ಕರ್ನಾಟಕ

karnataka

ETV Bharat / sports

IPL​ ಮೆಗಾ ಹರಾಜಿನಲ್ಲಿ 6 ಪ್ರಮುಖ ಬೌಲರ್‌ಗಳು: ಈ ಇಬ್ಬರ ಮೇಲೆ RCB ಕಣ್ಣು - IPL MEGA AUCTION 2025

ಮುಂಬರುವ ಐಪಿಎಲ್​ ಮೆಗಾ ಹರಾಜಿನಲ್ಲಿ ಇಬ್ಬರು ವೇಗದ ಬೌಲರ್​ಗಳನ್ನು ಪಡೆಯಲು ಆರ್​ಸಿಬಿ ಸಿದ್ಧತೆ ನಡೆಸುತ್ತಿದೆ.

ಮಿಚೆಲ್​ ಸ್ಟಾರ್ಕ್​
ಮಿಚೆಲ್​ ಸ್ಟಾರ್ಕ್​ (IANS)

By ETV Bharat Sports Team

Published : Nov 15, 2024, 11:15 AM IST

IPL Mega Auction:ಮುಂದಿನ ವರ್ಷ ನಡೆಯಲಿರುವ 18ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ (IPL) ಈಗಿನಿಂದಲೇ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಆಟಗಾರರ ಮೆಗಾ ಹರಾಜು. ಈ ಬಾರಿ ಬಿಸಿಸಿಐ ಹೊಸ ಧಾರಣ ನೀತಿ ಜಾರಿಗೊಳಿಸಿರುವ ಕಾರಣ ಬಹುತೇಕ ತಂಡಗಳು ಕೆಲವು ಆಟಗಾರರನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನು ಹರಾಜಿಗೆ ಬಿಡುಗಡೆ ಮಾಡಿವೆ. ಈ ಹಿನ್ನೆಲೆಯಲ್ಲಿ ಸ್ಟಾರ್​ ಆಟಗಾರರು ಹರಾಜಿನಲ್ಲಿದ್ದಾರೆ. ಅದರಲ್ಲೂ 5 ವೇಗದ ಬೌಲರ್​ಗಳಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಹಾಗಾದರೆ, ಆ ಡೇಂಜರಸ್​ ಬೌಲರ್​ಗಳು ಯಾರು ಮತ್ತು ಅವರ ದಾಖಲೆಗಳೇನು ನೋಡೋಣ.

6. ಅರ್ಷದೀಪ್​ ಸಿಂಗ್​:ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ಎಡಗೈ ವೇಗಿ ಅರ್ಷದೀಪ್​ ಸಿಂಗ್​ (Arshdeep Singh) ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಸದ್ಯ ಮೂರು ಪಂದ್ಯಗಳನ್ನು ಆಡಿರುವ ಇವರು​ 5 ವಿಕೆಟ್​ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಟಿ20Iನಲ್ಲಿ ಅತೀ ಹೆಚ್ಚು ವಿಕೆಟ್​ ಪಡೆದ ಭಾರತದ ಎರಡನೇ ಬೌಲರ್​ ಆಗಿ ಜಸ್ಪ್ರೀತ್​ ಬುಮ್ರಾ (Jaspreet Bumrah), ಭುವನೇಶ್ವರ್​ ಕುಮಾರ್​ (Bhuvaneshwar Kumar) ಅವರನ್ನು ಹಿಂದಿಕ್ಕಿದ್ದಾರೆ. ಈ ಬಾರಿ ಐಪಿಎಲ್​ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿರುವ ಅರ್ಷದೀಪ್​ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆ ಇದೆ.

ಐಪಿಎಲ್​ ದಾಖಲೆ:ಈವರೆಗೂ 65 ಪಂದ್ಯಗಳನ್ನಾಡಿರುವ ಅರ್ಷದೀಪ್​ 76 ವಿಕೆಟ್​ ಪಡೆದಿದ್ದಾರೆ. 32ಕ್ಕೆ5 ಇವರ ಅತ್ಯುತ್ತಮ ಪ್ರದರ್ಶನ.

ಟ್ರೆಂಟ್​ ಬೌಲ್ಟ್ (IANS)

5. ಟ್ರೆಂಟ್​ ಬೌಲ್ಟ್​:ನ್ಯೂಜಿಲೆಂಡ್​ನ ವೇಗದ ಬೌಲರ್​ ಟ್ರೆಂಟ್​ ಬೌಲ್ಟ್​ (Trent Boult) ಟಿ20 ಸ್ವರೂಪದಲ್ಲಿ ಬೆಸ್ಟ್​ ಎನಿಸಿಕೊಂಡಿದ್ದಾರೆ. ​2025ರ ಮೆಗಾ ಹರಾಜಿನಲ್ಲಿ ಇವರೂ ಇದ್ದಾರೆ. ಬೌಲ್ಟ್​ ಇದುವರೆಗೂ 103 ಪಂದ್ಯಗಳನ್ನಾಡಿದ್ದು 121 ವಿಕೆಟ್​ ಉರುಳಿಸಿದ್ದಾರೆ. ಪಂದ್ಯವೊಂದರಲ್ಲಿ 18 ರನ್​ಗೆ 4 ವಿಕೆಟ್​ ಪಡೆದಿದ್ದು ಐಪಿಎಲ್​ನ ಬೆಸ್ಟ್​ ಇನ್ನಿಂಗ್ಸ್​ ಆಗಿದೆ.

