PAK vs IND 5th Match Live: ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ದುಬೈನಲ್ಲಿ ಇಂದು ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೆಜ್ ಪಂದ್ಯ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದೆ. ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆರಂಭಿಕ 10 ಓವರ್ಗಳಲ್ಲಿ ರನ್ ಗಳಿಸಲು ಪಾಕಿಸ್ತಾನ ಪರದಾಡಿತು.
ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಗೆಲುವು ಸಾಧಿಸಿದೆ. ಕೊಹ್ಲಿ ಬೌಂಡರಿ ಬಾರಿಸುವುದರೊಂದಿಗೆ ಶತಕ ಪೂರ್ಣಗೊಳಿಸಿದರು. ಇದರೊಂದಿಗೆ ಭಾರತವೂ ಗೆಲುವಿನ ದಡ ಸೇರಿತು.
- ಹಾರ್ದಿಕ್ ಪಾಂಡ್ಯ ವಿಕೆಟ್ ಪತನ
ಅಯ್ಯರ ಬಳಿಕ ಬ್ಯಾಟಿಂಗ್ಗೆ ಬಂದ ಪಾಂಡ್ಯ ಒಂದು ಬೌಂಡರಿ ಸಮೆತ 8 ರನ್ ಕಲೆಹಾಕಿದ್ದರು. ಆದರೆ ಆಫ್ರಿದಿ ಎಸೆತದಲ್ಲಿ ರಿಜ್ವಾನ್ಗೆ ಕ್ಯಾಚಿಟ್ಟರು.
ಕೊಹ್ಲಿ ಜೊತೆಗೂಡಿಉತ್ತಮ ಇನ್ನಿಂಗ್ ಆಡಿದ ಶ್ರೇಯಸ್ ಅಯ್ಯರ್ 56 ರನ್ಗಳಿಸಿ ಔಟಾದರು. ಕುಶ್ದಿಲ್ ಎಸೆತದಲ್ಲಿ ಅಯ್ಯರ್ ಇಮಾಮ್ ಉಲ್ ಹಕ್ಗೆ ಕ್ಯಾಚ್ ನೀಡಿದರು.
ಶ್ರೇಯಸ್ ಅಯ್ಯರ್ ಅರ್ಧಶತಕ
ವಿರಾಟ್ ಕೊಹ್ಲಿ ಜೊತೆ ಸೇರಿ ಶ್ರೇಯಸ್ ಅಯ್ಯರ್ ಅರ್ಧಶತಕ ಸಿಡಿಸಿದ್ದಾರೆ. 63 ಎಸೆತಗಳಲ್ಲಿ ಅಯ್ಯರ್ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅರ್ಧಶತ ಬಾರಿಸಿದರು. 36 ಓವರ್ಗೆ ಭಾರತ 2 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ.
ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದ್ದು, 33 ಓವರ್ಗಳಲ್ಲಿ 2 ವಿಕೆಟ್ಗೆ 182 ಗಳಿಸಿರುವ ಭಾರತ ಉತ್ತಮ ಸ್ಥಿತಿಯಲ್ಲಿದೆ.
ಅಬ್ರಾರ್ ಅಹ್ಮದ್ ಎಸೆದ 17.3 ಓವರ್‌ನಲ್ಲಿ ಅರ್ಧಶತಕದ ಸನಿಹದಲ್ಲಿ ಶುಭ್ಮನ್ಗಿಲ್ ಕ್ಲೀನ್ಬೌಲ್ಡ್ ಆದರು. ಗಿಲ್ 46 ರನ್ ಗಳಿಸಿದ್ದರು.
ಪಾಕ್ ನೀಡಿರುವ ಗುರಿಯನ್ನು ಬೆನ್ನತ್ತಿರುವ ಭಾರತಕ್ಕೆ ಮೊದಲ ಆಘಾತವಾಗಿದೆ. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ 20 ರನ್ಗಳಿಸಿ ಔಟಾಗಿದ್ದಾರೆ. ಶಾಯಿನ್ ಶಾ ಆಫ್ರಿದಿ ಕ್ಲೀನ್ ಬೋಲ್ಡ್ ಮಾಡಿದ್ದಾರೆ.
ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದ್ದು ಪಾಕಿಸ್ತಾನ ಇನ್ನು 2 ಎಸೆತ ಬಾಕಿ ಇರುವಂತೆಯೆ ಆಲೌಟ್ ಆಗಿದೆ. ಶಾಹೀನ್ ಆಫ್ರಿದಿ ನಿರ್ಗಮನದ ಬಳಿಕ ಬಂದ ನಸೀಮ್ ಶಾ, ಹ್ಯಾರಿಸ್ ರೌಫ್, ಕುಶ್ದಿಲ್ ವಿಕೆಟ್ ಬಿದ್ದಿದ್ದು 241 ರನ್ಗೆ ಆಲೌಟ್ ಆಗಿದೆ.
