ಕರ್ನಾಟಕ

karnataka

ETV Bharat / sports

ಕನ್ನಡಿಗನ ಸಾಧನೆಗೆ 25 ವರ್ಷ: ಅನಿಲ್​ ಕುಂಬ್ಳೆ ಎಂಬ ಬಿರುಗಾಳಿಗೆ ಕುಸಿದಿತ್ತು ಇಡೀ ಪಾಕಿಸ್ತಾನ ತಂಡ - ಕನ್ನಡಿಗನ ಸಾಧನೆಗೆ 25 ವರ್ಷ

ಪಾಕಿಸ್ತಾನವನ್ನು ಬಗ್ಗುಬಡಿದ ಕನ್ನಡಿಗ ಅನಿಲ್ ಕುಂಬ್ಳೆಯ ಸಾಧನೆಗೆ ಇದೀಗ 25 ವರ್ಷ ತುಂಬಿದೆ. 7 ಫೆಬ್ರವರಿ 1999ರಂದು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕನ್ನಡಿಗ ಸಾಧನೆ ಮರೆಯಲಾರದ ನೆನಪಾಗಿದೆ.

on this day in 1999  anil kumble became second bowler  ten wickets in test match  ಕನ್ನಡಿಗನ ಸಾಧನೆಗೆ 25 ವರ್ಷ  ಅನಿಲ್​ ಕುಂಬ್ಳೆ
ಅನಿಲ್​ ಕುಂಬ್ಳೆ ಎಂಬ ಬಿರುಗಾಳಿಗೆ ಕುಸಿದಿತ್ತು ಇಡೀ ಪಾಕಿಸ್ತಾನ ತಂಡ

By ETV Bharat Karnataka Team

Published : Feb 7, 2024, 11:31 AM IST

ಮುಂಬೈ, ಮಹಾರಾಷ್ಟ್ರ:ದಿನಾಂಕ 7, ಫೆಬ್ರವರಿ ಭಾರತೀಯ ಕ್ರಿಕೆಟ್​​ ಅಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನವನ್ನು ಅಲಂಕರಿಸಿದೆ. 25 ವರ್ಷಗಳ ಹಿಂದೆ ಇದೇ ದಿನ, ಅನಿಲ್ ಕುಂಬ್ಳೆ ಏಕಾಂಗಿಯಾಗಿ ಪಾಕಿಸ್ತಾನ ತಂಡದ ಎಲ್ಲ ವಿಕೆಟ್​ಗಳನ್ನು ಪಡೆಯುವ ಮೂಲಕ ಬೆವರಿಳಿಸಿದ್ದರು. 1999ರ ಈ ದಿನ ಅರುಣ್​ ಜೇಟ್ಲಿ (ಅಂದು ಫಿರೋಜ್ ಷಾ ಕೋಟ್ಲಾ) ಮೈದಾನದಲ್ಲಿ ಕನ್ನಿಡಿಗ ಅನಿಲ್ ಕುಂಬ್ಳೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಟೆಸ್ಟ್​ ಪಂದ್ಯದ ಒಂದೇ ಇನ್ನಿಂಗ್ಸ್​ನಲ್ಲಿ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು.

ಅನಿಲ್​ ಕುಂಬ್ಳೆ ಎಂಬ ಬಿರುಗಾಳಿಗೆ ಕುಸಿದಿತ್ತು ಇಡೀ ಪಾಕಿಸ್ತಾನ ತಂಡ

2 ಟೆಸ್ಟ್​ಗಳ ಸರಣಿಗೆ ಭಾರತ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ಮೊದಲ ಚೆನ್ನೈನಲ್ಲಿ ನಡೆದಿದ್ದ ಪಂದ್ಯವನ್ನು 12 ರನ್​ಗಳ ರೋಚಕ ಜಯ ಸಾಧಿಸಿ 1-0ಯಲ್ಲಿ ಸರಣಿ ಮುನ್ನಡೆ ಪಡೆದುಕೊಂಡಿತ್ತು. ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್​​ ಬ್ಯಾಟಿಂಗ್​ಗೆ ಇಳಿದ ಪಾಕ್ ಭಾರತ ನೀಡಿದ್ದ 420 ರನ್​ಗಳ ಗುರಿ ಬೆನ್ನಟ್ಟಿತ್ತು. 420 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನದ ಶಾಹಿದ್ ಅಫ್ರಿದಿ (41) ಮತ್ತು ಸೈಯದ್ ಅನ್ವರ್(69) ಮೊದಲ ವಿಕೆಟ್​ಗೆ 101 ರನ್​ಗಳ ಜೊತೆಯಾಟವಾಡಿದ್ದರು. ಕುಂಬ್ಳೆ ಬೌಲಿಂಗ್​ಗೆ ಇಳಿಯುವುದಕ್ಕೂ ಮೊದಲು ಪಾಕ್ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು.

