ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾ ಕೋಚ್​ ಹುದ್ದೆಗಾಗಿ ಕೆಕೆಆರ್​ ಫ್ರಾಂಚೈಸಿ ಬಿಡ್ತಾರಾ ಗೌತಮ್​ ಗಂಭೀರ್​? - Gautam Gambhir - GAUTAM GAMBHIR

ಟೀಂ ಇಂಡಿಯಾದ ಕೋಚ್​ ಹುದ್ದೆಗೆ ಕೆಕೆಆರ್​ ತಂಡದ ಮೆಂಟರ್​ ಆಗಿ ಸಕ್ಸಸ್​ ಆಗಿರುವ ಗೌತಮ್​ ಗಂಭೀರ್​ ಅವರ ಹೆಸರು ಕೇಳಿ ಬರುತ್ತಿದೆ. ಆದರೆ, ಮಾಲೀಕ ಶಾರೂಖ್​ ಖಾನ್​ ಮಾಜಿ ಕ್ರಿಕೆಟಿಗನನ್ನು ಬಿಟ್ಟುಕೊಡುತ್ತಾರಾ ಎಂಬುದು ಪ್ರಶ್ನೆಯಾಗಿದೆ.

ಗೌತಮ್​ ಗಂಭೀರ್​
ಗೌತಮ್​ ಗಂಭೀರ್​ (IANS Photo)

By ETV Bharat Karnataka Team

Published : May 27, 2024, 9:39 PM IST

ನವದೆಹಲಿ:ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಚಾಂಪಿಯನ್‌ ಆದ ಬಳಿಕ ತಂಡದ ಮೆಂಟರ್​ ಆಗಿರುವ ಗೌತಮ್‌ ಗಂಭೀರ್‌ ಅವರ ಬೇಡಿಕೆಯ ರೇಟಿಂಗ್​ ಏರಿದೆ. ಭಾರತದ ಮಾಜಿ ಆಟಗಾರನ ಮಾರ್ಗದರ್ಶನ ಕೆಕೆಆರ್​ ಮೂರನೇ ಐಪಿಎಲ್​ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿತು ಎಂಬುದು ಸದ್ಯದ ವಿಶ್ಲೇಷಣೆ.

ಗಂಭೀರ್​ ಅವರು ಈ ಹಿಂದೆ ತಂಡದ ನಾಯಕರಾಗಿದ್ದಾಗ ಎರಡು ಟ್ರೋಫಿಗಳನ್ನು ಗೆದ್ದಿದ್ದರು. ಇದೀಗ ಮೆಂಟರ್ ಆದ ಬಳಿಕ ದಶಕದ ನಂತರ ತಂಡ ಟ್ರೋಫಿ ಗೆಲ್ಲುವಂತೆ ಮಾಡಿದ್ದಾರೆ. ಈ ಗೆಲುವಿನ ನಂತರ ಅವರು ಟೀಂ ಇಂಡಿಯಾದ ಮುಖ್ಯ ತರಬೇತುದಾರ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿದೆ.

ರಾಹುಲ್​ ದ್ರಾವಿಡ್​ ಅವರು ಭಾರತ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯುತ್ತಿದ್ದು, ಅವರ ಜಾಗಕ್ಕೆ ಹೊಸ ಕೋಚ್​ಗಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಹಲವರು ಹೆಸರುಗಳು ಕೇಳಿಬಂದಿವೆ. ಈ ರೇಸ್​ನಲ್ಲಿ ಗಂಭೀರ್ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಐಪಿಎಲ್​ನ 17ನೇ ಋತುವಿನಲ್ಲಿ ಕೆಕೆಆರ್​ ಮೆಂಟರ್ ಆಗಿರುವ ಗಂಭೀರ್, ಭಾರತ ತಂಡದ ಮುಖ್ಯ ಕೋಚ್ ಆಗಲು ಫ್ರಾಂಚೈಸಿ ತೊರೆಯುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಓದಿ: IPL Final: ದಶಕಗಳ ಬಳಿಕ ಚಾಂಪಿಯನ್​ ಪಟ್ಟಕೇರಿದ​ ಕೆಕೆಆರ್​​ ​ - KKR won the IPL trophy

ಖಾಲಿ ಚೆಕ್​ ನೀಡಿ ಸ್ವಾಗತಿಸಿದ್ದ ಶಾರೂಖ್​?:ದಶಕದಿಂದ ಪ್ರಶಸ್ತಿ ಬರ ಎದುರಿಸುತ್ತಿದ್ದ ಕೆಕೆಆರ್ ತಂಡಕ್ಕೆ ಗೌತಮ್​ ಗಂಭೀರ್​ ಅವರನ್ನು ಮಾಲೀಕ ಶಾರೂಖ್​ ಖಾನ್ ಖಾಲಿ ಚೆಕ್​ ನೀಡಿ ಬರ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ. ತಂಡದ ಜೊತೆ 10 ವರ್ಷ ಉಳಿಯಬೇಕು ಎಂದು ಖಾನ್​ ಮನವಿ ಮಾಡಿದ್ದರು ಎನ್ನಲಾಗಿದೆ. ಇದೀಗ ತಂಡ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿದೆ. ಇಂತಿಪ್ಪ ಗಂಭೀರ್​ ಅವರು ಭಾರತ ತಂಡಕ್ಕಾಗಿ ಫ್ರಾಂಚೈಸಿ ಬಿಡುವ ನಿರ್ಧಾರ ತಳೆಯಲಿದ್ದಾರೆ ಎಂಬುದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ.

2012, 2014 ರಲ್ಲಿ ಕೆಕೆಆರ್​ ತಂಡದ ನಾಯಕರಾಗಿ ಎರಡು ಐಪಿಎಲ್​ ಟ್ರೋಫಿಗಳನ್ನು ಗಂಭೀರ್​ ಗೆಲ್ಲಿಸಿಕೊಟ್ಟಿದ್ದಾರೆ. ಇದೀಗ ಮೆಂಟರ್​ ಆಗಿಯೂ ಸಕ್ಸಸ್​ ಕಂಡಿದ್ದಾರೆ. ಕೋಲ್ಕತ್ತಾ ಅಭಿಮಾನಿಗಳು ಕೂಡ ಮಾಜಿ ಕ್ರಿಕೆಟಿಗನ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಅವರು ತಂಡ ತೊರೆಯದಿರಲಿ ಎಂದು ಒತ್ತಾಯಿಸಿದ್ದಾರೆ.

ಈ ಮಧ್ಯೆ, ಐಪಿಎಲ್​ ಫೈನಲ್​ ಪಂದ್ಯದ ನಂತರ ಗೌತಮ್​ ಗಂಭೀರ್ ಅವರನ್ನು ಬಿಸಿಸಿಐ ಅಧಿಕಾರಿಗಳು ಚೆನ್ನೈನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅಂದಹಾಗೆ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದೆ.

ಇದನ್ನೂ ಓದಿ:'ಸತ್ಯವಂತರ ರಥವನ್ನು ಶ್ರೀ ಕೃಷ್ಣ ಮುನ್ನಡೆಸುತ್ತಾನೆ': ಕೆಕೆಆರ್​ ಮೆಂಟರ್​ ಗೌತಮ್ ಗಂಭೀರ್​ - Gautam Gambhir

ABOUT THE AUTHOR

...view details