ಪಾಕಿಸ್ತಾನ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಕುಲ್ದೀಪ್ ಯಾದವ್ ಎಸೆತದಲ್ಲಿ 2 ವಿಕೆಟ್ ಉರುಳಿವೆ. 42.4ನೇ ಓವರ್‌ನಲ್ಲಿ ಅಘಾ ಸಲ್ಮಾನ್ ವಿಕೆಟ್ ಬಿದ್ದರೆ, ನಂತರ ಎಸೆತದಲ್ಲಿ ಶಾಹಿನ್ ಶಾ ಆಫ್ರಿದಿ ವಿಕೆಟ್ ಉರುಳಿತು.
ಮೊದಲ ಇನ್ನಿಂಗ್ಸ್‌ನ 40 ಓವರ್ಗಳು ಮುಕ್ತಾಯಗೊಂಡಿವೆ. ಈ ವೇಳೆಗೆ ಪಾಕಿಸ್ತಾನ 183 ರನ್ಗಳಿಗೆ 5 ವಿಕೆಟ್ ಕಲೆದುಕೊಂಡಿದೆ. ಸಲ್ಮಾನ್ ಅಘಾ (15), ಕುಶ್ದಿಲ್ ಶಾ (8) ಬ್ಯಾಟಿಂಗ್ ಮುಂದು ವರೆಸಿದ್ದಾರೆ.
ಶಕೀಲ್ ಬಳಿಕ ಬ್ಯಾಟಿಂಗ್ಗೆ ಬಂದಿದ್ದ ತಯ್ಯಬ್ ತಾಹಿರ್ 4 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರು. ಜಡೇಜಾ ಎಸೆದ 36.1ನೇ ಓವರ್‌ನಲ್ಲಿ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಸೌದ್ ಶಕೀಲ್ಗೆ 35ನೇ ಓವರ್‌ನಲ್ಲಿ ವರದಾನ ಸಿಕ್ಕರೂ ವೈರ್ಥವಾಗಿದೆ. ಮುಂದಿನ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಬೌಂಡರಿ ಬಾರಿಸಲು ಯತ್ನಿಸಿದರು. ಈ ವೇಳೆ ಅಕ್ಷರ್ ಪಟೇಲ್ ಬೌಂಡರಿಯಲ್ಲಿ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿ ಆದರು.
ಪಾಕ್ ಪರ ಉತ್ತಮ ಬ್ಯಾಟಿಂಗ್ ಮಾಡಿ ಅರ್ಧಶತಕ ಸಿಡಿಸಿರುವ ಸೌದ್ ಶಕಿಲ್ ಅಕ್ಷರ್ ಪಟೆಲ್ ಎಸೆದ 35.5ನೇ ಓವರ್‌ನಲ್ಲಿ ಬೌಂಡರಿ ಬಾರಿಸಲು ಯತ್ನಿಸಿದರು. ಆದರೆ ಚೆಂಡು ಕುಲ್ದೀಪ್ ಕಡೆ ಅಪ್ಪಳಿಸಿದ್ದು ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು.
ಪಾಕಿಸ್ತಾನದ ಮೂರನೇ ವಿಕೆಟ್ ಪತನವಾಗಿದೆ. ಅರ್ಧಶತಕ ಹೊಸ್ತಿಲಲ್ಲಿದ್ದ ಮೊಹಮ್ಮದ್ ರಿಜ್ವಾನ್ 46 ರನ್ಗೆ ಪೆವಿಲಿಯನ್ ಸೇರಿದ್ದಾರೆ. ಅಕ್ಷರ್ ಪಟೆಲ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಪಾಕಿಸ್ತಾನದ ಮೂರನೇ ವಿಕೆಟ್ ಪತನವಾಗಿದೆ. ಮೊಹಮ್ಮದ್ ರಿಜ್ವಾನ್ 46 ರನ್ಗಳಿಸಿ ಔಟಾಗಿದ್ದಾರೆ.
ಸೌದ್ ಶಕೀಲ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದು ಅರ್ಧಶತಕ ಪೂರ್ಣಗೊಳಿಸಿದ್ದಾರೆ. 63 ಎಸೆತಗಳಲ್ಲಿ 50 ರನ್ ಬಾರಿಸಿದ್ದಾರೆ.
ಆರಂಭಿಕ 10 ಓವರ್ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡಿದ್ದ ಪಾಕ್ ಸದ್ಯ ಚೇತರಿಸಿಕೊಂಡಿದೆ. ತಂಡದ ಪರ ರಿಜ್ವಾನ್ 39 ರನ್, ಸೌದ್ ಶಕೀಲ್ 44 ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. 30 ಓವರ್ ಮುಕ್ತಾಯಕ್ಕೆ ಪಾಕ್ ಸ್ಕೋರ್ 129/2 ಆಗಿದೆ.
