ನವದೆಹಲಿ: 17 ವರ್ಷಗಳ ಹಿಂದೆ ಇದೇ ದಿನದಂದು ಟೀಂ ಇಂಡಿಯಾ, ಕ್ರಿಕೆಟ್ನಲ್ಲಿ ಹೊಸ ಇತಿಹಾಸವೊಂದನ್ನು ಸೃಷ್ಟಿಸಿತ್ತು. ಬರೋಬ್ಬರಿ 24 ವರ್ಷಗಳ ಬಳಿಕ ಈ ದಿನದಂದ ಟೀಂ ಇಂಡಿಯಾ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕೇರಿತ್ತು.
ಹೌದು, 2007ರಲ್ಲಿ ಈ ದಿನ ಭಾರತ ಕ್ರಿಕೆಟ್ ತಂಡ ಐಸಿಸಿ ಟಿ20 ವಿಶ್ವಕಪ್ ಮೊದಲ ಋತುವಿನಲ್ಲೇ ಎಂಎಸ್ ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದುಕೊಂಡಿತ್ತು. ಫೈನಲ್ ಪಂದ್ಯದಲ್ಲಿ ಮೆನ್ ಇನ್ ಬ್ಲೂ ಪಾಕಿಸ್ತಾನವನ್ನು ಸೋಲಿಸಿ 24 ವರ್ಷಗಳ ಬಳಿಕ ಎರಡನೇ ವಿಶ್ವಕಪ್ ಗೆದ್ದುಕೊಂಡಿತ್ತು. ಮತ್ತೊಂದು ವಿಶೇಷವೆಂದರೆ ಧೋನಿ ಅವರ ನಾಯಕತ್ವದಲ್ಲಿ ಭಾರತ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿಕೊಂಡಿತ್ತು. ಆದರೆ ಇದಕ್ಕೂ ಮುನ್ನ ವಿಶ್ವಕಪ್ ವಿಜೇತ ತಂಡವನ್ನು ಘೋಷಿಸಲು ಬೌಲ್ ಔಟ್ ಓವರ್ (ಬೌಲಿಂಗ್ ಮೂಲಕ ವಿಕೆಟ್ ಉರುಳಿಸುವುದು) ನಡೆಸಲಾಗಿತ್ತು. ರೋಚಕತೆಯಿಂದ ಕೂಡಿದ ಈ ಪಂದ್ಯದಲ್ಲಿ ಪಾಕಿಸ್ತಾನ ಅಗ್ರ ಬೌಲರ್ಗಳು ಹಿನ್ನಡೆ ಅನುಭವಿಸಿದ್ದರು.
ಹೀಗಿತ್ತು ಬೌಲ್ ಔಟ್ ಓವರ್: ಭಾರತ ಬೌಲ್ ಔಟ್ನಲ್ಲಿ ಪಾಕಿಸ್ತಾನವನ್ನು ಅದ್ಭುತವಾಗಿ ಮಣಿಸಿತ್ತು. ಭಾರತದ ಪರ ಮೊದಲು ಬೌಲಿಂಗ್ ಮಾಡಿದ್ದ ವೀರೇಂದ್ರ ಸೆಹ್ವಾಗ್ ಬೌಲ್ ಔಟ್ ಮಾಡಿ ಮೊದಲ ಅಂಕವನ್ನು ಕಲೆಹಾಕಿದ್ದರು. ಬಳಿಕ ಪಾಕ್ ಪರ ಯಾಸಿರ್ ಅರಾಫತ್ ಮೊದಲ ಬೌಲಿಂಗ್ ಅವಕಾಶ ಪಡೆದುಕೊಂಡು ಬೌಲ್ಔಟ್ ಮಾಡುವಲ್ಲಿ ವಿಫಲರಾದರು. ಇದಾದ ಬಳಿಕ ಮತ್ತೊಮ್ಮೆ ಭಾರತದ ಸರದಿ ಬಂದಿದ್ದು, ಈ ಬಾರಿ ಸ್ಪಿನ್ನರ್ ಹರ್ಭಜನ್ ಸಿಂಗ್ ಸುಲಭವಾಗಿ ಸ್ಟಂಪ್ ಉರುಳಿಸಿ ಎರಡನೇ ಅಂಕಗಳಿಸಿದರು. ಆದರೆ ಎದುರಾಳಿ ತಂಡದ ವೇಗದ ಬೌಲರ್ ಉಮರ್ ಗುಲ್ ಕೂಡ ಅಂಕಗಳಿಸುವಲ್ಲಿ ವಿಫಲರಾದರು.