ದುಬೈ:ಸೋಲರಿಯದ ಸರದಾನಂತೆ ಮುನ್ನುಗ್ಗುತ್ತಿರುವ ಭಾರತ ಕ್ರಿಕೆಟ್ ತಂಡ ಮೂರು ಮಾದರಿಯಲ್ಲಿ ಅಗ್ರಸ್ಥಾನ ಪಡೆದು, ವಿಶ್ವ ಕ್ರಿಕೆಟ್ನ ಬಾಸ್ ಆಗಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳಲ್ಲಿ ಸರಣಿಯಲ್ಲಿ 4-1 ರಲ್ಲಿ ಗೆಲುವು ಸಾಧಿಸುವ ಮೂಲಕ ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ನಂಬರ್ 1 ಸ್ಥಾನದಲ್ಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಭಾನುವಾರ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಏಕದಿನ, ಟೆಸ್ಟ್ ಮತ್ತು ಟಿ20 ಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದುಕೊಳ್ಳುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿದೆ. 122 ರೇಟಿಂಗ್ ಹೊಂದಿರುವ ಭಾರತ ಟಾಪ್ 10 ಪಟ್ಟಿಯಲ್ಲಿ ಮೊದಲಿದ್ದರೆ, ಆಸ್ಟ್ರೇಲಿಯಾ 117 ರೇಟಿಂಗ್ನೊಂದಿಗೆ 2ನೇ ಸ್ಥಾನದಲ್ಲಿದೆ. 111, 101, 99 ರೇಟಿಂಗ್ ಪಡೆದು ಕ್ರಮವಾಗಿ ಇಂಗ್ಲೆಂಡ್, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ನಂತರದ ಸ್ಥಾನದಲ್ಲಿವೆ.
ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಫಲಿತಾಂಶ ಏನೇ ಬಂದರೂ, ಟೀಂ ಇಂಡಿಯಾದ ಸ್ಥಾನದಲ್ಲಿ ಯಾವುದೇ ಏರಿಳಿತ ಉಂಟಾಗದು. ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಸ್ಟ್ರೇಲಿಯಾ ಮೊದಲ ಟೆಸ್ಟ್‌ನ ಅನ್ನು 172 ರನ್‌ಗಳಿಂದ ಜಯಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಏಕದಿನದ ಸುಲ್ತಾನ್:ಇನ್ನೂ, ಏಕದಿನ ಶ್ರೇಯಾಂಕದಲ್ಲೂ ಅಗ್ರಜನಾಗಿರುವ ಭಾರತ ತಂಡ 121 ರೇಟಿಂಗ್ ಅಂಕಗಳನ್ನು ಹೊಂದಿದೆ. ಆಸ್ಟ್ರೇಲಿಯಾ 118 ಪಾಯಿಂಟ್ನೊಂದಿಗೆ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ (110), ಪಾಕಿಸ್ತಾನ (109), ನ್ಯೂಜಿಲ್ಯಾಂಡ್ (102) ನಂತರದ ಸ್ಥಾನದಲ್ಲಿವೆ.