ವಿಕೆಟ್ ಕಳೆದುಕೊಂಡು ಆಘಾತದಲ್ಲಿದ್ದ ಪಾಕ್ಗೆ ರಿಜ್ವಾನ್ ಮತ್ತು ಶಕೀಲ್ ಆಸರೆ ಆಗಿದ್ದಾರೆ. ಇಬ್ಬರು ಉತಮ್ಮ ಬ್ಯಾಟಿಂಗ್ ಮಾಡಿದ್ದ ತಂಡದ ಸ್ಕೋರ್ 100ರ ಗಡಿಗೆ ಕೊಂಡೊಯ್ಯುವಲ್ಲಿ ಯಶಸ್ವಿ ಆಗಿದ್ದಾರೆ.
20 ಓವರ್ಗಳು ಮುಕ್ತಾಯಗೊಂಡಿದ್ದು ಪಾಕಿಸ್ತಾನದ ಸ್ಕೋರ್ 79/2 ಆಗಿದೆ. ರಿಜ್ವಾನ್ 14 ರನ್, ಶಕೀಲ್ 20 ರನ್ ಕಲೆಹಾಕಿದ್ದಾರೆ. ಭಾರತೀಯ ಬೌಲರ್ಗಳು ಉತ್ತಮ ಬೌಲಿಂಗ್ ಮಾಡುತ್ತಿದ್ದು ಹೆಚ್ಚನ ಡಾಟ್ ಬೌಲ್ ಮಾಡುತ್ತಿದ್ದಾರೆ.
ಪಾಕಿಸ್ತಾನ ನಾಲ್ಕು ಓವರ್‌ಗಳಿಲ್ಲಿ ಒಂದೆ ಒಂದು ಬೌಂಡರಿ ಬಾರಿಸಿಲ್ಲ. ಮತ್ತೊಂದೆಡೆ, ಡಾಟ್ ಬಾಲ್‌ಗಳು ಮುಂದುವರಿಯುತ್ತವೆ. 14 ಓವರ್‌ಗಳ ನಂತರ ಪಾಕಿಸ್ತಾನ ಸ್ಕೋರ್: 61/2 ಆಗಿದೆ.
ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ಮೊಣಕಾಲಿನ ಸಮಸ್ಯೆಯಿಂದಾಗಿ ಮೈದಾನ ತೊರೆದಿದ್ದ ಶಮು ಮಯದಾನಕ್ಕೆ ಮರಳಿದ್ದಾರೆ. ಅಲ್ಲದೆ 12ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಓವರ್‌ನಲ್ಲಿ ಮೂರು ರನ್ ಬಿಟ್ಟುಕೊಟ್ಟಿದ್ದಾರೆ.
- ಅಕ್ಷರ್ ರಾಕೆಟ್ ಥ್ರೋಗೆ ಇಮಾಮ್ ಔಟ್
ಪಂದ್ಯದ 9ನೇ ಓವರ್ ಎಸೆದ ಕುಲದೀಪ್ ಯಾದವ್ 3ನೇ ಎಸೆತದಲ್ಲಿ ಇಮಾಮ್ ಉಲ್ ಹಕ್ 10 ರನ್ಗಳಿಸಿ ರನ್ ಔಟಾದರು. ಒಂಟಿ ರನ್ ಕದಿಯಲು ಯತ್ನಿಸಿದ, ವೇಳೆ ಅಕ್ಷರ್ ಪಟೇಲ್ರ ರಾಕೆಟ್ ಥ್ರೋಗೆ ವಿಕೆಟ್ ನೀಡಿದರು.
- ಬಾಬರ್ಗೆ ಹಾರ್ದಿಕ್ ಪಾಂಡ್ಯ ಟಾಟಾ ಬೈ
ಪಂದ್ಯದ 8ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಎಸೆದ 2ನೇ ಎಸೆತದಲ್ಲಿ ಬಾಬರ್ ಅಜಮ್ ಔಟಾದರು. ನಾಲ್ಕನೇ ಸ್ಟಂಪ್ನಿಂದ ಹೊರಹೋಗುತ್ತಿದ್ದ ಚೆಂಡನ್ನು ತಡವಿದ ಬಾಬರ್, ವಿಕೆಟ್ ಕೀಪರ್ ಕೆಎಲ್ ರಾಹುಲ್ ಕ್ಯಾಚ್ ನೀಡಿದರು.
- 6 ಓವರ್ ಮುಕ್ತಾಯಕ್ಕೆ ಪಾಕಿಸ್ತಾನ 26-0 ರನ್ ಕಲೆಹಾಕಿತು. ಬಾಬರ್ ಅಜಮ್ 10 ರನ್, ಇಮಾಮ್ ಉಲ್ ಹಖ್ 9 ರನ್ ಗಳಿಸಿದ್ದಾರೆ.
- 4 ಓವರ್ ಮುಕ್ತಾಯದ ವೇಳೆಗೆ ಪಾಕಿಸ್ತಾನ ಯಾವುದೇ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿದೆ.
- ಆರಂಭಿಕರಾದ ಬಾಬರ್ ಅಜಮ್ 13 ರನ್ ಗಳಿಸಿದ್ದಾರೆ. ಇಮಾಮ್ ಉಲ್ ಹಖ್ 8 ರನ್ ಕಲೆಹಾಕಿದರು.