India vs New Zealand 3rd Test:ಮುಂಬೈನಲ್ಲಿ ಭಾರತ - ನ್ಯೂಜಿಲೆಂಡ್ 3 ನೇ ಟೆಸ್ಟ್ ಆರಂಭಗೊಂಡಿದೆ. ಟಾಸ್ ಗೆದ್ದ ಕಿವೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆತಿಥೇಯ ತಂಡ ಮೊದಲ ದಿನ ಬ್ಯಾಟಿಂಗ್ಗೆ ಒಲವು ತೋರಿ ನಂತರ ಸ್ಪಿನ್ಗೆ ಬೆಂಬಲ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ.
ಬ್ಯಾಟಿಂಗ್ ಆರಂಭಿಸಿದ ಕಿವೀಸ್ ತಂಡಕ್ಕೆ ಭಾರತ ಆಘಾತ ನೀಡಿದೆ. ನ್ಯೂಜಿಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಡೇವನ್ ಕಾನ್ವೇಗೆ ಆಕಾಶ್ ದೀಪ್ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಮೂರನೇ ಓವರ್ನ ಎರಡನೇ ಎಸೆತದಲ್ಲಿ 4 ರನ್ಗಳನ್ನು ಕಲೆ ಹಾಕಿದ್ದ ಡೇವನ್ ಕಾನ್ವೆ ಔಟಾದರು. ನಾಯಕ ಟಾಮ್ ಲ್ಯಾಥಮ್ ಮತ್ತು ವಿಲ್ ಯಂಗ್ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಈಗಾಗಲೇ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿರುವ ಭಾರತ ಕೊನೆಯ ಪಂದ್ಯವನ್ನು ಗೆದ್ದು ಗೌರವ ಉಳಿಸುವ ನಿರೀಕ್ಷೆಯಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ರೇಸ್‌ನಲ್ಲಿ ಮುನ್ನಡೆಯಲು ಟೀಮ್ ಇಂಡಿಯಾಕ್ಕೆ ಈ ಗೆಲುವು ಅನಿವಾರ್ಯವಾಗಿದೆ. ಸ್ಟಾರ್ ವೇಗಿ ಬುಮ್ರಾ ಅವರಿಗೆ ಆಡಳಿತ ಮಂಡಳಿ ವಿಶ್ರಾಂತಿ ನೀಡಿದೆ. ಸಿರಾಜ್ ಮತ್ತು ಆಕಾಶದೀಪ್ ವೇಗಿ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ನ್ಯೂಜಿಲೆಂಡ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಸೌಥಿ ಬದಲಿಗೆ ಹೆನ್ರಿ ಮತ್ತು ಶಾಟ್ನರ್ ಬದಲಿಗೆ ಐಶ್ ಸೋಧಿಗೆ ಅವಕಾಶ ಸಿಕ್ಕಿದೆ.