ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್ ರೋಚಕ ಸೂಪರ್​-8; ಭಾರತದ ಎದುರಾಳಿಗಳ್ಯಾರು? ಪಂದ್ಯಗಳು ಯಾವಾಗ? - T20 World Cup Super Eight - T20 WORLD CUP SUPER EIGHT

ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​- 8 ಹಂತದ ಪಂದ್ಯಗಳು ಜೂನ್​ 19 ರಿಂದ ಆರಂಭವಾಗಲಿವೆ. ಭಾರತ ತಂಡದ ಪಂದ್ಯಗಳು ಸೇರಿದಂತೆ ಮುಂದಿನ ಹಂತಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ICC T20 World Cup 2024
ಭಾರತ ತಂಡ (Photo: IANS)

By ETV Bharat Karnataka Team

Published : Jun 17, 2024, 10:12 AM IST

ನ್ಯೂಯಾರ್ಕ್​; ಅಮೆರಿಕ ಹಾಗೂ ವೆಸ್ಟ್​ ಇಂಡೀಸ್ ಜಂಟಿಯಾಗಿ ಆಯೋಜಿಸಿರುವ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಬ್ಯಾಟರ್​ಗಳ ಅಬ್ಬರಕ್ಕಿಂತ, ಮೈದಾನದಲ್ಲಿ ಬೌಲರ್​ಗಳೇ ಚಮತ್ಕಾರ ತೋರುತ್ತಿದ್ದಾರೆ. ಬೌಲಿಂಗ್​ ಸ್ನೇಹಿ ಪಿಚ್​ಗಳಲ್ಲಿ ಬ್ಯಾಟರ್​ಗಳಿಗೆ ಅಗ್ನಿಪರೀಕ್ಷೆ ಎದುರಾಗುತ್ತಿದೆ. ಸದ್ಯ ಟೂರ್ನಿಯು ಸೂಪರ್​-8 ಹಂತದತ್ತ ತಲುಪುತ್ತಿದೆ. ಈ ಹಂತಕ್ಕೇರಿದ ತಂಡಗಳು ಯಾವುವು ಎಂಬುದು ಇದೀಗ ಅಧಿಕೃತವಾಗಿದೆ.

ಟಿ20 ವಿಶ್ವಕಪ್ ಸೂಪರ್​-8 ಹಂತದ ಹಣಾಹಣಿಗಳನ್ನು ಗುಂಪು ​1 ಹಾಗೂ ಗುಂಪು 2 ಎಂದು ವಿಂಗಡಣೆ ಮಾಡಲಾಗಿದೆ. ಗ್ರೂಪ್ 1ರಲ್ಲಿ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳಿವೆ. ಹಾಗೆಯೇ, ಗ್ರೂಪ್​ 2ರಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​, ವೆಸ್ಟ್​​ ಇಂಡೀಸ್ ಹಾಗೂ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಆಡುತ್ತಿರುವ ಅಮೆರಿಕ ತಂಡಗಳು ಸ್ಥಾನ ಪಡೆದಿವೆ.

ಸೂಪರ್​-8 ಹಂತದಲ್ಲಿ 12 ಪಂದ್ಯಗಳು ನಡೆಯಲಿವೆ. ತಲಾ ಒಂದು ತಂಡವು ಮೂರು ಪಂದ್ಯಗಳನ್ನು ಆಡಲಿದೆ. ಇಲ್ಲಿ ಹೆಚ್ಚು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ 2 ತಂಡಗಳು ಮುಂದಿನ ಹಂತ ಅಂದರೆ ಸೆಮಿಫೈನಲ್​ಗೆ ಪ್ರವೇಶ ಪಡೆಯಲಿವೆ. ಹೀಗಾಗಿ, ಈ ಹಂತವು ಇನ್ನಷ್ಟು ರೋಚಕತೆಯಿಂದ ಕೂಡಿರಲಿದೆ.

ಯಾವಾಗಿಂದ ಸೂಪರ್​-8 ಆರಂಭ: ಜೂನ್​ 2 ರಿಂದ ಆರಂಭವಾದ ಟೂರ್ನಿಯಲ್ಲಿ ಈಗಾಗಲೇ 38 ಪಂದ್ಯಗಳು ನಡೆದಿವೆ. ಇನ್ನೆರಡು ಮ್ಯಾಚ್​ಗಳ ಬಳಿಕ, ಅಂದರೆ 40 ಪಂದ್ಯಗಳ ನಂತರ ಸೂಪರ್​-8 ಫೈಟ್​ ಶುರುವಾಗಲಿದೆ. ಈ ಹಂತದ ಮೊದಲ ಪಂದ್ಯದಲ್ಲಿ ಜೂನ್​ 19 ರಂದು ಅಮೆರಿಕ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಎದುರಾಗಲಿವೆ.

