ದುಬೈ :ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನೂತನ ಶ್ರೇಯಾಂಕ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಭಾರತೀಯ ಕ್ರಿಕೆಟಿಗರು ಭರ್ಜರಿ ಏರಿಳಿತ ಕಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಭರ್ಜರಿ ಶತಕ ಸಿಡಿಸಿದ ರಿಷಬ್ ಪಂತ್ ಟಾಪ್ 10 ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರನ್ ಗಳಿಸಲು ಪರದಾಡಿದ ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರೀ ಇಳಿಕೆ ಕಂಡಿದ್ದಾರೆ.
ಚೆನ್ನೈನಲ್ಲಿ ನಡೆದ ಟೆಸ್ಟ್ನಲ್ಲಿ ಅಮೋಘ ಶತಕ ಸಿಡಿಸಿದ ರಿಷಬ್ ಪಂತ್ 731 ಸಂಪಾದಿಸುವ ಮೂಲಕ ಆರನೇ ಸ್ಥಾನ ಪಡೆದರೆ, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 751 ರೇಟಿಂಗ್ನೊಂದಿಗೆ ಐದನೇ ಸ್ಥಾನಕ್ಕೇರಿದರು.
ಭಾರತದ ನಾಯಕ ರೋಹಿತ್ ಶರ್ಮಾ ಎರಡು ಇನಿಂಗ್ಸ್ನಲ್ಲಿ ರನ್ ಗಳಿಸದ ಕಾರಣ, ಐದು ಸ್ಥಾನ ಕುಸಿದು ಅಗ್ರ ಹತ್ತರಲ್ಲಿದ್ದಾರೆ. ಸದ್ಯ ಅವರು 716 ರೇಟಿಂಗ್ ಹೊಂದಿದ್ದಾರೆ. ಇದಕ್ಕೂ ಮೊದಲು ಅವರು ಟಾಪ್ 5 ರಲ್ಲಿದ್ದರು. ಇನ್ನೊಬ್ಬ ಹಿರಿಯ ಆಟಗಾರ ವಿರಾಟ್ ಕೊಹ್ಲಿ 5 ಸ್ಥಾನ ಕುಸಿದು ಟಾಪ್ 10 ರಿಂದಲೇ ಹೊರಬಿದ್ದಿದ್ದಾರೆ. ಸದ್ಯ ಅವರು 709 ರೇಟಿಂಗ್ನೊಂದಿಗೆ ಶ್ರೇಯಾಂಕ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮೊದಲು ಟಾಪ್ 7ನೇ ಕ್ರಮಾಂಕದಲ್ಲಿದ್ದರು.