ಹೈದರಾಬಾದ್: ಭಾರತೀಯ ಕ್ರಿಕೆಟಿಗರು ಮೈದಾದಲ್ಲಿನ ಆಟಕ್ಕೆ ಮಾತ್ರವಲ್ಲದೇ ಹೊರಗಿನ ಜೀವನ ಶೈಲಿಯಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇತರೆ ದೇಶದ ಆಟಗಾರರಿಗೆ ಹೋಲಿಸಿದರೆ ಭಾರತೀಯ ಕ್ರಿಕೆಟಿಗರು ಹೆಚ್ಚು ಐಷಾರಾಮಿ ಜೀವನ ನಡೆಸುತ್ತಾರೆ. ಅದರಲ್ಲೂ ಭಾರತೀಯ ಕೆಲ ಕ್ರಿಕೆಟಿಗರಿಗೆ ಕಾರುಗಳೆಂದರೆ ಎಲ್ಲಿಲ್ಲದ ಹುಚ್ಚು. ಇದಕ್ಕಾಗಿ ಕೋಟ್ಯಂತರ ಬೆಲೆ ವ್ಯಯಿಸಿ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿರುತ್ತಾರೆ.
ಆದರೆ ನಿಮಗೆ ಗೊತ್ತಾ? ಅತ್ಯಂತ ದುಬಾರಿ ಕಾರುಗಳಲ್ಲಿ ಓಡಾಡುವ ಟಾಪ್ 10 ಭಾರತೀಯ ಕ್ರಿಕೆಟಿಗರ ಯಾರು ಮತ್ತು ಅವುಗಳ ಬೆಲೆ ಎಷ್ಟು ಅಂತ?.
ಸಚಿನ್ ತೆಂಡೂಲ್ಕರ್: ವಿಶ್ವದ ಶ್ರೇಷ್ಠ ಕ್ರಿಕೆಟಿಗ ಮತ್ತು ಮಾಸ್ಟರ್ ಬ್ಲಾಸ್ಟರ್ ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅತ್ಯಂತ ದುಬಾರಿ ಕಾರು ಓಡಿಸುವ ಭಾರತೀಯ ಕ್ರಿಕೆಟಿಗರಾಗಿದ್ದಾರೆ. ಈ ಲಿಟ್ಲ್ ಮಾಸ್ಟರ್ಸ್ ಗ್ಯಾರೇಜ್‌ನಲ್ಲಿರುವ ಅತ್ಯಂತ ದುಬಾರಿ ಕಾರು ಲಂಬೋರ್ಗಿನಿ ಉರಸ್ ಎಸ್ ಆಗಿದೆ. ಇದರ ಬೆಲೆ 4.18 ಕೋಟಿ ರೂ ಆಗಿದೆ. ಅಲ್ಲದೆ, ಸಚಿನ್ BMW i8ನಂತಹ ಐಷಾರಾಮಿ ಕಾರು ಕೂಡ ಹೊಂದಿದ್ದಾರೆ. ಇದರ ಆರಂಭಿಕ ಬೆಲೆ 2.62 ಕೋಟಿ ರೂ ಆಗಿದೆ.
ಕೆ.ಎಲ್.ರಾಹುಲ್:ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಮತ್ತು ಕನ್ನಡಿಗ ಕೆ.ಎಲ್.ರಾಹುಲ್ ಕೂಡ ದುಬಾರಿ ಕಾರುಗಳನ್ನು ಇಷ್ಟಪಡುತ್ತಾರೆ. ರಾಹುಲ್ ಒಡೆತನದಲ್ಲಿರುವ ಅತ್ಯಂತ ದುಬಾರಿ ಕಾರು ಲಂಬೋರ್ಗಿನಿ ಹುರಾಕನ್ ಸ್ಪೈಡರ್ ಆಗಿದೆ. ಇದರ ಮೌಲ್ಯ ₹4.10 ಕೋಟಿ ಆಗಿದೆ.
ವಿರಾಟ್ ಕೊಹ್ಲಿ:ಅತಿ ಹೆಚ್ಚು ನಿವ್ವಳ ಮೌಲ್ಯ ಹೊಂದಿರುವ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಹೊಂದಿರುವ ದುಬಾರಿ ಕಾರು ಬೆಂಟ್ಲಿ ಕಾಂಟಿನೆಂಟಲ್ ಜಿಟಿಯಾಗಿದ್ದು, ಇದು ₹4.04 ಕೋಟಿ ರೂ ಬೆಲೆಯದ್ದಾಗಿದೆ. 35 ವರ್ಷ ವಯಸ್ಸಿನ ಕೊಹ್ಲಿ ಗ್ಯಾರೇಜ್‌ನಲ್ಲಿ ಔಡಿ R8 V10 LMX ಅನ್ನು ಹೊಂದಿದ್ದು, ಇದರ ಬೆಲೆ ₹3 ಕೋಟಿ ರೂ. ಇದೆ. ಸಧ್ಯ ವಿರಾಟ್ ಆಡಿ ಇಂಡಿಯಾದ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.
ಶಿಖರ್ ಧವನ್:ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಕೂಡ ದುಬಾರಿ ಕಾರುಗಳಲ್ಲಿ ಓಡಾಡುತ್ತಾರೆ. ಗಬ್ಬರ್ ಎಂದೇ ಖ್ಯಾತಿ ಪಡೆದಿರುವ ಈ ಎಡಗೈ ಬ್ಯಾಟ್ಸ್‌ಮನ್, ರೇಂಜ್ ರೋವರ್ ಆಟೋಬಯೋಗ್ರಫಿ SUV ಕಾರನ್ನು ಹೊಂದಿದ್ದಾರೆ. ಇದು ₹4 ಕೋಟಿ ಮೌಲ್ಯದ್ದಾಗಿದೆ. ಧವನ್ ಅವರ ಬಳಿ ₹2 ಕೋಟಿ ಬೆಲೆಯ ಬಿಎಂಡಬ್ಲ್ಯು ಎಂ8 ಕಾರು ಕೂಡ ಇದೆ.
ವೀರೇಂದ್ರ ಸೆಹ್ವಾಗ್:ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಐಷಾರಾಮಿ ಜೀವನಶೈಲಿ ನಡೆಸುತ್ತಾರೆ. ಸೆಹ್ವಾಗ್ ಒಡೆತನದ ಅತ್ಯಂತ ದುಬಾರಿ ಕಾರು ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಆಗಿದ್ದು, ₹3.74 ಕೋಟಿ ರೂ ಬೆಲೆಯದಾಗಿದೆ.