ಕರ್ನಾಟಕ

karnataka

ETV Bharat / sports

ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ತೀವ್ರ ಮುಖಭಂಗ: ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು - PAK LOST AGAINST ZIMBABWE

Pakistan vs Zimbabwe: ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ.

PAKISTAN TOUR OF ZIMBABWE 2024  QUEENS SPORTS CLUB BULAWAYO  ZIMBABWE WON AGAINST PAKISTAN  ZIMBABWE VS PAKISTAN ODI SERIES
ಪಾಕಿಸ್ತಾನ ವಿರುದ್ಧ ಜಿಂಬಾಬ್ವೆಗೆ ಗೆಲುವು (X/@ZimCricketv)

By ETV Bharat Sports Team

Published : Nov 25, 2024, 8:18 AM IST

ಹರಾರೆ:ಇಲ್ಲಿನಬುಲವಾಯೊದಲ್ಲಿ ಭಾನುವಾರ ನಡೆದ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ​ 80 ರನ್‌ಗಳಿಂದ ಸೋಲು ಅನುಭವಿಸಿತು.

ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 40.2 ಓವರ್‌ಗಳಲ್ಲಿ 205 ರನ್‌ಗಳಿಗೆ ಆಲೌಟಾಯಿತು. ಪಾಕಿಸ್ತಾನ 21 ಓವರ್‌ಗಳಲ್ಲಿ 6 ವಿಕೆಟ್‌ಗೆ 60 ರನ್ ಗಳಿಸಲಷ್ಟೇ ಶಕ್ತವಾಯಿತು. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದ್ದರಿಂದ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ, ಜಿಂಬಾಬ್ವೆ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

ಜಿಂಬಾಬ್ವೆ ಉತ್ತಮ ಬ್ಯಾಟಿಂಗ್‌: 9ನೇ ಕ್ರಮಾಂಕದಲ್ಲಿ ಕ್ರೀಸಿಗೆ ಬಂದ ಬ್ಯಾಟರ್‌ ಎನ್‌ಗ್ರಾವ 48 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದರು. ಸಿಕಂದರ್ ರಾಜಾ 39 ರನ್​ ಕೊಡುಗೆ ನೀಡಿದರು.

ಪಾಕ್‌ ಬೌಲರ್‌ಗಳಾದ ಸಲ್ಮಾನ್ ಅಘಾ (3/42) ಮತ್ತು ಫೈಝಲ್ ಅಕ್ರಮ್ (3/24) ವಿಕೆಟ್ ಪಡೆದರು.

ಪಾಕ್‌ ಬ್ಯಾಟಿಂಗ್‌ ವೈಫಲ್ಯ: ಪಾಕ್​ ಪರ ಆರಂಭಿಕ ಆಟಗಾರ ಸ್ಯಾಮ್ ಅಯೂಬ್ 11, ಅಬ್ದುಲ್ಲಾ ಶಫೀಕ್ 1, ಕಮ್ರಾನ್ ಗುಲಾಮ್ 17, ಸಲ್ಮಾನ್ ಅಘಾ 4, ಹಸೀಬುಲ್ಲಾ ಖಾನ್ 0​, ಇರ್ಫಾನ್ ಖಾನ್ 7, ನಾಯಕ ರಿಜ್ವಾನ್ ಅಜೇಯ 19 ರನ್ ಗಳಿಸಿದರು.

ಜಿಂಬಾಬ್ವೆ ಪರ ಮುಜರಬಾನಿ (2/9), ಸೀನ್ ವಿಲಿಯಮ್ಸ್ (2/12) ಮತ್ತು ಸಿಕಂದರ್ ರಜಾ (2/7) ವಿಕೆಟ್ ಉರುಳಿಸಿದರು.

9 ವರ್ಷಗಳ ನಂತರ ಪಾಕ್‌ಗೆ ಸೋಲು: ಇದರೊಂದಿಗೆ ಪಾಕಿಸ್ತಾನ ಕಳೆದ 9 ವರ್ಷಗಳ ನಂತರ ಜಿಂಬಾಬ್ವೆ ವಿರುದ್ಧ ಏಕದಿನ ಪಂದ್ಯ ಸೋಲು ಅನುಭವಿಸಿತು. 2015ರಲ್ಲಿ ಕೊನೆಯ ಬಾರಿಗೆ ಜಿಂಬಾಬ್ವೆ ಪಾಕಿಸ್ತಾನವನ್ನು ಮಣಿಸಿತ್ತು. 2020ರಲ್ಲಿ ಉಭಯ ತಂಡಗಳ ನಡುವಿನ ಒಂದು ಏಕದಿನ ಪಂದ್ಯ ಟೈ ಆಗಿತ್ತು. ಇದುವರೆಗೆ ಪಾಕ್ ತಂಡ ಜಿಂಬಾಬ್ವೆಯಲ್ಲಿ 4 ಪಂದ್ಯಗಳನ್ನು ಸೋತಿದೆ.

ಇದನ್ನೂ ಓದಿ:IPL Mega Auction: 11 ಪಂದ್ಯಗಳಲ್ಲಿ ಬರೀ 9 ವಿಕೆಟ್​ ಪಡೆದ ಬೌಲರ್​ಗೆ 6 ಕೋಟಿ ಕೊಟ್ಟು ಖರೀದಿಸಿದ RCB!

ABOUT THE AUTHOR

...view details