಫಲಿತಾಂಶ ಕಂಡು ಬಂದಿಲ್ಲ. ಆದರೆ ಪಂತ್ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್​ ಮಾಡಬಲ್ಲರು. ಅವರು ಹಲವಾರು ವರ್ಷಗಳಿಂದ ಐಪಿಎಲ್‌ನಲ್ಲಿ ನಾಲ್ಕು ಮತ್ತು ಐದು ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದು ಕೂಡ ಕಾರಣವಾಗಿದೆ.

ರಿಷಭ್​ ಪಂತ್​ (IANS)

ವಿಕೆಟ್ ಕೀಪಿಂಗ್:ದಿನೇಶ್ ಕಾರ್ತಿಕ್ ನಿವೃತ್ತಿಯ ನಂತರ ಆರ್‌ಸಿಬಿಯಲ್ಲಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಸ್ಥಾನ ಖಾಲಿಯಾಗಿದೆ. ಇದರೊಂದಿಗೆ ಆ ಸ್ಥಾನವನ್ನು ತುಂಬುವ ಸಾಮರ್ಥ್ಯ ಪಂತ್‌ಗೆ ಇದೆ ಎಂದು ಆರ್‌ಸಿಬಿ ಆಶಿಸಿದೆ. ಹಾಗಾಗಿ ಇವರನ್ನು ತಂಡಕ್ಕೆ ಸೇರಿಸಿಕೊಂಡರೆ ಮೂರು ರೀತಿಯಲ್ಲಿ ತಂಡ ಬಲಗೊಳಿಸಬಹುದು ಎಂದು ಆರ್​ಸಿಬಿ ಆಸಕ್ತಿ ತೋರಿದೆ.

ಇದನ್ನೂ ಓದಿ:w,w,w,w,w,w,w ; ವಾರೆವ್ಹಾ! 7 ವಿಕೆಟ್​ ಪಡೆದ ವಾಷಿಂಗ್ಟನ್​ ಸುಂದರ್​: 259ಕ್ಕೆ ಕಿವೀಸ್​ ಆಲೌಟ್!!

ABOUT THE AUTHOR

...view details