ಕೋಲ್ಕತ್ತಾ:ಪವರ್ಹಿಟ್ಟಿಂಗ್ನ ಬ್ರಾಂಡ್ ಅಂಬಾಸಿಡರ್ನಂತಿರುವ ವೆಸ್ಟ್ಇಂಡೀಸ್ ದೈತ್ಯರ ಬ್ಯಾಟಿಂಗ್ ಪರಾಕ್ರಮದ ಮುಂದೆ ಪ್ರತಿ ದಾಖಲೆ ಉಡೀಸ್ ಆಗುತ್ತದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆ್ಯಂಡ್ರ್ಯೂ ರಸ್ಸೆಲ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಅತಿವೇಗವಾಗಿ 200 ಸಿಕ್ಸರ್ಸ್ ಬಾರಿಸಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಜೊತೆಗೆ ತಮ್ಮದೇ ಸಹ ಆಟಗಾರ ಕ್ರಿಸ್ಗೇಲ್ ಅವರ ದಾಖಲೆಯನ್ನು ಮೀರಿದರು.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ರಸ್ಸೆಲ್ ಈ ದಾಖಲೆ ನಿರ್ಮಿಸಿದರು. ಪಂದ್ಯದಲ್ಲಿ ಅವರು ಭರ್ಜರಿ 7 ಸಿಕ್ಸರ್ ಸಿಡಿಸಿದರು. ಇದರೊಂದಿಗೆ ಐಪಿಎಲ್ನಲ್ಲಿ ವೇಗವಾಗಿ 200 ಸಿಕ್ಸರ್ಸ್ ಗಳಿಸಿದ ಆಟಗಾರರಾದರು. ಇಷ್ಟು ಸಿಕ್ಸರ್ ಬಾರಿಸಲು ರಸ್ಸೆಲ್ 1322 ಎಸೆತ ತೆಗೆದುಕೊಂಡಿದ್ದಾರೆ. ಇದು ಟೂರ್ನಿಯಲ್ಲಿ ಅತಿ ಕಡಿಮೆ ಎಸೆತದಲ್ಲಿ ದಾಖಲಾದ ಅತಿ ಹೆಚ್ಚು ಸಿಕ್ಸರ್ಸ್.
ಗೇಲ್ ದಾಖಲೆ ಉಡೀಸ್:ಐಪಿಎಲ್ನಲ್ಲಿ ಸಿಡಿಲಿನ ಬ್ಯಾಟಿಂಗ್ಗೆ ಹೆಸರಾಗಿದ್ದ ಕ್ರಿಸ್ಗೇಲ್ ವಿವಿಧ ತಂಡಗಳ ಪರವಾಗಿ ಆಡಿ ಅತಿ ಹೆಚ್ಚು ಸಿಕ್ಸರ್ಸ್ ಸಿಡಿಸಿದ ದಾಖಲೆ ನಿರ್ಮಿಸಿದ್ದರು. ಕೆರೆಬಿಯನ್ ಬ್ಯಾಟಿಂಗ್ ದೈತ್ಯ ಗೇಲ್ 1811 ಎಸೆತಗಳಲ್ಲಿ 200 ವಿಕೆಟ್ ಸಾಧನೆ ಮಾಡಿದ್ದರು. ಇದನ್ನೀಗ ರಸ್ಸೆಲ್ ಮುರಿದಿದ್ದಾರೆ.