ಕರ್ನಾಟಕ

karnataka

ETV Bharat / sports

ವ್ಹೀಲ್​ಚೇರ್‌ನಲ್ಲಿ ಪಂದ್ಯ ವೀಕ್ಷಿಸಲು ಬಂದ ದಿವ್ಯಾಂಗ ಬಾಲಕಿಗೆ ಮೊಬೈಲ್ ಗಿಫ್ಟ್​ ಕೊಟ್ಟ ಮಂಧಾನ - Mandhana Meets Specially Abled Fan - MANDHANA MEETS SPECIALLY ABLED FAN

ಟಿ-20 ಏಷ್ಯಾಕಪ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರು ದಿವ್ಯಾಂಗ ಬಾಲಕಿಗೆ ಮೊಬೈಲ್ ಫೋನ್ ಗಿಫ್ಟ್​ ಕೊಟ್ಟರು.

ದಿವ್ಯಾಂಗ ಬಾಲಕಿಗೆ ಮೊಬೈಲ್ ಅನ್ನು ಸ್ಮೃತಿ ಮಂಧಾನ ಗಿಫ್ಟ್​ ಮಾಡಿದರು.
ದಿವ್ಯಾಂಗ ಬಾಲಕಿಗೆ ಮೊಬೈಲ್ ಗಿಫ್ಟ್‌ ಕೊಟ್ಟ ಸ್ಮೃತಿ ಮಂಧಾನ (@OfficialSLC)

By PTI

Published : Jul 21, 2024, 10:46 AM IST

ಡಂಬುಲ್ಲಾ(ಶ್ರೀಲಂಕಾ):ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ-20 ಏಷ್ಯಾಕಪ್ ಟೂರ್ನಿಯ ಪಂದ್ಯ ವೀಕ್ಷಣೆಗೆ ವ್ಹೀಲ್​ಚೇರ್​ನಲ್ಲಿ ಬಂದಿದ್ದ ದಿವ್ಯಾಂಗ ಬಾಲಕಿಯೊಬ್ಬಳಿಗೆ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದರು.

ಇಲ್ಲಿನ ಡಂಬುಲ್ಲಾ ಸ್ಟೇಡಿಯಂನಲ್ಲಿ ಶುಕ್ರವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಿತು. ಈ ಪಂದ್ಯ ನೋಡಲು ಗಾಲಿಕುರ್ಚಿಯಲ್ಲಿ ದಿವ್ಯಾಂಗ ಬಾಲಕಿ ಆದೀಶಾ ಹೆರಾತ್ ತನ್ನ ತಾಯಿಯೊಂದಿಗೆ ಬಂದಿದ್ದಳು. ಪಂದ್ಯ ಮುಗಿದ ಬಾಲಕಿಯನ್ನು ಭೇಟಿಯಾದ ಮಂಧಾನ, ಮೊಬೈಲ್ ಫೋನ್ ಉಡುಗೊರೆಯಾಗಿ ಕೊಟ್ಟರು. ಮೊಬೈಲ್​ ನೀಡುತ್ತಿದ್ದಂತೆ ಬಾಲಕಿ ಮೊಗದಲ್ಲಿ ಮಂದಹಾಸ ಮೂಡಿತು. ಈ ವಿಶೇಷ ಕ್ಷಣದ ವಿಡಿಯೋವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಾಮಾಜಿಕ ಜಾಲತಾಣ 'ಎಕ್ಸ್​' ಖಾತೆಯಲ್ಲಿ ಹಂಚಿಕೊಂಡಿದೆ.

''ಆದೀಶಾ ಹೆರಾತ್ ಕ್ರಿಕೆಟ್ ಪ್ರೀತಿ ಎಲ್ಲ ದೈಹಿಕ ಸವಾಲುಗಳ ನಡುವೆಯೂ ಆಕೆಯನ್ನು ಕ್ರೀಡಾಂಗಣಕ್ಕೆ ಕರೆತಂದಿದೆ'' ಎಂದು ಶ್ರೀಲಂಕಾ ಕ್ರಿಕೆಟ್ ತನ್ನ ಟ್ವೀಟ್ ಜೊತೆಗೆ ವಿಡಿಯೋ ಪೋಸ್ಟ್ ಮಾಡಿದೆ.

ಈ ವಿಡಿಯೋದಲ್ಲಿ ಮಂಧಾನ ಸಂತೋಷದಿಂದ ಬಾಲಕಿಯೊಂದಿಗೆ ಮಾತನಾಡುವುದನ್ನು ನೋಡಬಹುದು. ''ನಿಮ್ಮ ಹೆಸರೇನು?, ಕ್ರಿಕೆಟ್ ಇಷ್ಟನಾ?. ನೀವು ಇಂದಿನ ಪಂದ್ಯವನ್ನು ಆನಂದಿಸಿದ್ದೀರಾ?. ನಾನು ನಿಮಗಾಗಿ ಉಡುಗೊರೆ ತಂದಿದ್ದೇನೆ'' ಎಂದು ಹೇಳಿ, ಹೈ-ಫೈವ್ ಮಾಡಿ, ಫೋಟೋಗೆ ಪೋಸ್ ಕೊಟ್ಟರು.

ಇದರಿಂದ ಬಾಲಕಿ ಹಾಗೂ ಆಕೆಯ ತಾಯಿ ಹರ್ಷಗೊಂಡರು. ''ಮಗಳು ಪಂದ್ಯ ನೋಡಲು ಇಚ್ಛಿಸಿದ್ದರಿಂದ ಅನಿರೀಕ್ಷಿತವಾಗಿ ನಾವು ಇಲ್ಲಿಗೆ ಬಂದೆವು. ನಾವು ಭಾರತ ತಂಡದ ಮಂಧಾನ ಮೇಡಂ ಅವರನ್ನು ಭೇಟಿ ಮಾಡಿದ್ದೇವೆ. ನನ್ನ ಮಗಳು ಅವರಿಂದ ಫೋನ್ ಪಡೆದಳು. ಇದು ನಿಜಕ್ಕೂ ಅನಿರೀಕ್ಷಿತ ಕ್ಷಣ. ಈ ಉಡುಗೊರೆ ಸ್ವೀಕರಿಸಿದ ನನ್ನ ಮಗಳು ತುಂಬಾ ಅದೃಷ್ಟಶಾಲಿ'' ಎಂದು ತಾಯಿ ಹೇಳಿದರು.

ಶುಕ್ರವಾರದ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಇಂದು ಎರಡನೇ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ಸೆಣಸಲಿದೆ. ಈ ಪಂದ್ಯ ಗೆದ್ದರೆ, ಸೆಮಿಫೈನಲ್​ ಪ್ರವೇಶಿಸಲಿದೆ.

ಇದನ್ನೂ ಓದಿ:ಮಹಿಳಾ ಏಷ್ಯಾಕಪ್‌ನಲ್ಲಿಂದು ಇಂಡಿಯಾ vs 'ಮಿನಿ ಇಂಡಿಯಾ'; ಗಾಯಾಳು ಶ್ರೇಯಾಂಕಾ ಔಟ್

ABOUT THE AUTHOR

...view details