ಲಾಹೋರ್ (ಪಾಕಿಸ್ತಾನ): ಪ್ಯಾರಿಸ್ ಒಲಿಂಪಿಕ್ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಯಾರು ಊಹಿಸದ ಸಾಧನೆ ಮಾಡಿ ಚಿನ್ನ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ಗೆ ತವರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಪ್ಯಾರಿಸ್ನಿಂದ ಚಿನ್ನದ ಪದಕದೊಂದಿಗೆ ಹಿಂತಿರುಗಿದ ಅವರಿಗೆ ಲಾಹೋರ್ ವಿಮಾನ ನಿಲ್ದಾಣದಲ್ಲಿ ಜಲ ಫಿರಂಗಿ ಮೂಲಕ ಸ್ವಾಗತ ಕೋರಲಾಯಿತು.
ಒಲಿಂಪಿಕ್ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ 92.97 ಮೀಟರ್ ದೂರಕ್ಕೆ ಭರ್ಚಿ ಎಸೆದ ಅರ್ಷದ್ ಒಲಿಂಪಿಕ್ ಹಳೆಯ ದಾಖಲೆಯನ್ನು ಮುರಿದಿದ್ದಾರೆ. 2008ರ ಬೀಜಿಂಗ್ ಕ್ರೀಡಾಕೂಟದಲ್ಲಿ ನಾರ್ವೆಯ ಆಂಡ್ರಿಯಾಸ್ ಥೋರ್ಕಿಲ್ಡ್ಸೆನ್ ನಿರ್ಮಿಸಿದ 90.57 ಮೀಟರ್‌ಗಳ ಒಲಿಂಪಿಕ್ ದಾಖಲೆಯನ್ನು ಮುರಿದರು. ಅಲ್ಲದೆ, ಒಲಿಂಪಿಕ್ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಪಾಕಿಸ್ತಾನ ಕ್ರೀಡಾಪಟು ಎಂಬ ದಾಖಲೆಯನ್ನು ಬರೆದಿದ್ದಾರೆ. ಈ ಹಿಂದೆ 1992ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋನಲ್ಲಿ ಪಾಕಿಸ್ತಾನ ಮೊದಲ ಪದಕ ಗೆದ್ದಿತ್ತು.