ಕರ್ನಾಟಕ

karnataka

ETV Bharat / sports

ಟೆನ್ನಿಸ್‌: ಆಸ್ಟ್ರೇಲಿಯನ್ ಓಪನ್‌ ಪ್ರಶಸ್ತಿ ಗೆದ್ದ ಇಟಲಿಯ ಜಾನಿಕ್ ಸಿನ್ನರ್ - ಡೇನಿಯಲ್ ಮೆಡ್ವೆಡೆವ್‌

ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಫೈನಲ್​ನಲ್ಲಿ ಡೇನಿಯಲ್ ಮೆಡ್ವೆಡೆವ್‌ ವಿರುದ್ಧ ಜಾನಿಕ್ ಸಿನ್ನರ್ ಗೆಲುವಿನ ನಗೆ ಬೀರಿದ್ದಾರೆ.

ಯುವ ಟೆನಿಸ್​ ತಾರೆ ಜಾನಿಕ್ ಸಿನ್ನರ್
ಯುವ ಟೆನಿಸ್​ ತಾರೆ ಜಾನಿಕ್ ಸಿನ್ನರ್

By PTI

Published : Jan 29, 2024, 11:57 AM IST

Updated : Jan 29, 2024, 12:22 PM IST

ಮೆಲ್ಬರ್ನ್(ಆಸ್ಟ್ರೇಲಿಯಾ):ಇಲ್ಲಿನ ರಾಡ್ ಲೆವರ್ ಟೆನ್ನಿಸ್ ಕೋರ್ಟ್‌ನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್‌ ಪುರುಷರ ಸಿಂಗಲ್ಸ್ ಫೈನಲ್​ನಲ್ಲಿ ರಷ್ಯಾದ ಡೇನಿಯಲ್ ಮೆಡ್ವೆಡೆವ್‌ ವಿರುದ್ಧ ಇಟಲಿಯ ಜಾನಿಕ್ ಸಿನ್ನರ್ ಐತಿಹಾಸಿಕ ಜಯ ಸಾಧಿಸಿದರು. ಈ ಮೂಲಕ 22 ವರ್ಷದ ಜಾನಿಕ್ ಸಿನ್ನರ್ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಎತ್ತಿ ಹಿಡಿದರು. ಇದಕ್ಕೂ ಮೊದಲು ವಿಶ್ವದ ನಂ.1 ​ಟೆನ್ನಿಸಿಗ​ ನೊವಾಕ್ ಜೊಕೊವಿಕ್ ಅವರನ್ನು ಸೆಮಿಫೈನಲ್​ನಲ್ಲಿ ಸೋಲಿಸಿರುವ ಇವರು ಫೈನಲ್​ ಪ್ರವೇಶಿಸಿದ್ದರು.

ಪಂದ್ಯ ಹೀಗಿತ್ತು: ಐದು ಸೆಟ್​ಗಳಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೆಡ್ವೆಡೆವ್​ ಎದುರು ಸಿನ್ನರ್ ಪ್ರಬಲ ಪೈಪೋಟಿ ತೋರಿದರು. 3-6, 3-6, 6-4, 6-4, 6-3 ಸೆಟ್​ಗಳಿಂದ ಮೆಡ್ವೆಡೆವ್​ ಅವರನ್ನು ಸೋಲಿಸಲು ಸಿನ್ನರ್​ ಸುಮಾರು 3 ಗಂಟೆ 44 ನಿಮಿಷ ಕಾಲಾವಧಿ ತೆಗೆದುಕೊಂಡರು. ಮೊದಲೆರಡು ಸೆಟ್​ಗಳಲ್ಲಿ ಗೆದ್ದ ಮೆಡ್ವೆಡೆವ್ ಪ್ರಶಸ್ತಿ ಎತ್ತಿ ಹಿಡಿಯುವ ಉತ್ಸಾಹದಲ್ಲಿದ್ದರು. ಆದರೆ ಪುಟಿದೆದ್ದ ಸಿನ್ನರ್​ ಮುಂದಿನ ಮೂರೂ ಸೆಟ್​ಗಳಲ್ಲಿ ಮೆಡ್ವೆಡೆವ್‌ರನ್ನು ಮಣಿಸಿದರು.

2022ರ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ರಾಫೆಲ್ ನಡಾಲ್ ವಿರುದ್ಧ ಡೇನಿಯಲ್ ಮೆಡ್ವೆಡೆವ್‌ ಪರಾಭವಗೊಂಡಿದ್ದರು. ಇದೀಗ ಎರಡನೇ ಸೋಲಿನ ಕಹಿ ಅನುಭವಿಸಿದ್ದಾರೆ.

ಮಹಿಳೆಯರ ಡಬಲ್ಸ್ ಫಲಿತಾಂಶ:ಇನ್ನು, ಮಹಿಳೆಯರ ಡಬಲ್ಸ್‌ ಕಿರೀಟವನ್ನು ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಹಾಗು ತೈವಾನ್‌ನ ಶಾಯ್​ ಶುವೆ ಮುಡಿಗೇರಿಸಿಕೊಂಡರು. ಫೈನಲ್‌ನಲ್ಲಿ ಲಾಟ್ವಿಯಾದ ಜೆಲೆನಾ ಒಸ್ಟಾಪೆಂಕೊ ಮತ್ತು ಉಕ್ರೇನ್​ನ ಲ್ಯುಡ್‌ ಮೈಲಾ ಕಿಚೆನೊಕ್ ಜೋಡಿಯ ವಿರುದ್ಧ ಇವರು 6-1, 7-5 ಸೆಟ್​ಗಳ ಅಂತರದಿಂದ ಭರ್ಜರಿ ವಿಜಯ ಸಾಧಿಸಿದರು.

ಇದರೊಂದಿಗೆ 2024ರ ಮೊದಲ ಟ್ರೋಫಿಯನ್ನು ಶಾಯ್ ಶುವೆ-ಎಲಿಸ್ ಮೆರ್ಟೆನ್ಸ್ ತಮ್ಮದಾಗಿಸಿಕೊಂಡರು. ಶಾಯ್ ಶುವೆ ಗೆದ್ದ 7ನೇ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಇದಾಗಿದೆ. ಇದಕ್ಕೂ ಮುನ್ನ ವಿಂಬಲ್ಡನ್‌ನಲ್ಲಿ ನಾಲ್ಕು ಬಾರಿ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.

ಇದನ್ನೂ ಓದಿ:ಜಡೇಜಾಗೆ ಮಂಡಿರಜ್ಜು ಗಾಯ; ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ಗೆ ಅಲಭ್ಯ?

Last Updated : Jan 29, 2024, 12:22 PM IST

ABOUT THE AUTHOR

...view details