ಕರ್ನಾಟಕ

karnataka

ಪ್ಯಾರಿಸ್ ಒಲಿಂಪಿಕ್ಸ್: ಭಾರತದ 117 ಕ್ರೀಡಾಪಟುಗಳು, 140 ಸಿಬ್ಬಂದಿಯ ಪಟ್ಟಿ ಬಿಡುಗಡೆ - Paris Olympics

By ETV Bharat Karnataka Team

Published : Jul 17, 2024, 1:45 PM IST

ಪ್ಯಾರಿಸ್ ಒಲಿಂಪಿಕ್ಸ್‌ಗೆ 117 ಭಾರತೀಯ ಕ್ರೀಡಾಪಟುಗಳು, 140 ಸಹಾಯಕ ಸಿಬ್ಬಂದಿ ಮತ್ತು ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

Indian Men's Hockey Team
ಭಾರತೀಯ ಪುರುಷರ ಹಾಕಿ ತಂಡ (IANS)

ನವದೆಹಲಿ:ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು 117 ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ. ಕೇಂದ್ರ ಕ್ರೀಡಾ ಸಚಿವಾಲಯ ಕ್ರೀಡಾಪಟುಗಳು ಜೊತೆಗೆ 140 ಸಹಾಯಕ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಒಳಗೊಂಡಿರುವ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಸ್ಪರ್ಧಾಳುಗಳ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚುವರಿಯಾಗಿ 72 ಜನರ ಪ್ರಯಾಣಕ್ಕೆ ಸರ್ಕಾರದ ವೆಚ್ಚದಲ್ಲಿ ಅನುಮೋದನೆ ನೀಡಲಾಗಿದೆ.

''2024ರ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಪ್ಯಾರಿಸ್ ಸಂಘಟನಾ ಸಮಿತಿಯ ಮಾನದಂಡಗಳ ಪ್ರಕಾರ ಕ್ರೀಡಾ ಗ್ರಾಮದಲ್ಲಿ ಉಳಿಯಲು ಅನುಮತಿಸುವ ಸಿಬ್ಬಂದಿ ಮಿತಿ 67. ಇದರಲ್ಲಿ ವೈದ್ಯಕೀಯ ತಂಡದ ಐವರು ಸದಸ್ಯರು ಒಳಗೊಂಡಂತೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ 11 ಅಧಿಕಾರಿಗಳು ಸೇರಿದ್ದಾರೆ'' ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಅವರಿಗೆ ಸಚಿವಾಲಯ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

''ಕ್ರೀಡಾಪಟುಗಳ ಅಗತ್ಯತೆಗಳನ್ನು ಪೂರೈಸಲು, ಹೆಚ್ಚುವರಿ ತರಬೇತುದಾರರು ಮತ್ತು ಇತರ ಸಹಾಯಕ ಸಿಬ್ಬಂದಿ ಸೇರಿ 72 ಜನರಿಗೆ ಸರ್ಕಾರಕ್ಕೆ ವೆಚ್ಚದಲ್ಲಿ ಅನುಮೋದಿಸಲಾಗಿದೆ. ವಾಸ್ತವ್ಯಕ್ಕಾಗಿ ಕ್ರೀಡಾ ಗ್ರಾಮದ ಹೊರಗಿನ ಹೋಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕ್ರೀಡಾಪಟುಗಳ ವಿವರ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತೆರಳುತ್ತಿರುವವರಲ್ಲಿ ಅಥ್ಲೀಟ್​​ಗಳ ಸಂಖ್ಯೆಯೇ ಹೆಚ್ಚು. 11 ಮಹಿಳೆಯರು ಮತ್ತು 18 ಪುರುಷರು ಸೇರಿ 29 ಅಥ್ಲೀಟ್​​ಗಳಿದ್ದಾರೆ. ನಂತರದ ಶೂಟಿಂಗ್ (21) ಮತ್ತು ಹಾಕಿ (19), ಟೇಬಲ್ ಟೆನಿಸ್​ನಲ್ಲಿ 8 ಆಟಗಾರರು ಪ್ರತಿನಿಧಿಸುತ್ತಾರೆ. ಬ್ಯಾಡ್ಮಿಂಟನ್​ನಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಸೇರಿದಂತೆ ಏಳು ಸ್ಪರ್ಧಿಗಳಿದ್ದಾರೆ. ಕುಸ್ತಿ, ಬಿಲ್ಲುಗಾರಿಕೆ ಮತ್ತು ಬಾಕ್ಸಿಂಗ್ ತಲಾ ಆರು ಮಂದಿ ಪ್ರತಿನಿಧಿಸಲಿದ್ದಾರೆ. ನಂತರದಲ್ಲಿ ಗಾಲ್ಫ್ (4), ಟೆನಿಸ್ (3), ಈಜು (2), ನೌಕಾಯಾನ (2) ಮತ್ತು ರೋಯಿಂಗ್ ಮತ್ತು ವೇಟ್ ಲಿಫ್ಟಿಂಗ್, ಕುದುರೆ ಸವಾರಿ, ಜೂಡೋನಲ್ಲಿ ತಲಾ ಒಬ್ಬರು ಪ್ರತಿನಿಧಿಸಲಿದ್ದಾರೆ.

