ಹೈದರಾಬಾದ್: ಕ್ರಿಕೆಟ್ ಜಗತ್ತಿನಲ್ಲಿ ಪ್ರತಿನಿತ್ಯ ಒಂದಲ್ಲೊಂದು ದಾಖಲೆಗಳು ನಿರ್ಮಾಣಗೊಳ್ಳುತ್ತವೆ ಮತ್ತು ಮುರಿಯಲ್ಪಡುತ್ತವೆ. ಆದರೆ ಕ್ರಿಕೆಟ್ ಚರಿತ್ರೆಯಲ್ಲಿ ದಾಖಲಾಗಿರುವ ಕೆಲವು ಅಪರೂಪದ ದಾಖಲೆಗಳು ಇಂದಿಗೂ ಅಚ್ಚರಿಗೊಳಿಸುತ್ತಿವೆ. ಅಲ್ಲದೇ ಅವುಗಳನ್ನು ಮುರಿಯುವುದು ಕನಸಲ್ಲೂ ಅಸಾಧ್ಯ ಎನ್ನಿಸುವಂತಿವೆ. ಅವುಗಳಲ್ಲೊಂದು ಕೇವಲ 3 ಓವರ್‌ಗಳಲ್ಲಿ ಶತಕ ಸಿಡಿಸಿದ ದಾಖಲೆ, ಅದೂ ಕೂಡು ಟಿ20 ಸ್ವರೂಪದಲ್ಲಿ.
ಹೌದು, ಈ ದಾಖಲೆ ಬರೆದಿರುವುದು ಆಸ್ಟ್ರೇಲಿಯಾದ ದಂತಕಥೆ ಸರ್ ಡಾನ್ ಬ್ರಾಡ್ಮನ್. ಕೇವಲ 3 ಓವರ್‌ಗಳಲ್ಲಿ ಶತಕ ಸಿಡಿಸಿರುವ ಇವರ ದಾಖಲೆ ಇಲ್ಲಿಯವರೆಗೂ ಯಾರೊಬ್ಬ ಕ್ರಿಕೆಟರ್ಗೂ ಮುರಿಯಲು ಸಾಧ್ಯವಾಗಿಲ್ಲ. ಆದ್ರೆ 3 ಓವರ್‌ಗಳಲ್ಲಿ ಹೇಗೆ ಶತಕ ಸಿಡಿಸಿದರು ಎಂಬ ಪ್ರಶ್ನೆ ಈಗಾಗಲೇ ನಿಮ್ಮೆಲ್ಲರ ಮನದಲ್ಲೂ ಮೂಡಿರುತ್ತದೆ ಅಲ್ಲವೇ?
ಇದನ್ನೂ ಓದಿ:ಶೂನ್ಯ ಎಸೆತಕ್ಕೆ ವಿಕೆಟ್ ಪಡೆದ ವಿಶ್ವದ ಏಕೈಕ ಕ್ರಿಕೆಟಿಗ ಯಾರು? ಇವರೀಗ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್!
1931ರ ನವೆಂಬರ್ 2ರಂದು ಬ್ಲೂ ಮೌಂಟೇನ್ ಸಿಟಿಯಲ್ಲಿ ಬ್ಲ್ಯಾಕ್‌ಹೀತ್ XI ಮತ್ತು ಲಿಥ್ಗೋ XI ನಡುವೆ ಕೌಂಟಿ ಕ್ರಿಕೆಟ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ, ಬ್ರಾಡ್‌ಮನ್ ಬಿರುಸಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ್ದರು. ಕೇವಲ ಮೂರು ಓವರ್‌ಗಳಲ್ಲಿ ಶತಕ ಸಿಡಿಸಿ ಇಡೀ ಕ್ರಿಕೆಟ್ ಲೋಕವನ್ನೇ ಚಕಿತಗೊಳಿಸಿದ್ದರು. ಮೊದಲ ಓವರ್‌ನಲ್ಲಿ 33 ರನ್, ಎರಡನೇ ಓವರ್‌ನಲ್ಲಿ 40 ಮತ್ತು ಮೂರನೇ ಓವರ್‌ನಲ್ಲಿ 27ರನ್ ಸಿಡಿಸಿ ಕೇವಲ 18 ನಿಮಿಷಗಳಲ್ಲಿ ಶತಕ ಪೂರೈಸಿದ್ದರು. ಆದ್ರೆ ಈ ಸಮಯದಲ್ಲಿ ಒಂದು ಓವರ್‌ನಲ್ಲಿ 8 ಎಸೆತಗಳಿದ್ದವು ಎಂಬುದು ಗಮನಾರ್ಹ. ಹಾಗಾಗಿ ಬ್ರಾಡ್ಮನ್ 22 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ್ದರು.
ಬ್ರಾಡ್‌ಮನ್ ಈ ಮೂರು ಓವರ್‌ಗಳಲ್ಲಿ ಸ್ಟ್ರೈಕ್ ಪಡೆಯಲೆಂದು ಕೇವಲ ಎರಡು ಸಿಂಗಲ್‌ಗಳನ್ನು ಮಾತ್ರ ತೆಗೆದುಕೊಂಡಿದ್ದರು. ಬ್ಲ್ಯಾಕ್ ಎಂಬ ಬೌಲರ್ ಎಸೆದ ಮೊದಲ ಓವರ್‌ನಲ್ಲಿ ಬ್ರಾಡ್‌ಮನ್ ಕ್ರಮವಾಗಿ 6, 6, 4, 2, 4, 4, 6, 1 ರನ್ ಗಳಿಸಿದರು. ಆ ಬಳಿಕ ಹೋರಿ ಬೇಕರ್ ಎಸೆದ 2ನೇ ಓವರ್‌ನಲ್ಲಿ 6, 4, 4, 6, 6, 4, 6, 4 ರನ್, 3ನೇ ಓವರ್‌ನಲ್ಲಿ 1, 6, 6, 1, 1, 4, 4, 6 ರನ್ ಗಳಿಸಿದರು. ಅಲ್ಲದೇ ಈ ಪಂದ್ಯದಲ್ಲಿ ಬ್ರಾಡ್ಮನ್ 14 ಸಿಕ್ಸರ್ ಮತ್ತು 29 ಬೌಂಡರಿಗಳ ಸಹಾಯದಿಂದ 256 ರನ್ ದಾಖಲಿಸಿದರು.
ಇದನ್ನೂ ಓದಿ:ಮುಂಬೈ ತೊರೆದು ಆರ್ಸಿಬಿ ಸೇರ್ತಾರಾ ಸ್ಪೋಟಕ ಬ್ಯಾಟರ್?: ಇವರು ಬಂದ್ರೆ 'ಈ ಸಲ್ ಕಪ್ ನಮ್ದೆ'!