ಕರ್ನಾಟಕ

karnataka

ETV Bharat / sports

ಮೂರು ಪ್ಲೇಆಫ್​ ಸ್ಥಾನಕ್ಕಾಗಿ 5 ತಂಡಗಳ ಪೈಪೋಟಿ: ಆರ್​ಸಿಬಿಗೆ ಒಲಿಯುತ್ತಾ ಅದೃಷ್ಟ? ಲೆಕ್ಕಾಚಾರ ಹೀಗಿದೆ - IPL Playoffs Scenario - IPL PLAYOFFS SCENARIO

ಪ್ಲೇಆಫ್​ನಲ್ಲಿ ಸ್ಥಾನ ಪಡೆಯಲು 5 ತಂಡಗಳು ಇನ್ನಿಲ್ಲದ ಕಸರತ್ತು ಮಾಡುತ್ತಿವೆ. ಯಾವ ತಂಡಕ್ಕೆ ಎಷ್ಟು ಅವಕಾಶವಿದೆ. ಸೋಲು-ಗೆಲುವಿನ ಲೆಕ್ಕಾಚಾರದ ಗುಣಿತ ನೋಡೋಣ.

ಐಪಿಎಲ್​
ಐಪಿಎಲ್​ (File Photo (ETV Bharat))

By ETV Bharat Karnataka Team

Published : May 12, 2024, 1:37 PM IST

ಹೈದರಾಬಾದ್​:ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಈವರೆಗೆ 60 ಪಂದ್ಯಗಳು ಮುಕ್ತಾಯವಾಗಿವೆ. ಇಂದಿನ ಸಂಡೇ ಧಮಾಕಾದಲ್ಲಿ ಮೂರು ತಂಡಗಳು ಪ್ಲೇಆಫ್​ಗಾಗಿ ಹೋರಾಟ ನಡೆಸಲಿದ್ದರೆ, ಒಟ್ಟು 5 ತಂಡಗಳು ಅರ್ಹತೆ ಗಿಟ್ಟಿಸಿಕೊಳ್ಳುವ ಹಾದಿಯಲ್ಲಿವೆ. ಇದರಲ್ಲಿ ಒಂದು ತಂಡಕ್ಕೆ ಮಾತ್ರ ಅಧಿಕೃತ ಅವಕಾಶ ಸಿಗುತ್ತದೆ.

ಈಗಾಗಲೇ ಕೋಲ್ಕತ್ತಾ ನೈಟ್​​ ರೈಡರ್ಸ್​ ಪ್ಲೇಆಫ್​ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ. ಎರಡು ತಂಡಗಳು ಟೂರ್ನಿಯಿಂದ ಈಗಾಗಲೇ ಹೊರಬಿದ್ದಿವೆ. ಮುಂಬೈ ಇಂಡಿಯನ್ಸ್​​ ಪ್ರಥಮವಾಗಿದ್ದರೆ, ಪಂಜಾಬ್​ ಕಿಂಗ್ಸ್​ ಎರಡನೇ ತಂಡವಾಗಿದೆ. ನಾಲ್ಕು ತಂಡಗಳಿಗೆ ಪ್ಲೇಆಫ್​ಗೇರುವ ಅವಕಾಶವಿದೆ. ಇನ್ನು ಮೂರು ಸ್ಥಾನಗಳು ಖಾಲಿ ಇವೆ. ಅದರಲ್ಲಿ ರಾಜಸ್ಥಾನ ರಾಯಲ್ಸ್​ಗೆ ಅವಕಾಶ ಹೆಚ್ಚಿದೆ. ಸನ್​ರೈಸರ್ಸ್​ ಹೈದರಾಬಾದ್​ ಕೂಡ ಇನ್ನೆರಡೇ ಹೆಜ್ಜೆ ದೂರದಲ್ಲಿದೆ.

ಯಾವ ತಂಡ, ಎಷ್ಟು ಗೆದ್ದರೆ ಅರ್ಹತೆ ಸಿಗುತ್ತೆ?:ಪಾಯಿಂಟ್​ ಪಟ್ಟಿಯ ಆಧಾರದಲ್ಲಿ ಲೆಕ್ಕ ಹಾಕುತ್ತಾ ಬಂದಲ್ಲಿ ಮೊದಲ ಸ್ಥಾನದಲ್ಲಿರುವ ಕೆಕೆಆರ್​ ಕ್ವಾಲಿಫೈ ಆಗಿದೆ. ರಾಜಸ್ಥಾನಕ್ಕೆ ಇನ್ನೂ ಮೂರು ಲೀಗ್​ ಪಂದ್ಯ ಬಾಕಿ ಇದ್ದು, ಅದರಲ್ಲಿ ಒಂದು ಗೆದ್ದರೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಇನ್ನೂ ಮೂರನೇ ಸ್ಥಾನದಲ್ಲಿರುವ ಸನ್​ರೈಸರ್ಸ್​ ಹೈದರಾಬಾದ್​ 14 ಪಾಯಿಂಟ್ಸ್​​ ಹೊಂದಿದ್ದು, ಇನ್ನೆರಡು ಪಂದ್ಯಗಳು ಬಾಕಿ ಇವೆ. ಇದರಲ್ಲಿ ಒಂದು ಗೆದ್ದರೂ 16 ಅಂಕಗಳೊಂದಿಗೆ ಪ್ಲೇಆಫ್​ ಹಂತ ಖಚಿತ.

