ನವದೆಹಲಿ: ಪ್ಯಾರಿಸ್ ಒಲಿಂಪಿಕ್ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಇದೀಗ ಡೈಮಂಡ್ ಲೀಗ್ಗಾಗಿ ತಯಾರಿ ನಡೆಸುತ್ತಿದ್ದಾರೆ. ಇದಕ್ಕಾಗಿ ಸ್ವಿಟ್ಜರ್ಲೆಂಡ್‌ಗೆ ತೆರಳಿದ್ದಾರೆ. ಇದೇ ತಿಂಗಳು ಆಗಸ್ಟ್ 22ರಿಂದ ಲೌಸನ್ನೆಯಲ್ಲಿ ಆರಂಭಗೊಳ್ಳುತ್ತಿರುವ ಡೈಮಂಡ್ ಲೀಗ್ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸುವುದಾಗಿಯೂ ನೀರಜ್ ಚೋಪ್ರಾ ತಿಳಿಸಿದ್ದಾರೆ.
ಇತ್ತೀಚಿಗೆ ಪ್ಯಾರಿಸ್ನಲ್ಲಿ ನಡೆದ ಒಲಿಂಪಿಕ್ ವೇಳೆ ಗಾಯಗೊಂಡಿದ್ದರೂ ಅದು ಉಲ್ಬಣಗೊಳ್ಳದಂತೆ ಎಚ್ಚರ ವಹಿಸಿದ್ದೇನೆ ಎಂದು ಚೋಪ್ರಾ ತಿಳಿಸಿದ್ದಾರೆ. 'ಒಲಿಂಪಿಕ್ ನಂತರ ನಾನು ನನ್ನ ಆಟವನ್ನು ವಿಸ್ತರಿಸಬೇಕು ಎಂದು ಭಾವಿಸಿದ್ದೇನೆ. ಹಾಗಾಗಿ ಮುಂಬರುವ ಪ್ರಮುಖ ಲೀಗ್ಗಳಲ್ಲಿ ಭಾಗಿಯಾಗಲು ನಿರ್ಧರಿಸಿದ್ದೇನೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದೇನೆ ಎಂದಿದ್ದಾರೆ.
90 ಮೀಟರ್ ಗುರಿಯ ಬಗ್ಗೆ ಕೇಳಿದಾಗ, "ನಾನು ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದ್ದೇನೆ, ಇದೇ ಪ್ಯಾರಿಸ್ ಒಲಿಂಪಿಕ್ನಲ್ಲಿ 90 ಮೀಟರ್ ಗುರಿಯನ್ನು ದಾಟಬಹುದೆಂದು ಭಾವಿಸಿದ್ದೆ. ಆದ್ರೆ ಈ ಲೀಗ್ನಲ್ಲಿ ಆಗಬಹುದೆಂದು ನಾನು ಭಾವಿಸಿದ್ದೇನೆ. 'ಈಗ ನಾನು ಮುಂದಿನ ಎರಡು ಅಥವಾ ಮೂರು ಸ್ಪರ್ಧೆಗಳಲ್ಲಿ 100 ಪ್ರತಿಶತದಷ್ಟು ಎಲ್ಲಾ ಪ್ರಯತ್ನ ಮಾಡಲಿದ್ದೇನೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಸಮಯದಲ್ಲಿ, ನನ್ನ ನ್ಯೂನತೆಗಳನ್ನು ಸುಧಾರಿಸುವಲ್ಲಿ ಹೆಚ್ಚಿನ ಗಮನ ಹರಿಸಲಿದ್ದೇನೆ ಎಂದು ತಿಳಿಸಿದ್ದಾರೆ.