ಭಾರತ ತಂಡದ ಪಂದ್ಯಗಳು:ರೋಹಿತ್​ ಶರ್ಮಾ ಪಡೆಯು ಜೂನ್​ 20ರಂದು ಅಫ್ಘಾನಿಸ್ತಾನದ ವಿರುದ್ಧ ಈ ಹಂತದ ಮೊದಲ ಪಂದ್ಯವನ್ನು ಆಡಲಿದೆ. ಬಳಿಕ ಜೂನ್​ 22ರಂದು ಬಾಂಗ್ಲಾದೇಶ ಹಾಗೂ ಜೂನ್​ 24ರಂದು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಭಾರತ ಕಣಕ್ಕಿಳಿಯಲಿದೆ. ಟೀಂ ಇಂಡಿಯಾದ ಎಲ್ಲ ಪಂದ್ಯಗಳೂ ಕೂಡ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿವೆ.

ಇದನ್ನೂ ಓದಿ:ರೋಹಿತ್​, ವಿರಾಟ್​ ಮುಂದಿನ ಪಂದ್ಯಗಳಲ್ಲಿ ರನ್​ ಗಳಿಸಿದರೆ ಹಿರಿತನ ಸಾಬೀತಾಗುತ್ತದೆ: ಸಂಜಯ್​ ಮಾಂಜ್ರೇಕರ್​ - MANJREKAR INTERVIEW

ಮುಂದಿನ ಹಂತಗಳು:ಸೂಪರ್​-8 ಬಳಿಕ ಸೆಮಿಫೈನಲ್​ ಹಾಗೂ ಫೈನಲ್​ ಪಂದ್ಯಗಳು ನಡೆಯಲಿವೆ. ಜೂನ್​ 26ರಂದು ಟ್ರಿನಿಡಾಡ್​ನಲ್ಲಿ ಮೊದಲ ಸೆಮಿಫೈನಲ್​ ಹಾಗೂ ಜೂನ್​ 27ರಂದು ಗಯಾನಾದಲ್ಲಿ ಎರಡನೇ ಸೆಮಿಫೈನಲ್​ ಪಂದ್ಯವಿದೆ. ಜೂನ್​ 29ರಂದು ಟೂರ್ನಿಯ ಅಂತಿಮ ಪಂದ್ಯ ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ.

2024ರ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ 20 ತಂಡಗಳು ಭಾಗವಹಿಸಿವೆ. ಈಗಾಗಲೇ ಬಲಿಷ್ಠ ತಂಡವಾದ ನ್ಯೂಜಿಲೆಂಡ್​ ಹಾಗೂ ಮಾಜಿ ಚಾಂಪಿಯನ್​ ಶ್ರೀಲಂಕಾ ತಂಡಗಳು ಕಳಪೆ ಪ್ರದರ್ಶನದಿಂದ ಟೂರ್ನಿಯಿಂದ ಹೊರಬಿದ್ದಿವೆ. ಸೂಪರ್​-8ಕ್ಕೆ ಅಚ್ಚರಿಯ ಪ್ರವೇಶ ಮಾಡಿರುವ ಅಮೆರಿಕ, ಜೊತೆಗೆ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳನ್ನೂ ಕೂಡ ಈ ಹಂತದಲ್ಲಿ ಲಘುವಾಗಿ ಪರಿಗಣಿಸುವಂತಿಲ್ಲ. ತಂಡಗಳು ಸೆಮಿಫೈನಲ್​ಗೇರಲು ಎಲ್ಲ ಪಂದ್ಯಗಳೂ ಕೂಡ ಮಹತ್ವದ್ದಾಗಿವೆ.

ಇದನ್ನೂ ಓದಿ:ಐರ್ಲೆಂಡ್​ ವಿರುದ್ಧ ಪ್ರಯಾಸದ ಗೆಲುವು; ಟಿ20 ವಿಶ್ವಕಪ್​ನಿಂದ ಪಾಕ್​ ನಿರ್ಗಮನ - Pakistan beats Ireland

ABOUT THE AUTHOR

...view details