ನಾಲ್ಕನೇ ಸ್ಥಾನದಿಂದ 8ನೇ ಸ್ಥಾನದವರೆಗೂ ಯಾವುದೇ ತಂಡಕ್ಕೆ ನಾಲ್ಕರ ಘಟ್ಟಕ್ಕೇರುವ ಖಚಿತತೆ ಇಲ್ಲವಾಗಿದೆ. ಎಲ್ಲ ತಂಡಗಳೂ ಸಮಬಲ ಹೋರಾಟ ನಡೆಸುತ್ತಿವೆ. ಅದರಲ್ಲಿ ನಾಲ್ಕನೇ ಕ್ರಮಾಂಕದಲ್ಲಿರುವ ಸಿಎಸ್​ಕೆ 12 ಪಾಯಿಂಟ್ಸ್​ ಹೊಂದಿದೆ. ಇನ್ನೆರಡು ಲೀಗ್​ ಪಂದ್ಯಗಳಿವೆ. ಇದರಲ್ಲಿ ಎರಡನ್ನೂ ಗೆಲ್ಲಲೇಬೇಕಿದೆ. ಒಂದು ಸೋತಲ್ಲಿ ನೆಟ್ ​ರನ್​ರೇಟ್​ ಮೇಲೆ ಆಧರಿಸಬೇಕಾಗುತ್ತದೆ.

5 ರಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್​ ಕೂಡ 12 ಅಂಕ ಹೊಂದಿದೆ. ಲೀಗ್​ನ ಉಳಿದ ಇನ್ನೆರಡು ಪಂದ್ಯ ಗೆಲ್ಲಬೇಕು. ಆರ್​ಸಿಬಿ ಮತ್ತು ಲಖನೌ ತಂಡಗಳ ವಿರುದ್ಧ ಆಡಲಿದ್ದು, ಈ ಎರಡೂ ತಂಡಗಳು ರೇಸ್‌ನಲ್ಲಿವೆ. ಒಂದು ಸೋತಲ್ಲಿ ಹಾದಿ ಕಠಿಣವಾಗಿ, ರನ್​ರೇಟ್​ ಮೊರೆಹೋಗಬೇಕಿದೆ.

6ನೇ ಸ್ಥಾನದಲ್ಲಿರುವ ಲಖನೌ ಸೂಪರ್​ಜೈಂಟ್ಸ್​ ಪರಿಸ್ಥಿತಿಯೂ ಭಿನ್ನವಾಗಿಲ್ಲ. 12 ಪಾಯಿಂಟ್ಸ್ ಹೊಂದಿದ್ದು, ಎರಡು ಪಂದ್ಯ ಬಾಕಿ ಇದೆ. ಡೆಲ್ಲಿ ಮತ್ತು ಮುಂಬೈ ಇಂಡಿಯನ್ಸ್​​ ವಿರುದ್ಧ ಪಂದ್ಯಗಳಿವೆ. ಒಂದು ಸೋತರೂ ರನ್​ರೇಟೇ ಗತಿ.

ಆರ್​ಸಿಬಿ ಗೆದ್ದರೂ ರನ್​ರೇಟ್​ ಮುಖ್ಯ:10 ಅಂಕಗಳಿಂದ 7ನೇ ಸ್ಥಾನದಲ್ಲಿರುವ ಆರ್​ಸಿಬಿ ಉಳಿದ 2 ಲೀಗ್​ ಪಂದ್ಯ ಗೆದ್ದರೂ ರನ್​ರೇಟ್​ ಬಹುಮುಖ್ಯ. 14 ಪಾಯಿಂಟ್ಸ್​ ಗಳಿಸಿದರೂ, ಸಿಎಸ್​ಕೆ, ಡೆಲ್ಲಿ ಹಾಗೂ ಲಖನೌನ ರನ್​ರೇಟ್​ ಮೇಲೆ ಅರ್ಹತೆ ಆಧರಿಸಿದೆ. ಸದ್ಯಕ್ಕೆ ಡೆಲ್ಲಿ, ಲಖನೌ ರನ್​ರೇಟ್​ ಆರ್​ಸಿಬಿಗಿಂತ ಕೆಳಗಿದೆ.

8ನೇ ಕ್ರಮಾಂಕದಲ್ಲಿರುವ ಗುಜರಾತ್​ ಟೈಟಾನ್ಸ್​ ಹೆಚ್ಚೂ ಕಡಿಮೆ ಟೂರ್ನಿಯಿಂದ ಒಂದು ಕಾಲು ಹೊರಗಿಟ್ಟಿದೆ. ಕಾರಣ, ಉಳಿದ ಇನ್ನೆರಡು ಪಂದ್ಯಗಳು ಕೆಕೆಆರ್​ ಮತ್ತು ಎಸ್​ಆರ್​ಹೆಚ್​ ಎದುರು ಆಡಬೇಕು. ಟೂರ್ನಿಯಲ್ಲಿ ಬಲಿಷ್ಠವಾಗಿರುವ ತಂಡದೆದುರು ಗೆಲುವು ಕಷ್ಟಾತಿಕಷ್ಟ. ಇದರಲ್ಲಿ ಒಂದು ಸೋತರೂ ಗುಡ್​ಬೈ ಹೇಳಲೇಬೇಕು.

ಇದನ್ನೂ ಓದಿ:ಐಪಿಎಲ್​ನಲ್ಲಿಂದು ಡಬಲ್​ ಧಮಾಕಾ: ಪ್ಲೇಆಫ್​ನಲ್ಲಿ ಉಳಿಯೋಕೆ ಆರ್​ಸಿಬಿ, ಡೆಲ್ಲಿ, ಚೆನ್ನೈ ಹೋರಾಟ - IPL Super Sunday

ABOUT THE AUTHOR

...view details