ಕರ್ನಾಟಕ

karnataka

ETV Bharat / sports

ಆಸೀಸ್​​ ಬ್ಯಾಟರ್​ಗಳ ಚೆಂಡಾಡುತ್ತಿರುವ ಜಸ್ಪ್ರೀತ್​ ಬೂಮ್ರಾಗೆ__ಎಂದು ನಿಂದಿಸಿದ ಮಹಿಳಾ ಕಾಮೆಂಟೇಟರ್​! - JASPRIT BUMRAH

ಮೂರನೇ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾ ಬ್ಯಾಟರ್​ಗಳನ್ನು ಕಾಡುತ್ತಿರುವ ಭಾರತದ ಜಸ್ಪ್ರೀತ್​​ ಬುಮ್ರಾಗೆ ಮಹಿಳಾ ಕಾಮೆಂಟೇಟರ್​​ ಒಬ್ಬರು ಆಕ್ಷೇಪಾರ್ಹ ಪದಗಳಿಂದ ನಿಂದಿಸಿದ ಆರೋಪ ಕೇಳಿಬಂದಿದೆ.

ಜಸ್ಪ್ರೀತ್​ ಬೂಮ್ರಾ
ಜಸ್ಪ್ರೀತ್​ ಬೂಮ್ರಾ (AP)

By ETV Bharat Karnataka Team

Published : Dec 15, 2024, 10:58 PM IST

ಆಸ್ಪ್ರೇಲಿಯಾ ಮತ್ತು ಭಾರತದ ನಡುವಿನ ಸರಣಿ ಎಂದಿಗೂ ಜಿದ್ದಾಜಿದ್ದಿಯಿಂದ ಕೂಡಿರುತ್ತದೆ. ಅಲ್ಲಿ, ತೆಗಳಿಗೆ, ಆಟಗಾರರು ಒಬ್ಬರನ್ನೊಬ್ಬರು ಕಿಚಾಯಿಸುವುದು ಸರ್ವೇ ಸಾಮಾನ್ಯ. ಈ ಹಿಂದಿನ ಬಾರ್ಡರ್​- ಗವಾಸ್ಕರ್​ ಟೆಸ್ಟ್​ ಸರಣಿಗಳಲ್ಲೂ ದೊಡ್ಡ ವಿವಾದಗಳು ಸೃಷ್ಟಿಯಾಗಿದ್ದು ಇತಿಹಾಸದ ಪುಟಗಳಲ್ಲಿವೆ.

ಸದ್ಯ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲೂ ಅಂಥದ್ದೊಂದು ದೊಡ್ಡ ಆರೋಪ ಕೇಳಿಬಂದಿದೆ. ಆಸೀಸ್​ ಬ್ಯಾಟರ್​ಗಳನ್ನು ತಮ್ಮ ಉರಿಚೆಂಡಿನ ಮೂಲಕ ಚೆಂಡಾಡುತ್ತಿರುವ ಭಾರತದ ಟ್ರಂಪ್​ ಕಾರ್ಡ್​ ಜಸ್ಪ್ರೀತ್​ ಬುಮ್ರಾ ಜನಾಂಗೀಯ ನಿಂದನೆಗೆ ಒಳಗಾಗಿದ್ದಾರೆ. ಟಿವಿಯಲ್ಲಿ ಕ್ರಿಕೆಟ್​​ ಕಾಮೆಂಟರಿ ನೀಡುತ್ತಿದ್ದ ಮಹಿಳಾ ವಿವರಣೆಗಾರ್ತಿ ಬುಮ್ರಾ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದು, ನೆಟ್ಟಿಗರ ಪಿತ್ತ ನೆತ್ತಿಗೇರಿಸಿದೆ.

ಬೂಮ್​ ಬೂಮ್​ ಬುಮ್ರಾ:ಮೂರನೇ ಟೆಸ್ಟ್​​ನ ಎರಡನೇ ದಿನದಾಟದಲ್ಲಿ ಬುಮ್ರಾ ತಮ್ಮ ಕರಾರುವಾಕ್​ ಬೌಲಿಂಗ್​​ ದಾಳಿಯಿಂದ ಏಕಾಂಗಿಯಾಗಿ ಕಾಂಗರೂ ಬ್ಯಾಟರ್​ಗಳನ್ನು ಪೆವಿಲಿಯನ್​​ ಪರೇಡ್​ ನಡೆಸುತ್ತಿದ್ದರು. ಕ್ರೀಸ್​ಗೆ ಅಂಟಿಕೊಂಡಿದ್ದ ಆರಂಭಿಕರಾದ ನಾಥನ್​ ಮೆಕ್​ಸ್ವೀನಿ ಮತ್ತು ಉಸ್ಮಾನ್​ ಖವಾಜಾರನ್ನು ಬುಮ್ರಾ ಎರಡೇ ಓವರ್​ ಅಂತರದಲ್ಲಿ ಔಟ್​ ಮಾಡಿದರು.

