ಕರ್ನಾಟಕ

karnataka

ETV Bharat / sports

ಕೊಹ್ಲಿ ಕ್ಯಾಪ್ಟನ್‌ ಆಗಿರುತ್ತಿದ್ದರೆ ಭಾರತ ಮೊದಲ ಟೆಸ್ಟ್‌ ಸೋಲುತ್ತಿರಲಿಲ್ಲ: ಮೈಕಲ್​ ವಾನ್​ - Virat Kohli ​

ಟೆಸ್ಟ್​ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ ನಾಯಕತ್ವದ ಕುರಿತು ಇಂಗ್ಲೆಂಡ್​ ತಂಡದ ಮಾಜಿ ಕ್ಯಾಪ್ಟನ್​ ಮೈಕಲ್ ವಾನ್ ಗುಣಗಾನ ಮಾಡಿದ್ದಾರೆ.

ಇಂಗ್ಲೆಂಡ್​ ಮಾಜಿ ನಾಯಕ ಮೈಕೆಲ್ ವಾನ್
ಇಂಗ್ಲೆಂಡ್​ ಮಾಜಿ ನಾಯಕ ಮೈಕೆಲ್ ವಾನ್

By PTI

Published : Feb 1, 2024, 8:54 AM IST

ಲಂಡನ್:ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ನಾಯಕನಾಗಿರುತ್ತಿದ್ದರೆ ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಸೋಲುತ್ತಿರಲಿಲ್ಲ. ರೋಹಿತ್​ ಶರ್ಮಾ ಆಟದ ಸಮಯದಲ್ಲಿ ಸಂಪೂರ್ಣವಾಗಿ 'ಸ್ವಿಚ್ ಆಫ್' ಆಗಿರುವಂತೆ ಕಂಡುಬಂತು ಎಂದು ಇಂಗ್ಲೆಂಡ್​ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಭಾರತ 190 ರನ್​ಗಳ ಮುನ್ನಡೆ ಸಾಧಿಸಿತ್ತು. ಆದರೆ ತಂಡದಲ್ಲಿ ವಿರಾಟ್​ ಕೊಹ್ಲಿ ಇಲ್ಲದೇ ಇರುವ ಕಾರಣಕ್ಕೆ 28 ರನ್​ಗಳಿಂದ ಸೋಲು ಅನುಭವಿಸಬೇಕಾಯಿತು. ಹೀಗಾಗಿ ಐದು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್​ 1-0 ಮುನ್ನಡೆ ಪಡೆದುಕೊಂಡಿದೆ. ವೈಯಕ್ತಿಕ ಕಾರಣಗಳಿಂದ ಕೊಹ್ಲಿ ಆರಂಭಿಕ ಮೊದಲೆರಡು ಪಂದ್ಯಗಳಿಂದ ದೂರ ಉಳಿದಿದ್ದಾರೆ. ಸದ್ಯದ ಭಾರತ ತಂಡ ಕೊಹ್ಲಿಯ ನಾಯಕತ್ವವನ್ನು ಕಳೆದುಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅವರು ನಾಯಕತ್ವ ವಹಿಸಿದ್ದರೆ ಬಹುಶ: ಮೊದಲ ಟೆಸ್ಟ್​ ಪಂದ್ಯವನ್ನು ಭಾರತ ಕಳೆದುಕೊಳ್ಳುತ್ತಿರಲಿಲ್ಲ ಎಂದು ಸಂದರ್ಶನವೊಂದರಲ್ಲಿ ವಾನ್​ ಅಭಿಪ್ರಾಯಪಟ್ಟರು.​

ರೋಹಿತ್ ಶರ್ಮಾ​ ನಾಯಕತ್ವವನ್ನು ಟೀಕಿಸಿರುವ ವಾನ್​, "ರೋಹಿತ್​ ಶರ್ಮಾ ಒಬ್ಬ ಶ್ರೇಷ್ಠ ಆಟಗಾರ. ಆದರೆ ಅವರು ಪಂದ್ಯದಲ್ಲಿ ಸಂಪೂರ್ಣವಾಗಿ ಸ್ವಿಚ್​ ಆಪ್​ ಆಗುತ್ತಾರೆ ಎಂದೇ ನಾನು ಭಾವಿಸುತ್ತೇನೆ. ಮೊದಲ ಟೆಸ್ಟ್​ ಪಂದ್ಯದಲ್ಲಿ ಆರಂಭಿಕನಾಗಿ ಬ್ಯಾಟಿಂಗ್​ ಇಳಿಯುವ ಮುನ್ನ ರೋಹಿತ್​ ಶರ್ಮಾ ಪೂರ್ವ ತಯಾರಿ ನಡೆಸಿಲ್ಲ ಎಂಬುದು ಕಂಡುಬಂತು. ರೋಹಿತ್​ ತಮ್ಮ ನಾಯಕತ್ವದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಲ್ಲ. ಬೌಲಿಂಗ್​ ಬದಲಾವಣೆ ಮಾಡುವಲ್ಲೂ ಅವರು ಎಡವಿದ್ದಾರೆ. ಓಲಿ ಪೋಪ್​ ಹೊಡೆಯುತ್ತಿದ್ದ ಸ್ವೀಪ್ ಶಾಟ್​ಗಳಿಗೆ ಭಾರತದ ಬೌಲಿಂಗ್​ನಲ್ಲಿ ಉತ್ತರವಿರಲಿಲ್ಲ" ಎಂದು ವಿಶ್ಲೇಷಿಸಿದರು.

2022ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದರು. ಈ ಸಮಯದಲ್ಲಿ ಟೀಮ್​ ಇಂಡಿಯಾ ವಿಶ್ವ ನಂ.1 ಐಸಿಸಿ ಶ್ರೇಯಾಂಕ ತಲುಪಿತ್ತು.

ಇದನ್ನೂ ಓದಿ:ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ಅಧ್ಯಕ್ಷರಾಗಿ ಜಯ್​ ಶಾ ಮರು ನೇಮಕ: ಒಂದು ವರ್ಷದ ವರೆಗೆ ಅಧಿಕಾರಾವಧಿ ವಿಸ್ತರಣೆ

ABOUT THE AUTHOR

...view details