ಕರ್ನಾಟಕ

karnataka

ETV Bharat / sports

ಬಿಜೆಪಿ ಪಕ್ಷ ಸೇರ್ಪಡೆಗೊಂಡ ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಆಲ್​​ರೌಂಡರ್​ - Cricketer joined BJP

ಭಾರತದ ಸ್ಟಾರ್​ ಆಲ್ರೌಂಡರ್​ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಕ್ರಿಕೆಟರ್​ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಆಟಗಾರರು
ಭಾರತ ಕ್ರಿಕೆಟ್ ತಂಡದ ಆಟಗಾರರು ((IANS))

By ETV Bharat Sports Team

Published : Sep 5, 2024, 7:51 PM IST

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್​ ಆಲ್​​ರೌಂಡರ್​ ರವೀಂದ್ರ ಜಡೇಜಾ ಅವರು ಇದೀಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಂದು ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯತ್ವ ಸ್ವೀಕರಿಸಿದ್ದಾರೆ. ಜಾಮ್‌ನಗರದ ಬಿಜೆಪಿ ಶಾಸಕಿ ಮತ್ತು ಜಡೇಜಾ ಅವರ ಪತ್ನಿ ಆಗಿರುವ ರಿವಾಬಾ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ, 'ರವೀಂದ್ರ ಜಡೇಜಾ ಬಿಜೆಪಿಯ ಸದಸ್ಯತ್ವ ಸ್ವೀಕರಿಸಿದ್ದಾರೆ' ಎಂದು ಬರೆದಿದ್ದಾರೆ. ಈ ಹಿಂದೆ ಚುನಾವಣೆ ಸಮಯದಲ್ಲಿ ರವೀಂದ್ರ ಜಡೇಜಾ ತಮ್ಮ ಪತ್ನಿ ರಿವಾಬಾ ಅವರೊಂದಿಗೆ ಬಿಜೆಪಿ ಪರ ಪ್ರಚಾರ ನಡೆಸಿದ್ದರು. ಇದಷ್ಟೇ ಅಲ್ಲದೇ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಅವರೊಂದಿಗೆ ಹಲವಾರು ಬಾರಿ ಪ್ರಚಾರ ಮಾಡಿದ್ದಾರೆ. ಅಲ್ಲದೇ ಚುನಾವಣೆ ಸಮಯದಲ್ಲಿ ಬಿಜೆಪಿ ಪರ ಪ್ರಚಾರದಲ್ಲೂ ಪಾಲ್ಗೊಂಡಿದ್ದಾರೆ. ರೋಡ್ ಶೋಗಳಲ್ಲಿ ಸಹ ಭಾಗಿಯಾಗಿದ್ದರು.

ಪ್ರಸ್ತುತ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಾಮ್‌ನಗರ ಉತ್ತರ ಕ್ಷೇತ್ರದ ಶಾಸಕರಾಗಿದ್ದಾರೆ. ಇದೀಗ ರವೀಂದ್ರ ಜಡೇಜಾ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಟಿ 20 ವಿಶ್ವಕಪ್ ಗೆದ್ದ ಬಳಿಕ ರಿವಾಬಾ ಮತ್ತು ರವೀಂದ್ರ ಜಡೇಜಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಇದಾದ ಬಳಿಕ ಜಡೇಜಾ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎಂದೇ ಹೇಳಲಾಗುತ್ತಿತ್ತು.

ಜಡೇಜಾ ಅವರ ಕ್ರಿಕೆಟ್​ ಜರ್ನಿ:ರವೀಂದ್ರ ಜಡೇಜಾ ಭಾರತ ಪರ 74 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 515 ರನ್ ಗಳಿಸಿದ್ದು, 54 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಂದ್ಯವೊಂದರಲ್ಲಿ 15 ರನ್‌ಗಳಿಗೆ 3 ವಿಕೆಟ್ ಕಬಳಿಸಿರುವುದು ಜಡೇಜಾ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಸದ್ಯ ಜಡೇಜಾ ಇನ್ನೂ ಭಾರತ ಪರ ಏಕದಿನ ಮತ್ತು ಟೆಸ್ಟ್ ಆಡಲಿದ್ದಾರೆ.

ಇದನ್ನೂ ಓದಿ:ದುಲೀಪ್ ಟ್ರೋಫಿ: ಇಂಡಿಯಾ ಬಿ ತಂಡಕ್ಕೆ ಆಸರೆಯಾದ ಮುಶೀರ್ ಖಾನ್ ಶತಕ - Duleep Trophy

ABOUT THE AUTHOR

...view details