ಈ ವೇಳೆ ಕ್ರೀಡಾ ವಾಹಿನಿಯೊಂದರಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಆಸೀಸ್​ನ ಮಾಜಿ ದೈತ್ಯ ವೇಗಿ ಬ್ರೆಟ್​ ಲೀ, ಬುಮ್ರಾ ಬೌಲಿಂಗ್​ ಅನ್ನು ಹೊಗಳಿದರು. ಯಾರ್ಕರ್​ ಮಾಸ್ಟರ್​​ನ ಈ ದಾಳಿ ತಂಡದ ನಾಯಕನಿಗೆ ಖುಷಿ ನೀಡುತ್ತದೆ ಎಂದು ಬ್ರೆಟ್​ ಲೀ ಹೇಳಿದಾಗ, ಅವರೊಂದಿಗೆ ವಿವರಣೆ ನೀಡುತ್ತಿದ್ದ ಮಹಿಳಾ ಕಾಮೆಂಟೇಟರ್​​ ಮತ್ತು ಇಂಗ್ಲೆಂಡ್​ನ ಮಾಜಿ ಆಟಗಾರ್ತಿ ಇಶಾ ಗುಹಾ ಅವರು ಈ ವೇಳೆ ಬುಮ್ರಾ ವಿರುದ್ಧ ಜನಾಂಗೀಯ ನಿಂದನೆ ಪದ ಬಳಕೆ ಮಾಡಿದ್ದಾರೆ.

ನಿಂದನಾ ಹೇಳಿಕೆ ಟಿವಿಯಲ್ಲಿ ಪ್ರಸಾರ:ಇಂಗ್ಲೆಂಡ್​ನ ಮಾಜಿ ಆಟಗಾರ್ತಿಯ ನಿಂದನೆಯ ಹೇಳಿಕೆಯು ಟಿವಿಯಲ್ಲಿ ಪ್ರಸಾರವಾಗಿದೆ. ಬುಮ್ರಾ ಭಾರತದ ಮೋಸ್ಟ್​ ವ್ಯಾಲ್ಯುವೇಬಲ್​ ಪ್ರೈಮೇಟ್​​ (ಪ್ರಮುಖವಾದ ಮಂಗ) ಎಂದು ಜರಿದಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಭಾರತೀಯರು ಸೇರಿ ನೆಟ್ಟಿಗರಿಂದ ಟೀಕೆ ಎದುರಾಗಿದೆ.

ಮಂಕಿಗೇಟ್​ ವಿವಾದ ನೆನಪು:ಮಹಿಳಾ ಕಾಮೆಂಟೇಟರ್​ ಹೇಳಿಕೆಯು ವೈರಲ್​ ಆಗುತ್ತಿದ್ದಂತೆ 2008 ರಲ್ಲಿ ಆದ ಮಂಕಿಗೇಟ್​ ವಿವಾದವನ್ನು ನೆಟ್ಟಿಗರು ನೆನಪು ಮಾಡಿಕೊಂಡಿದ್ದಾರೆ. ಅಂದು ಭಾರತದ ಹರ್ಭಜನ್​ ಸಿಂಗ್​ ಅವರನ್ನು ಆಸೀಸ್​ನ ಆ್ಯಂಡ್ರೂ ಸೈಮಂಡ್ಸ್​ ಅವರು ಮಂಕಿ (ಕೋತಿ) ಎಂದು ಜನಾಂಗೀಯ ನಿಂದನೆ ಮಾಡಿದ್ದು, ದೊಡ್ಡ ಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು.

ಇದನ್ನೂ ಓದಿ:ಬಾರ್ಡರ್-ಗವಾಸ್ಕರ್ ಟ್ರೋಫಿ ಯಾವಾಗ ಪ್ರಾರಂಭವಾಯ್ತು: ಈ ಹೆಸರು ಹೇಗೆ ಬಂತು, ಇದಕ್ಕಿದೆ 28 ವರ್ಷದ ಇತಿಹಾಸ!

ABOUT THE AUTHOR

...view details