ಪ್ಯಾರಿಸ್(ಫ್ರಾನ್ಸ್):ಪ್ಯಾರಿಸ್ ಒಲಿಂಪಿಕ್ಸ್ನ 20 ಕಿ.ಮೀ ಪುರುಷ ಮತ್ತು ಮಹಿಳೆಯರ ರೇಸ್ ವಾಕ್ ಸ್ಪರ್ಧೆಯಲ್ಲಿ ಭಾರತ ನಿರಾಸೆ ಅನುಭವಿಸಿತು. ಇಂದು ಟ್ರೊಕಾಡೆರೊದಲ್ಲಿ ನಡೆದ ಪುರುಷರ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ವಿಕಾಸ್ ಸಿಂಗ್ 30 ಮತ್ತು ಪರಮ್‌ಜಿತ್ ಸಿಂಗ್ ಬಿಶ್ತ್ 37ನೇ ಸ್ಥಾನ ಪಡೆದರು.
ವಿಕಾಸ್ ಭಾರತದ ಬೆಸ್ಟ್ ಫಿನಿಷರ್: ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮೂವರು ಭಾರತೀಯ ಅಥ್ಲೀಟ್‌ಗಳ ಪೈಕಿ ವಿಕಾಸ್ 1:22:36 ಸಮಯದೊಂದಿಗೆ 30ನೇಯವರಾಗಿ ಗುರಿ ತಲುಪಿದರು. ಇವರು ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ 20 ಕಿ.ಮೀ ಓಟದ ರೇಸ್ ವಾಕ್ ಸ್ಪರ್ಧೆಯಲ್ಲಿ ಐದನೇ ಸ್ಥಾನ ಗಳಿಸಿದ್ದರು.
ರೇಸ್ ವಾಕ್‌ನಲ್ಲಿ ಮತ್ತೆ ಸಿಗದ ಪದಕ: ಇನ್ನು, ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಪರಮ್‌ಜೀತ್ 1:23:48 ಗುರಿ ತಲುಪಿದರು. ಆದರೆ, ರಾಷ್ಟ್ರೀಯ ದಾಖಲೆ ಹೊಂದಿರುವ ಅಕ್ಷದೀಪ್ ಸಿಂಗ್ ಕೇವಲ 6 ಕಿ.ಮೀ ದೂರದಲ್ಲಿ ಓಟದಿಂದ ಹೊರಗುಳಿದರು. ಒಲಿಂಪಿಕ್ಸ್‌ನಲ್ಲಿ ಇದುವರೆಗೂ 20 ಕಿ.ಮೀ ರೇಸ್ ವಾಕ್ ಸ್ಪರ್ಧೆಯಲ್ಲಿ ಭಾರತ ಯಾವುದೇ ಪದಕ ಗೆದ್ದಿಲ್ಲ.