ಕರ್ನಾಟಕ

karnataka

ETV Bharat / sports

ಅಚ್ಚರಿ!: ನಾಯಕ ರೋಹಿತ್​ ಶರ್ಮಾಗೇ ತಂಡದಲಿಲ್ಲ ಸ್ಥಾನ; ಹೀಗಿದೆ ಅಂತಿಮ ತಂಡ!

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 3ನೇ ಟೆಸ್ಟ್​ ಪಂದ್ಯಕ್ಕೂ ಮುನ್ನವೇ ದಿಗ್ಗಜ ಕ್ರಿಕೆಟರ್ ಉಭಯ ತಂಡ ಆಟಗಾರರನ್ನೊಳಗೊಂಡ ತಂಡ ಪ್ರಕಟಿಸಿದ್ದಾರೆ. ​

MICHAEL CLARKE  AUS VS IND PLAYING XI  BORDER GAVASKAR TROPHY  INDIA VS AUSTRALIA 3RD TEST
Rohit Sharma (Source AFP)

By ETV Bharat Sports Team

Published : 6 hours ago

India and Australi Playing XI: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್​ ಸರಣಿ ನಡೆಯುತ್ತಿದೆ. ಪರ್ತ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 295 ರನ್‌ಗಳಿಂದ ಗೆಲುವಿನ ನಗಾರಿ ಭಾರಿಸಿದ್ಧ ಟೀಂ ಇಂಡಿಯಾ, ಅಡಿಲೇಡ್​ನಲ್ಲಿ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿತ್ತು.

ಇದೀಗ ಮೂರನೇ ಪಂದ್ಯಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಉಭಯ ತಂಡಗಳ ನಡುವಿನ ಮೂರನೇ ಪಂದ್ಯ ಡಿಸೆಂಬರ್ 14 ರಂದು ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ 2015ರ ವಿಶ್ವಕಪ್​ ವಿಜೇತ ತಂಡದ ನಾಯಕಾರಗಿದ್ದ ಮೈಕಲ್ ಕ್ಲಾರ್ಕ್ ಉಭಯ ತಂಡಗಳನ್ನೊಳಗೊಂಡ 21ನೇ ಶತಮಾನದ ಪ್ಲೇಯಿಂಗ್​ XI ತಂಡವನ್ನು ಹೆಸರಿಸಿದ್ದಾರೆ.

ಕ್ಲಾರ್ಕ್​ ಹೆಸರಿಸಿದ ತಂಡದಲ್ಲಿ, ರೋಹಿತ್​ ಶರ್ಮಾ ಸೇರಿದಂತೆ, ದಿಗ್ಗಜ ಸ್ಪಿನ್ನರ್‌ಗಳಾದ ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಮತ್ತು ಆರ್.ಅಶ್ವಿನ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಕ್ಲಾರ್ಕ್ ಅವರು ವೀರೇಂದ್ರ ಸೆಹ್ವಾಗ್ ಮತ್ತು ಮ್ಯಾಥ್ಯೂ ಹೇಡನ್ ಅವರನ್ನು ಆರಂಭಿಕರಾಗಿ ಆಯ್ಕೆ ಮಾಡಿದ್ದಾರೆ.

ಮೂರನೇ ಸ್ಥಾನದಲ್ಲಿ ರಿಕಿ ಪಾಂಟಿಂಗ್, ನಾಲ್ಕನೇ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಐದನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿಯನ್ನು ಹೆಸರರಿಸಿದ್ದಾರೆ. ಸ್ಟೀವ್ ಸ್ಮಿತ್ ಆರನೇ ಸ್ಥಾನದಲ್ಲಿದ್ದಾರೆ. ಆ್ಯಡಮ್ ಗಿಲ್‌ಕ್ರಿಸ್ಟ್ ಅವರನ್ನು ವಿಕೆಟ್ ಕೀಪರ್ ಆಗಿ ಕ್ಲಾರ್ಕ್ ಆಯ್ಕೆ ಮಾಡಿದ್ದಾರೆ. ಜತಗೆ ಎಮ್​ ಎಸ್​ ಧೋನಿ ಅವರನ್ನು ತಂಡದಲ್ಲಿ ತೆಗೆದುಕೊಂಡಿದ್ದಾರೆ. ಬೌಲಿಂಗ್​ ವಿಭಾಗದಲ್ಲಿ, ಜಸ್ಪ್ರೀತ್​ ಬುಮ್ರಾ, ಶೇನ್​ ವಾರ್ನ್​, ರಯಾನ್​ ಹ್ಯಾರಿಸ್​, ಗ್ಲೆನ್​ ಮೆಕ್​ಗ್ರಾತ್​ ಅವರನ್ನು ಆಯ್ಕೆ ಮಾಡಿದ್ದಾರೆ.

ಮೈಕೆಲ್​ ಕ್ಲಾರ್ಕ್​ ದಾಖಲೆ: ಆಸ್ಟ್ರೇಲಿಯಾದ ಮಾಜಿ ನಾಯಕರಾಗಿದ್ದ ಕ್ಲಾರ್ಕ್​, ಎಲ್ಲಾ ಮೂರು ಸ್ವರೂಪಗಳಲ್ಲಿ 394 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್​ ಸ್ವರೂಪದಲ್ಲಿ 115 ಪಂದ್ಯಗಳನ್ನು ಆಡಿ 8643 ರನ್​ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ, 4 ದ್ವಿಶತಕ, 28 ಶತಕ ಮತ್ತು 27 ಅರ್ಧಶತಕಗಳು ಸೇರಿವೆ. 329 ಹೈಸ್ಕೋರ್​ ಆಗಿದೆ. 245 ಏಕದಿನ ಪಂದ್ಯಗಳನ್ನು ಆಡಿರುವ ಕ್ಲಾರ್ಕ್​, 8 ಶತಕ, 58 ಅರ್ಧಶತಕ ಸಹಾಯದಿಂದ 7981ರನ್​ ಗಳಿಸಿದ್ದಾರೆ. 130 ಹೈಸ್ಕೋರ್​ ಆಗಿದೆ. 34 ಟಿ20 ಪಂದ್ಯಗಳನ್ನು ಆಡಿ 473 ರನ್​ ಗಳಿಸಿದ್ದಾರೆ.

ವಿಶ್ವಕಪ್​ ವಿಜೇತ ನಾಯಕ:ಮೈಕೆಲ್​ ಕ್ಲಾರ್ಕ್​ ಆಸ್ಟ್ರೇಲಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. 2015ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಿ ಚಾಂಪಿಯನ್​ ಪಟ್ಟಕ್ಕೆ ಕೊಂಡೊಯ್ದಿದ್ದರು. ಇದರೊಂದಿಗೆ ಆಸ್ಟ್ರೇಲಿಯಾ 4ನೇ ಬಾರಿಗೆ ಚಾಂಪಿಯನ್​ ಆಗಿತ್ತು.

ಇದನ್ನೂ ಓದಿ:ಅಶಿಸ್ತಿನ ವರ್ತನೆ: ಸ್ಟಾರ್​ ಆಟಗಾರನನ್ನು ಹೋಟೆಲ್​​ನಲ್ಲೇ ಬಿಟ್ಟು ಹೋದ ಟೀಂ ಇಂಡಿಯಾ ಬಸ್​​!

ABOUT THE AUTHOR

...view details