ಅಭಾ ಖತುವಾ ಹೆಸರು ಕಾಣೆ:ಒಲಿಂಪಿಕ್ಸ್‌ ಭಾರತೀಯ ಕ್ರೀಡಾಪಟುಗಳಪಟ್ಟಿಯಲ್ಲಿ ಅಭಾ ಖತುವಾ ಹೆಸರು ಕಾಣೆಯಾಗಿದೆ. ಶಾಟ್​ ಪುಟ್​ನಲ್ಲಿ ಏಕೈಕ ಅರ್ಹ ಅಥ್ಲೀಟ್ ಆಗಿದ್ದರು. ವಿಶ್ವ ಶ್ರೇಯಾಂಕದ ಕೋಟಾದ ಮೂಲಕ ಅವರು ಅರ್ಹತೆ ಪಡೆದಿದ್ದರು. ಕೆಲವು ದಿನಗಳ ಹಿಂದೆ ವಿಶ್ವ ಅಥ್ಲೆಟಿಕ್ಸ್‌ನ ಒಲಿಂಪಿಕ್ ಭಾಗವಹಿಸುವವರ ಪಟ್ಟಿಯಿಂದ ಅವರ ಹೆಸರು ಕಾಣೆಯಾಗಿತ್ತು. ಈಗಲೂ ಯಾವುದೇ ವಿವರಣೆಯಿಲ್ಲದೆ ಅವರನ್ನು ಕೈಬಿಡಲಾಗಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ 119 ಕ್ರೀಡಾಪಟು ತಂಡ ಭಾರತವನ್ನು ಪ್ರತಿನಿಧಿಸಿತ್ತು. ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಐತಿಹಾಸಿಕ ಚಿನ್ನ ಗೆದ್ದಿದ್ದರು. ಒಟ್ಟಾರೆ ಏಳು ಪದಕಗಳ ಅತ್ಯುತ್ತಮ ಸಾಧನೆಯೊಂದಿಗೆ ಸ್ಪರ್ಧಾಳುಗಳು ತವರಿಗೆ ಮರಳಿದ್ದರು.

ಇದನ್ನೂ ಓದಿ:ಟೀಂ ಇಂಡಿಯಾ ಟಿ-20 ನಾಯಕತ್ವ ಕುತೂಹಲ; ಹಾರ್ದಿಕ್​ ಪಾಂಡ್ಯ ಕೈ ತಪ್ಪಿದ್ರೆ ಯಾರಿಗೆ ಚಾನ್ಸ್?

ABOUT THE AUTHOR

...view details