ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನ ಮೊದಲ ದಿನವಾದ ನಿನ್ನೆ ಭಾರತ ಸೋಲು ಮತ್ತು ಗೆಲುವಿನ ರುಚಿ ಕಂಡಿದೆ. ಇಂದು ಕೂಟದ ಎರಡನೇ ದಿನವಾಗಿದ್ದು, ಮೊದಲ ಪದಕದ ನಿರೀಕ್ಷೆ ಇಟ್ಟುಕೊಂಡಿದೆ. ಶೂಟಿಂಗ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಟೇಬಲ್ ಟೆನ್ನಿಸ್ ಮತ್ತು ಬಿಲ್ಲುಗಾರಿಕೆಯಲ್ಲಿ ಭಾರತೀಯ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ.
ಪುರುಷರ ಸಿಂಗಲ್ಸ್ ಸ್ಕಲ್ಸ್:
- ರೆಪೆಚೇಜ್ ರೌಂಡ್ (ಬಾಲರಾಜ್ ಪನ್ವಾರ್) - ಮಧ್ಯಾಹ್ನ 12:30ಕ್ಕೆ: ಪುರುಷರ ಸಿಂಗಲ್ಸ್ ಸ್ಕಲ್‌ನ ಹೀಟ್ 1ರಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಬಲರಾಜ್ ಪನ್ವಾರ್, ರಿಪಿಚೇಜ್ ಸ್ಪರ್ಧೆಯಲ್ಲಿ ಸ್ಪರ್ಧಿಸುವರು. ಕಂಚಿನ ಪದಕ ನಿರೀಕ್ಷೆ ಜೀವಂತವಾಗಿರಿಸಲು ಪನ್ವಾರ್ ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯಬೇಕು. ಇವರು ಹೀಟ್ 1ರಲ್ಲಿ 7:07.11 ನಿಮಿಷಗಳ ಸಮಯ ಗಳಿಸಿದ್ದು, ರೋಯಿಂಗ್ ಸ್ಪರ್ಧೆಯಲ್ಲಿ ದೇಶಕ್ಕಾಗಿ ಪದಕ ಗಳಿಸಿದ ಮೊದಲ ಭಾರತೀಯ ಎನಿಸಿಕೊಳ್ಳಲು ತಮ್ಮ ಕ್ಷಮತೆಯನ್ನು ಸುಧಾರಿಸಬೇಕಿದೆ.
ಶೂಟಿಂಗ್:
- 10 ಮೀ ಏರ್ ರೈಫಲ್ (ಮಹಿಳೆಯರ ಅರ್ಹತೆ) - ಮಧ್ಯಾಹ್ನ 12:45ಕ್ಕೆ
- 10 ಮೀ ಏರ್ ಪಿಸ್ತೂಲ್ (ಪುರುಷರ ಅರ್ಹತೆ) - ಮಧ್ಯಾಹ್ನ 1ಕ್ಕೆ
- 10 ಮೀ ಏರ್ ರೈಫಲ್ (ಪುರುಷರ ಫೈನಲ್) - ಮಧ್ಯಾಹ್ನ 2:45ಕ್ಕೆ
- 10 ಮೀ ಏರ್ ಪಿಸ್ತೂಲ್ (ಮಹಿಳೆಯರ ಫೈನಲ್) - ಮಧ್ಯಾಹ್ನ 3:30ಕ್ಕೆ
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಅಂತಿಮ ಸುತ್ತು ಪ್ರವೇಶಿಸಿರುವ ಮನು ಭಾಕರ್ ಚೊಚ್ಚಲ ಪದಕ ಖಚಿತಪಡಿಸಿಕೊಳ್ಳಲು ಐತಿಹಾಸಿಕ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವಲರಿವನ್ ಎಲವೆನಿಲ್ ಮತ್ತು ರಮಿತಾ ಜಿಂದಾಲ್ 10 ಮೀಟರ್ ಏರ್ ರೈಫಲ್ ಶೂಟಿಂಗ್ ಮಹಿಳೆಯರ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಸಂದೀಪ್ ಸಿಂಗ್ ಮತ್ತು ಅರ್ಜುನ್ ಬಾಬುತಾ 10 ಮೀಟರ್ ಏರ್ ರೈಫಲ್ ಶೂಟಿಂಗ್ ಪುರುಷರ ಅರ್ಹತಾ ಸ್ಪರ್ಧೆಯಲ್ಲಿ ಸ್ಪರ್ಧಿಸುವರು. ಎರಡೂ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕದ ನಿರೀಕ್ಷೆ ಇದೆ. ಮಹಿಳೆಯರ 10 ಮೀ ಏರ್ ರೈಫಲ್ ಮತ್ತು ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗಳ ಫೈನಲ್ ಇಂದು ನಡೆಯಲಿದೆ.
ಬ್ಯಾಡ್ಮಿಂಟನ್:
- ಮಹಿಳೆಯರ ಸಿಂಗಲ್ಸ್ - ಪಿ.ವಿ.ಸಿಂಧು- ಮಧ್ಯಾಹ್ನ 12ಕ್ಕೆ
- ಪುರುಷರ ಸಿಂಗಲ್ಸ್ - ಎಚ್.ಎಸ್.ಪ್ರಣಯ್- ರಾತ್ರಿ 8.30ಕ್ಕೆ
ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಜರ್ಮನಿಯ ರೋತ್ ಫ್ಯಾಬಿಯನ್ ವಿರುದ್ಧ ಅಭಿಯಾನ ಆರಂಭಿಸಲಿದ್ದರೆ, ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ ಕಣಕ್ಕಿಳಿಯಲಿದ್ದಾರೆ.
ಟೇಬಲ್ ಟೆನ್ನಿಸ್:
- ಟೇಬಲ್ ಟೆನಿಸ್ - ಮಹಿಳೆಯರ ಸುತ್ತಿನ 64 - ಮಧ್ಯಾಹ್ನ 2:15ಕ್ಕೆ
- ಟೇಬಲ್ ಟೆನಿಸ್ - ಪುರುಷರ ಸುತ್ತಿನ 64 - ಮಧ್ಯಾಹ್ನ 3ಕ್ಕೆ
- ಟೇಬಲ್ ಟೆನಿಸ್ - ಮಹಿಳೆಯರ ಸುತ್ತಿನ 64 - ಸಂಜೆ 4:30ಕ್ಕೆ