ಕರ್ನಾಟಕ

karnataka

ETV Bharat / sports

ಐಪಿಎಲ್: ನಾಯಕತ್ವ ಬಿಕ್ಕಟ್ಟಿನ ನಡುವೆ ಮೈದಾನದಲ್ಲಿ ತಬ್ಬಿಕೊಂಡ ಹಾರ್ದಿಕ್​-ರೋಹಿತ್ - IPL 2024 - IPL 2024

ನಿರ್ಗಮಿತ ನಾಯಕ ರೋಹಿತ್ ಶರ್ಮಾ ಮತ್ತು ನೂತನ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಅಭ್ಯಾಸ ವೇಳೆ ತಬ್ಬಿಕೊಂಡ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ತಂಡ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ಹಾರ್ದಿಕ್​- ರೋಹಿತ್​ ಶರ್ಮಾ
ಹಾರ್ದಿಕ್​- ರೋಹಿತ್​ ಶರ್ಮಾ

By ANI

Published : Mar 21, 2024, 11:44 AM IST

ಮುಂಬೈ (ಮಹಾರಾಷ್ಟ್ರ):ಕ್ರಿಕೆಟ್​ ಹಬ್ಬ ಎಂದೇ ಕರೆಯುವ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಶುಕ್ರವಾರದಿಂದ (ಮಾರ್ಚ್​ 22) ವಿದ್ಯುಕ್ತ ಚಾಲನೆ ಪಡೆಯಲಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ನಾಯಕನಾಗಿ ಆಯ್ಕೆಯಾದ ಹಾರ್ದಿಕ್​ ಪಾಂಡ್ಯ ಮೊದಲ ಬಾರಿಗೆ ನಿರ್ಗಮಿತ ನಾಯಕ ರೋಹಿತ್ ಶರ್ಮಾ ಅವರನ್ನು ಮೈದಾನದಲ್ಲಿ ಎದುರಾದರು.

ಮುಂಬೈ ತಂಡದ ಅತಿ ಯಶಸ್ವಿ ನಾಯಕ ರೋಹಿತ್​ ಶರ್ಮಾ ಅವರನ್ನು ಹುದ್ದೆಯಿಂದ ಕೈಬಿಟ್ಟು, ಗುಜರಾತ್​ ಟೈಟಾನ್ಸ್​ನಿಂದ ವಲಸೆ ಬಂದ ಹಾರ್ದಿಕ್​ಗೆ ಮಣೆ ಹಾಕಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು. ಅದಾದ ಬಳಿಕ ಇಬ್ಬರು ಆಟಗಾರರು ಎಲ್ಲಿಯೂ ಎದುರಾಗಿರಲಿಲ್ಲ. ತಂಡ ಅಭ್ಯಾಸ ನಡೆಸುತ್ತಿರುವ ವೇಳೆ ಹಾರ್ದಿಕ್​ ತಾವೇ ಬಂದು ರೋಹಿತ್​ ಶರ್ಮಾರನ್ನು ತಬ್ಬಿಕೊಂಡ ವಿಡಿಯೋವನ್ನು ಎಂಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

2023 ರ ನವೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಎರಡೂ ಫ್ರಾಂಚೈಸಿಗಳ ನಡುವಿನ ವ್ಯಾಪಾರದ ಭಾಗವಾಗಿ ಪಾಂಡ್ಯ ಗುಜರಾತ್ ಟೈಟಾನ್ಸ್​ನಿಂದ ಮುಂಬೈ ತಂಡವನ್ನು ಮರು ಸೇರಿಕೊಂಡರು. ಆಲ್‌ರೌಂಡರ್ ಹಾರ್ದಿಕ್​ ಗುಜರಾತ್ ತಂಡವನ್ನು 2 ಸೀಸನ್​ನಲ್ಲಿ ಮುನ್ನಡೆಸಿ, ತಂಡದ ಮೊದಲ ಆವೃತ್ತಿಯಲ್ಲೇ ಟ್ರೋಫಿ ತಂದುಕೊಟ್ಟಿದ್ದರು.

ರೋಹಿತ್​ಗೆ ಅಭಿಮಾನಿಗಳ ಬೆಂಬಲ:ಮುಂಬೈ ಇಂಡಿಯನ್ಸ್​ ತಂಡಕ್ಕೆ ಹಿರಿಯ ಆಟಗಾರ ರೋಹಿತ್​ ಶರ್ಮಾ ಐದು ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. 17ನೇ ಸೀಸನ್​ಗೆ ಹಾರ್ದಿಕ್​ ಪಾಂಡ್ಯರನ್ನು ಮರಳಿ ಕರೆತಂದು ನಾಯಕತ್ವ ಪಟ್ಟ ನೀಡಿದ್ದು, ರೋಹಿತ್​ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ. ಉಭಯ ಆಟಗಾರರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಟಾಕ್​ವಾರ್​ ನಡೆದಿತ್ತು. ಐದು ಬಾರಿ ಐಪಿಎಲ್ ವಿಜೇತ ನಾಯಕನ ಕೊಡುಗೆಯನ್ನು ಸ್ಮರಿಸದೆ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಮೂಲಕ ತಂಡವು ದ್ರೋಹ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಇದರ ನಡುವೆಯೇ ಇಬ್ಬರು ಆಟಗಾರರು ಮೈದಾನದಲ್ಲಿ ಅಪ್ಪಿಕೊಂಡಿರುವುದು ಮಹತ್ವ ಪಡೆದಿದೆ.

ನಾಯಕತ್ವ ಬಗ್ಗೆ ಗಪ್​ಚುಪ್​:ಈಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ತಂಡದ ನಾಯಕತ್ವ ಬದಲಾವಣೆ ಬಗ್ಗೆ ಕೋಚ್​ ಮಾರ್ಕ್​ ಬೌಚರ್ ಮತ್ತು ಹಾರ್ದಿಕ್​ ಪಾಂಡ್ಯ ಮೌನ ತಳೆದಿದ್ದರು. ಮಾಧ್ಯಮಗಳು ಕೇಳಿದ ನಾಯಕತ್ವ ಗುದ್ದಾಟ ಬಗ್ಗೆ ಹಾರ್ದಿಕ್​ ತುಟಿಪಿಟಕ್​ ಅನ್ನಲಿಲ್ಲ. ಮುಖ್ಯ ತರಬೇತುದಾರ ಮಾರ್ಕ್ ಬೌಚರ್ ಕೂಡ ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿದ ಕಾರಣದ ಬಗ್ಗೆ ಮೌನ ವಹಿಸಿದ್ದರು. ಇದಾದ ಬಳಿಕ, ರೋಹಿತ್​ ಶರ್ಮಾ ಅವರು ಬ್ಯಾಟಿಂಗ್​ನಲ್ಲಿ ಹೆಚ್ಚು ಮಿಂಚಲಿ ಎಂಬ ಕಾರಣಕ್ಕಾಗಿ ನಾಯಕತ್ವ ಬದಲಿಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದರು.

ಇದನ್ನೂ ಓದಿ:ಐಪಿಎಲ್ 2024: ಜಿಯೋ ಸಿನಿಮಾದಲ್ಲಿ 12 ಭಾಷೆಗಳಲ್ಲಿ ವೀಕ್ಷಕ ವಿವರಣೆ, ಹೀಗಿದೆ ದಿಗ್ಗಜರ ಪಟ್ಟಿ

ABOUT THE AUTHOR

...view details