ಅಹಮದಾಬಾದ್:ಐಪಿಎಲ್ನ 32ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇನ್ನಿಂಗ್ಸ್ವೊಂದರಲ್ಲಿ 67 ಬಾಲ್ಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಅತಿ ದೊಡ್ಡ ಗೆಲುವಾಗಿದೆ.
ಇಲ್ಲಿನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ನೀಡಿದ್ದ 89 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ 8.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿಯನ್ನು ತಲುಪುವ ಮೂಲಕ ಗೆಲುವಿನ ನಗೆ ಬೀರಿತು. ಡೆಲ್ಲಿ ಪರ ಫ್ರೇಸರ್-ಮೆಕ್‌ಗುರ್ಕ್ (20), ಶಾಯ್ ಹೋಪ್ (19) ಮತ್ತು ರಿಷಬ್ ಪಂತ್ (16) ರನ್ ಕೊಡುಗೆ ನೀಡಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.
ಇದಕ್ಕೂ ಮನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ಅಲ್ಪಮೊತ್ತಕ್ಕೆ ಕುಸಿಯಿತು. 17.3 ಓವರ್ಗಳಲ್ಲಿ ಕೇವಲ 89 ರನ್ಗಳಿಗೆ ಸರ್ವಪತನ ಕಂಡಿತು. ಗುಜರಾತ್ ಪರ ರಶೀದ್ ಖಾನ್ ಗರಿಷ್ಠ ಸ್ಕೋರರ್ ಆಗಿದ್ದಾರೆ. ಎಂಟನೇ ಕ್ರಮಾಂಕದಲ್ಲಿ ಬಂದ ರಶೀದ್ 24 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಮೇತ 31 ರನ್ ಗಳಿಸಿದರು.
ಆರಂಭದಿಂದಲೇ ನಾಯಕ ಶುಭ್‌ಮನ್ ಗಿಲ್ ತಂಡವು ನಿರೀಕ್ಷಿತ ರನ್ ಗಳಿಸುವಲ್ಲಿ ವಿಫಲವಾಯಿತು. 48 ರನ್‌ಗಳಿಸುವಷ್ಟರಲ್ಲೆ ಪ್ರಮುಖ 6 ವಿಕೆಟ್‌ಗಳು ಕಳೆದುಕೊಂಡಿತು. ನಾಯಕ ಶುಭ್‌ಮನ್ ಗಿಲ್ (8), ಅಭಿನವ್ ಮನೋಹರ್ (8), ವೃದ್ಧಿಮಾನ್ ಸಹಾ (2), ಮೋಹಿತ್ ಶರ್ಮಾ (2), ಡೇವಿಡ್ ಮಿಲ್ಲರ್ (2) ಮತ್ತು ನೂರ್ ಅಹ್ಮದ್ (1) ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ.
ಸಾಯಿ ಸುದರ್ಶನ್ 12 ರನ್ ಮತ್ತು ರಾಹುಲ್ ತೆವಾಟಿಯಾ 10 ರನ್ ಕೊಡುಗೆ ನೀಡಿದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಶಾರುಖ್ ಖಾನ್ ಶೂನ್ಯಕ್ಕೆ ನಿರ್ಗಮಿಸಿದರು. ಅಂತಿಮವಾಗಿ ಕೇವಲ 89 ರನ್ಗಳನ್ನು ಕಲೆ ಹಾಕಲು ಗುಜರಾತ್ ತಂಡಕ್ಕೆ ಸಾಧ್ಯವಾಯಿತು. ಡೆಲ್ಲಿ ಪರ ಮುಖೇಶ್ ಕುಮಾರ್ 3, ಇಶಾಂತ್ ಶರ್ಮಾ ಮತ್ತು ಟ್ರಿಸ್ಟಾನ್ ಸ್ಟಬ್ಸ್ ತಲಾ ಎರಡು ವಿಕೆಟ್ ಕಬಳಿಸಿದರು. ಖಲೀಲ್ ಅಹ್ಮದ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.