ದಕ್ಷಿಣ ಆಫ್ರಿಕಾ ವಿರುದ್ಧ ಟಿ-20ಯಲ್ಲಿ ಮೊದಲ ಬಾರಿಗೆ ಗೆಲ್ಲುವ ಸಾಧಿಸುವ ಉತ್ಸಾಹದಲ್ಲಿದ್ದ ಬಾಂಗ್ಲಾದೇಶ ಕೊನೆಗೂ ಸೋಲು ಅನುಭವಿಸಿದೆ. ಬಾಂಗ್ಲಾ ತಂಡ 114 ರನ್‌ಗಳ ಸಣ್ಣ ಗುರಿ ತಲುಪಲು ವಿಫಲರಾಗಿ ಅಂತಿಮವಾಗಿ ಸೋತು ಶರಣಾಯಿತು. ದಕ್ಷಿಣ ಆಫ್ರಿಕಾ 4 ರನ್ ಗಳಿಂದ ಗೆದ್ದು ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ಈ ಗೆಲುವಿನೊಂದಿಗೆ, ದಕ್ಷಿಣ ಆಫ್ರಿಕಾ ಪ್ರಸ್ತುತ ಮೂರು ಜಯ ಮತ್ತು ಆರು ಪಾಯಿಂಟ್‌ಗಳೊಂದಿಗೆ ಡಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಸೂಪರ್-8 ರಲ್ಲೂ ಸ್ಥಾನ ಗಿಟ್ಟಿಸಿಕೊಳ್ಳಲು ಬಹುತೇಕ ಖಚಿತ ಎಂಬಂತೆ ಕಾಣುತ್ತಿದೆ.
ಸೋಮವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 113 ರನ್ ಗಳಿಸಿತು. ಬಾಂಗ್ಲಾ ಬೌಲರ್‌ಗಳಾದ ತಂಜಿಮ್ ಹಸನ್ (3/18) ಮತ್ತು ತಸ್ಕಿನ್ ಅಹ್ಮದ್ (2/19) ಭರ್ಜರಿ ಮಿಂಚಿದರು. ಪಂದ್ಯ ಶ್ರೇಷ್ಠ ಆಟಗಾರ ಕ್ಲಾಸೆನ್ (46; 44 ಎಸೆತಗಳಲ್ಲಿ 2x4, 3x6), ಮಿಲ್ಲರ್ (29; 38 ಎಸೆತಗಳಲ್ಲಿ 1x4, 1x6) ಮತ್ತು ಡಿ ಕಾಕ್ (18) ಗಳಿಸಿ ಗಮನ ಸೆಳೆದರು. ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದ ಸೂಪರ್ ಬೌಲಿಂಗ್ನಿಂದ ಚಿಕ್ಕ ಟಾರ್ಗೆಟ್ ನೀಡಿತು.
ಚೇಸಿಂಗ್ನಲ್ಲಿ ಬಾಂಗ್ಲಾ ತಂಡವು ತತ್ತರಿಸಿತು. 7 ವಿಕೆಟ್‌ಗೆ 109 ರನ್ ಗಳಿಸಲು ಶಕ್ತವಾಯಿತು. ತಂಡದ ಹೃದಯೋಯ್ (37) ಗರಿಷ್ಠ ಸ್ಕೋರರ್. ಮಹಮ್ಮದುಲ್ಲಾ (20) ರನ್ ಗಳಿಸಿದರು. ದಕ್ಷಿಣ ಆಫ್ರಿಕಾದ ಬೌಲರ್‌ಗಳಾದ ಕೇಶವ್ ಮಹಾರಾಜ್ (3/27), ರಬಾಡ (2/19) ಮತ್ತು ನೋಕಿಯಾ (2/17) ಬಾಂಗ್ಲಾ ತಂಡಕ್ಕೆ ಭಾರಿ ಕಾಟಕೊಟ್ಟರು ತಂಡವನ್ನು ಹಾನಿಗೊಳಿಸಿದರು.
ಕೊನೆಯಲ್ಲಿ ಬಾಂಗ್ಲಾ ತತ್ತರ: ಅಗ್ರ ಕ್ರಮಾಂಕದ ಆಟಗಾರರ ವೈಫಲ್ಯದಿಂದ ಬಾಂಗ್ಲಾದೇಶ 50 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಆ ವೇಳೆ ತೌಹೀದ್ ಹೃದಯೋಯ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಯತ್ನಿಸಿದರು. ಮಹಮ್ಮದುಲ್ಲಾ ಅವರಿಗೆ ಸಹಾಯ ಮಾಡಿದರು. ಇಬ್ಬರೂ ಸಾಧ್ಯವಾದಾಗಲೆಲ್ಲಾ ಬೌಂಡರಿ ಬಾರಿಸುವ ಮೂಲಕ ಸ್ಕೋರ್ ಬೋರ್ಡ್ ಅನ್ನು ಮುಂದಕ್ಕೆ ತಳ್ಳಿದರು. ಆದರೆ, 18ನೇ ಓವರ್‌ನಲ್ಲಿ ರಬಾಡ ಕೇವಲ 2 ರನ್ ನೀಡಿ ಅಬ್ಬರದ ಆಟವಾಡುತ್ತಿದ್ದ ಹೃದಯೋಯ್ ಅವರನ್ನು ಔಟ್ ಮಾಡಿ ಪಂದ್ಯಕ್ಕೆ ತಿರುವು ನೀಡಿದರು. ಕೊನೆಯ ಓವರ್‌ನಲ್ಲಿ 11 ರನ್‌ಗಳ ಅಗತ್ಯವಿದ್ದಾಗ ಸ್ಪಿನ್ನರ್ ಕೇಶವ್ 6 ರನ್ ನೀಡಿ ಎರಡು ವಿಕೆಟ್ ಪಡೆದರು. ಇದರಿಂದ ಬಾಂಗ್ಲಾ ತಂಡ ತುಂಬಾ ನಿರಾಸೆ ಅನುಭವಿಸಿತು.
ಇದನ್ನೂ ಓದಿ:'ಭಾರತ ಗೆಲ್ಲಲಿಲ್ಲ, ಪಾಕಿಸ್ತಾನ ಸೋತಿತು': ಪಾಕ್ ಮಾಜಿ ನಾಯಕ ಮುಷ್ತಾಕ್ ಮೊಹಮ್ಮದ್ - Mushtaq Mohammad