ಜೋಫ್ರಾ ಅರ್ಚರ್​ (IANS)

4. ಜೋಫ್ರಾ ಅರ್ಚರ್​:ಇಂಗ್ಲೆಂಡ್​ನ ಸ್ಟಾರ್​ ಬೌಲರ್​ ಜೋಫ್ರಾ ಅರ್ಚರ್​ (Jofra Archer) ಐಪಿಎಲ್‌ನಲ್ಲಿ ಕಡಿಮೆ ಪಂದ್ಯಗಳನ್ನಾಡಿದ್ದರೂ ಕ್ರೇಜ್​ ಹೆಚ್ಚಿದೆ. ಇವರು ಒಟ್ಟು 40 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 48 ವಿಕೆಟ್​ ಪಡೆದಿದ್ದಾರೆ. 15 ರನ್​ಗಳಿಗೆ 3 ವಿಕೆಟ್​ ಪಡೆದಿರುವುದು ಇವರ ಅತ್ಯುತ್ತಮ ಸ್ಪೆಲ್.

ಮಿಚೆಲ್​ ಸ್ಟಾರ್ಕ್​ (IANS)

3. ಮಿಚೆಲ್​ ಸ್ಟಾರ್ಕ್​:ಆಸ್ಟ್ರೇಲಿಯಾದ ವೇಗದ ಬೌಲರ್​ ಮಿಚೆಲ್​ ಸ್ಟಾರ್ಕ್​ (Mitchell Starc) 2024ರ ಐಪಿಎಲ್​ನ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಅವರು 24.75 ಕೋಟಿ ರೂ.ಗೆ ಕೆಕೆಆರ್​ ತಂಡದ ಪಾಲಾಗಿದ್ದರು. ಇದೀಗ ಕೆಕೆಆರ್​ ತಂಡದಿಂದ ಅವರನ್ನು ಕೈಬಿಡಲಾಗಿದ್ದು, ಹರಾಜಿನಲ್ಲಿದ್ದಾರೆ. ಒಟ್ಟು 40 ಐಪಿಎಲ್​ ಪಂದ್ಯಗಳನ್ನಾಡಿರುವ ಸ್ಟಾರ್ಕ್​ 51 ವಿಕೆಟ್​ ಪಡೆದಿದ್ದಾರೆ. 15ಕ್ಕೆ4 ವಿಕೆಟ್ ಇವರ ಬೆಸ್ಟ್​ ಬೌಲಿಂಗ್​.

ಕಗಿಸೋ ರಬಾಡ (IANS)

2. ಕಗಿಸೋ ರಬಾಡ:ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೋ ರಬಾಡ ಐಪಿಎಲ್​ನಲ್ಲಿ 117 ವಿಕೆಟ್​ ಪಡೆದು ಪ್ರಮುಖ ಬೌಲರ್​ ಎನಿಸಿಕೊಂಡಿದ್ದಾರೆ. ಇವರೂ ಕೂಡಾ ಮೆಗಾ ಹರಾಜಿನಲ್ಲಿದ್ದಾರೆ

ಮೊಹ್ಮದ್​ ಶಮಿ (IANS)

1. ಮೊಹ್ಮದ್​ ಶಮಿ:ಟೀಂ ಇಂಡಿಯಾದ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಶಮಿ 2023ರ ಐಪಿಎಲ್​ನಲ್ಲಿ ಅತೀ ಹೆಚ್ಚು ವಿಕೆಟ್​ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದರು. ಈ ಬಾರಿ ಮೆಗಾ ಹರಾಜಿನಲ್ಲಿರುವ ಕಾರಣ ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆ ಇದೆ.

ಮೂವರ ಮೇಲೆ RCB ಕಣ್ಣು:ಹರಾಜಿನಲ್ಲಿರುವ 6 ಆಟಗಾರರ ಪೈಕಿ ಆರ್​ಸಿಬಿ ಜೋಫ್ರಾ ಅರ್ಚರ್​, ಕಗಿಸೋ ರಬಾಡ ಅವರ ಮೇಲೆ ಕಣ್ಣಿಟ್ಟಿದೆ. ಈ ಇಬ್ಬರನ್ನು ತಂಡಕ್ಕೆ ಪಡೆದು ಬೌಲಿಂಗ್​ ವಿಭಾಗವನ್ನು ಬಲಿಷ್ಠಗೊಳಿಸಲು ಪ್ಲಾನ್​ ಮಾಡಿಕೊಂಡಿದೆ.

ಇದನ್ನೂ ಓದಿ:'ನನ್ನ ಮಗನ 10 ವರ್ಷದ ಕ್ರಿಕೆಟ್​ ಕೆರಿಯರ್​ ಈ ನಾಲ್ವರಿಂದ ಹಾಳಾಯ್ತು': ಸಂಜು ಸ್ಯಾಮ್ಸನ್​ ತಂದೆಯ ಆರೋಪ

ABOUT THE AUTHOR

...view details