ಲಾಹೋರ್ (ಪಾಕಿಸ್ತಾನ):ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹಾಲಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಸರದಿ ನೀತಿಯ ಅಡಿ ಏಷ್ಯನ್ ಕ್ರಿಕೆಟ್ ಮಂಡಳಿ(ಎಸಿಸಿ)ಯ ಮುಂದಿನ ಅಧ್ಯಕ್ಷರನ್ನಾಗಿ ಮಾಡಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಎಸಿಸಿ ಸಭೆಯಲ್ಲಿ ಅಧ್ಯಕ್ಷ ಸ್ಥಾನದ ವಿಷಯ ಚರ್ಚೆಯಾಗಿದ್ದು, ನಖ್ವಿ ಮುಂದಿನ ಅಧ್ಯಕ್ಷರಾಗುವ ಸ್ಪರ್ಧೆಯಲ್ಲಿದ್ದಾರೆ. ಎಸಿಸಿ ಈ ವರ್ಷದ ಕೊನೆಯಲ್ಲಿ ಸಭೆ ಸೇರಲಿದ್ದು, ಅಲ್ಲಿ ಈ ವಿಷಯದ ಬಗ್ಗೆ ನಿರ್ಧಾರವನ್ನು ಕೈಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, 2021 ರಿಂದ ಏಷ್ಯನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿದ್ದಾರೆ. ಆದರೆ, ಈ ವರ್ಷಾಂತ್ಯಕ್ಕೆ ಏಷ್ಯನ್ ಕ್ರಿಕೆಟ್ ಮಂಡಳಿಯಲ್ಲಿ ಅವರ ಅಧಿಕಾರಾವಧಿ ಮುಗಿಯಲಿದೆ.
ಎಸಿಸಿ ಇತ್ತೀಚೆಗೆ ಟಿ20 ಏಷ್ಯಾ ಕಪ್ 2025ರ ಆತಿಥ್ಯದ ಹಕ್ಕನ್ನು ಭಾರತಕ್ಕೆ ನೀಡಿದೆ ಮತ್ತು 2027ರ ಆವೃತ್ತಿಯ ಒನ್ ಡೇ ಏಷ್ಯಾ ಕಪ್ ಆತಿಥ್ಯ ಹಕ್ಕನ್ನು ಬಾಂಗ್ಲಾದೇಶಕ್ಕೆ ನೀಡಿದೆ. 2025ರ ಫೆಬ್ರವರಿ - ಮಾರ್ಚ್‌ನಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ.
ಸದ್ಯ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ ಅಥವಾ ಪಾಕಿಸ್ತಾನವು ಏಷ್ಯಾಕಪ್‌ಗಾಗಿ ಭಾರತಕ್ಕೆ ಬರಲಿದೆಯೇ ಎಂಬ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಪಾಕಿಸ್ತಾನ ಕಳೆದ ವರ್ಷ ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರವಾಸ ಕೈಗೊಂಡಿತ್ತು, ಅದಕ್ಕೂ ಮೊದಲು 2011 ರಲ್ಲಿ ಏಕದಿನ ವಿಶ್ವಕಪ್ ಮತ್ತು 2016 ರಲ್ಲಿ ಟಿ 20 ವಿಶ್ವಕಪ್‌ಗಾಗಿ ಭಾರತ ಪ್ರವಾಸ ಕೈಗೊಂಡಿತ್ತು.
ಇದನ್ನೂ ಓದಿ:ಹರ್ಮನ್ಪ್ರೀತ್ ಡಬಲ್ ಗೋಲು: ಹಾಕಿಯಲ್ಲಿ ಭಾರತಕ್ಕೆ ಮತ್ತೊಂದು ಗೆಲುವು: ಕ್ವಾರ್ಟರ್ ಪೈನಲ್ಗೆ ಮತ್ತಷ್ಟು ಸನಿಹ - Paris Olympics 2024