ಅನಿಲ್​ ಕುಂಬ್ಳೆ ಎಂಬ ಬಿರುಗಾಳಿಗೆ ಕುಸಿದಿತ್ತು ಇಡೀ ಪಾಕಿಸ್ತಾನ ತಂಡ

25ನೇ ಓವರ್​ನಲ್ಲಿ ದಾಳಿಗೆ ಇಳಿದ ಅನಿಲ್ ಕುಂಬ್ಳೆ, ಆಫ್ರಿದಿಯನ್ನ ಔಟ್ ಮಾಡಿದ್ರು. ಅಲ್ಲಿಂದ ಪಾಕ್ ಆಟಗಾರರ ಪೆವಿಲಿಯನ್ ಪರೇಡ್ ಆರಂಭವಾಯ್ತು. 101/0 ಇದ್ದ ಪಾಕಿಸ್ತಾನ 128 ರನ್​ ಗಳಿಸುವಷ್ಟರಲ್ಲಿ ಪ್ರಮುಖ 6 ವಿಕೆಟ್​ಗಳನ್ನ ಕಳೆದುಕೊಂಡಿತು. ನಂತರ ವಾಸೀಂ ಅಕ್ರಮ್(37) ಮತ್ತು ಮಲಿಕ್​(15) 58 ರನ್​ಗಳ ಜೊತೆಯಾಟ ನಡೆಸಿ ವಿಕೆಟ್​ಗಳ ಪತನಕ್ಕೆ ಬ್ರೇಕ್ ನೀಡಿ ತಂಡದ ಮೊತ್ತವನ್ನು 186ಕ್ಕೆ ಕೊಂಡೊಯ್ದಿದ್ದರು.

ಮಲಿಕ್​ ವಿಕೆಟ್ ಪಡೆದು ಬ್ರೇಕ್ ನೀಡಿದ ಕುಂಬ್ಳೆ ಪಂದ್ಯದ 61ನೇ ಓವರ್​ನಲ್ಲಿ ವಾಸೀಂ ಅಕ್ರಮ್ ವಿಕೆಟ್ ಪಡೆಯುವ ಮೂಲಕ ಎಲ್ಲ 10 ವಿಕೆಟ್​ ಪಡೆದು ದಾಖಲೆ ನಿರ್ಮಿಸಿದರು. ಅನಿಲ್ ಕುಂಬ್ಳೆ ಎಂಬ ಬಿರುಗಾಳಿಗೆ ಇಡೀ ತಂಡ 207 ರನ್ ಗಳಿಗೆ ಕುಸಿದಿತ್ತು. ಇನ್ನಿಂಗ್ಸ್​ ಒಂದರ 10 ವಿಕೆಟ್​​ ಪಡೆದ ವಿಶ್ವದ 2ನೇ ಆಟಗಾರ ಎಂಬ ಕೀರ್ತಿಗೆ ಕನ್ನಡಿಗ ಪಾತ್ರರಾದ್ರು. ಕುಂಬ್ಳೆಗೂ ಮೊದಲು ಇಂಗ್ಲೆಂಡ್​ನ ಆಟಗಾರ ಜಿಮ್ ಲೇಕರ್ ಈ ಸಾಧನೆ ಮಾಡಿದ್ದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ 212ರನ್​ಗಳ ಅಂತರದಲ್ಲಿ ಬೃಹತ್ ಜಯ ಸಾಧಿಸಿತು. ಕನ್ನಡಿಗ ಅನಿಲ್​ ಕುಂಬ್ಳೆ 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ ಪಡೆದು ಭಾರತದ ಗರಿಷ್ಠ ಹಾಗೂ ವಿಶ್ವದ 4ನೇ ಗರಿಷ್ಠ ವಿಕೆಟ್ ಪಡೆದ ಬೌಲರ್​ ಆಗಿದ್ದಾರೆ. ಇನ್ನು ಕನ್ನಡಿಗ ಅನಿಲ್​ ಕುಂಬ್ಳೆ ಸಾಧನೆಯ ವಿಡಿಯೋವನ್ನು ಬಿಸಿಸಿಐ ಹಂಚಿಕೊಳ್ಳುವ ಮೂಲಕ ಗೌರವ ಸೂಚಿಸಿದೆ.

ಓದಿ:U19 ವರ್ಲ್ಡ್ ಕಪ್ 2024: ಭಾರತದ ಪರ ಅತಿ ಹೆಚ್ಚು ರನ್​​​​​​​​​​​​​​​​​​​​​​​​​​ ಗಳಿಸಿದ್ಯಾರು ಗೊತ್ತಾ?

ABOUT THE AUTHOR

...view details