ಕೋಲ್ಕತ್ತಾ:ಐಪಿಎಲ್ ಟೂರ್ನಿಯ 31ನೇ ಪಂದ್ಯದಲ್ಲಿಂದು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡಗಳು ಗೆಲುವಿಗಾಗಿ ಪೈಪೋಟಿ ನಡೆಸಲಿವೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಪಂದ್ಯ ನಡೆಯಲಿದೆ.
ಪ್ರಸಕ್ತ ಋತುವಿನಲ್ಲಿ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ಆರ್‌ಆರ್ ಮತ್ತು ಕೆಕೆಆರ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ಈವರೆಗೆ 6 ಪಂದ್ಯಗಳನ್ನಾಡಿದ್ದು ಈ ಪೈಕಿ 5ರಲ್ಲಿ ಗೆಲುವು ಕಂಡು 1ರಲ್ಲಿ ಸೋಲನುಭವಿಸಿದೆ. ತಂಡವು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮತ್ತೊಂದೆಡೆ, ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಅದ್ಭುತ್ ಫಾರ್ಮ್ನಲ್ಲಿದ್ದು ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 1ರಲ್ಲಿ ಸೋತು ಎರಡನೇ ಸ್ಥಾನದಲ್ಲಿದೆ. ಹಾಗಾಗಿ ಇಂದಿನ ಮದಗಜಗಳ ಕಾದಾಟ ಪ್ರೇಕ್ಷಕರಿಗೆ ರಸದೌತಣ ನೀಡುವ ನಿರೀಕ್ಷೆ ಇದೆ.
ಪವರ್‌ಪ್ಲೇನಲ್ಲಿ ಕೆಕೆಆರ್ ಶಕ್ತಿಶಾಲಿ:ಕೆಕೆಆರ್ಪವರ್ಪ್ಲೇನಲ್ಲಿ ಬಲಿಷ್ಠವಾಗಿದೆ. ಈವರೆಗೆ ಆಡಿರುವ ಪಂದ್ಯಗಳಲ್ಲಿ 11 ಸ್ಟ್ರೈಕ್ ರೇಟ್ನೊಂದಿಗೆ 47.14ರ ಸಾರಾಸರಿಯಲ್ಲಿ ಬ್ಯಾಟ್ ಬೀಸಿದೆ. ಇದಕ್ಕೆ ಹೋಲಿಸಿದರೆ ಪವರ್ ಪ್ಲೇನಲ್ಲಿ ರಾಜಸ್ಥಾನ್ ರಾಯಲ್ಸ್ ಪ್ರದರ್ಶನ ಕೊಂಚ ಕಡಿಮೆ ಇದೆ. ಈವರೆಗೆ ಆಡಿರುವ ಎಲ್ಲಾ ಪಂದ್ಯಗಳಲ್ಲಿ ಆರಂಭಿಕ 6 ಓವರ್ಗಳಲ್ಲಿ 7.53 ಸ್ಟ್ರೈಕ್ರೇಟ್ನೊಂದಿಗೆ 30.11ರ ಸರಾಸರಿಯಲ್ಲಿ ಆರ್‌ಆರ್ ಬ್ಯಾಟ್ ಬೀಸಿದೆ.
ಪಿಚ್ ವರದಿ:ಈಡನ್ ಗಾರ್ಡನ್ಸ್ ಅನ್ನು ಬ್ಯಾಟಿಂಗ್‌ಸ್ನೇಹಿ ಮೈದಾನವೆಂದೇ ಪರಿಗಣಿಸಲಾಗುತ್ತದೆ. ಆದರೂ ಸ್ಪಿನ್ನರ್‌ಗಳು ಪ್ರಾಬಲ್ಯ ಮೆರೆಯುವ ಸಾಧ್ಯತೆಯೂ ಹೆಚ್ಚಿದೆ. ಐಪಿಎಲ್ ಪಂದ್ಯಗಳಲ್ಲಿ ಹೆಚ್ಚಿನ ಸ್ಪಿನ್ನರ್‌ಗಳು ಈ ಪಿಚ್ನಲ್ಲಿ ಬೌಲಿಂಗ್ ಮಾಡಬಯಸುತ್ತಾರೆ. ಒಂದು ವೇಳೆ ಸ್ಪಿನ್ನರ್ಗಳಿಗೆ ಪಿಚ್ ಸಹಕಾರಿಯಾದರೆ ರಾಜಸ್ಥಾನಕ್ಕೆ ಹೆಚ್ಚಿನ ಲಾಭವಾಗಲಿದೆ. ತಂಡದಲ್ಲಿ ಆರ್.ಅಶ್ವಿನ್, ಯಜ್ವೇಂದ್ರ ಚಾಹಲ್, ಕೇಶವ್ ಮಹರಾಜ್ ಸೇರಿದಂತೆ ಮೂವರು ಸ್ಪಿನ್ನರ್ಗಳಿದ್ದಾರೆ. ಅದರಲ್ಲೂ ಚಹಾಲ್ ಪ್ರಸ್ತುತ ಐಪಿಎಲ್‌ನ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದು, 6 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ.