Gambir On Ricky Ponting: ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ವಿರುದ್ಧ ಕಿಡಿಕಾರಿದ್ದಾರೆ. ಪಾಂಟಿಂಗ್ ಇತ್ತೀಚೆಗೆ ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಫಾರ್ಮ್ ಅನ್ನು ಟೀಕಿಸಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಗಂಭೀರ್, "ಪಾಂಟಿಂಗ್‌ಗೂ ಭಾರತೀಯ ಕ್ರಿಕೆಟ್‌ಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಅವರು ಮೊದಲು ಆಸ್ಟ್ರೇಲಿಯಾ ಕ್ರಿಕೆಟ್ ಬಗ್ಗೆ ಕಾಳಜಿ ವಹಿಸಿದರೆ ಉತ್ತಮ" ಎಂದರು.
ಬಾರ್ಡರ್ ಗವಾಸ್ಕರ್ ಟೂರ್ನಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಗಂಭೀರ್ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ್ದಾರೆ.
"ಕೊಹ್ಲಿ-ರೋಹಿತ್ ಉತ್ತಮ ಲಯದಲ್ಲಿದ್ದಾರೆ. ಅವರು ಸಾಬೀತಾದ ಆಟಗಾರರು. ಕಳೆದ ಸರಣಿಯ ಫಲಿತಾಂಶ ಅವರಿಬ್ಬರಲ್ಲಿ ಕಿಚ್ಚು ಹೆಚ್ಚಿಸಿದೆ" ಎಂದು ಗಂಭೀರ್ ಹೇಳಿದರು.
ಪಾಂಟಿಂಗ್ ಹೇಳಿದ್ದೇನು?:ಇತ್ತೀಚೆಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಫಾರ್ಮ್ ಬಗ್ಗೆ ಪಾಂಟಿಂಗ್ ಮಾತನಾಡಿದ್ದರು. ವಿರಾಟ್ ಕೊಹ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಟೆಸ್ಟ್ನಲ್ಲಿ ಕೇವಲ ಎರಡು ಶತಕಗಳನ್ನು ಮಾತ್ರ ಸಿಡಿಸಿದ್ದಾರೆ. ಅಲ್ಲದೇ ಕೊಹ್ಲಿ ಸ್ಥಾನದಲ್ಲಿ ಬೇರಾವುದೇ ಆಟಗಾರರಿದ್ದರೂ ಇಲ್ಲಿಗೆ ಅವರ ಅಂತಾರಾಷ್ಟ್ರೀಯ ಕೆರಿಯರ್ ಮುಕ್ತಾಯವಾಗುತಿತ್ತು. ಫೇಮ್ ಇರುವ ಕಾರಣ ಈಗಲೂ ತಂಡದಲ್ಲಿದ್ದಾರೆ ಎಂದು ಟಾಂಗ್ ಕೊಟ್ಟಿದ್ದರು.
ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳಾಪಟ್ಟಿ:ನವೆಂಬರ್ 22ರಿಂದ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಭಾಗವಾಗಿ ಭಾರತ ಎದುರಿಸಲಿರುವ ಕೊನೆಯ ಸರಣಿ. ವಿಶ್ವ ಟೆಸ್ಟ್ ಚಾಂಪಿಯನ್ಸ್ ಫೈನಲ್ ತಲುಪಲು ರೋಹಿತ್ ಪಡೆಗೆ ಈ ಸರಣಿ ನಿರ್ಣಾಯಕವಾಗಿದೆ. ಇದರಲ್ಲಿ ಕನಿಷ್ಠ 4 ಪಂದ್ಯಗಳನ್ನು ಭಾರತ ಗೆಲ್ಲಲೇಬೇಕಿದೆ. ಹಾಗಾದಲ್ಲಿ ಮಾತ್ರ ಟೀಂ ಇಂಡಿಯಾ ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸದೇ ನೇರವಾಗಿ WTC ಫೈನಲ್ ತಲುಪಲು ಸಾಧ್ಯವಿದೆ.
ಇದನ್ನೂ ಓದಿ:ಕ್ರಿಕೆಟ್ ಇತಿಹಾಸದಲ್ಲೇ ಹೆಚ್ಚು ಬಾರಿ ರನೌಟ್: ಇದರಲ್ಲಿದ್ದಾರೆ ಭಾರತದ ಲೆಜೆಂಡರಿ ಆಟಗಾರರು!