ಅಹಮದಾಬಾದ್/ಹೈದರಾಬಾದ್:ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸತತ 6 ಪಂದ್ಯಗಳನ್ನು ಗೆದ್ದು ಅಚ್ಚರಿಯ ರೀತಿಯಲ್ಲಿ ಪ್ಲೇಆಫ್ ತಲುಪಿದೆ. ಇಂದು ಸಂಜೆ ಅಹಮದಾಬಾದ್ನಲ್ಲಿ ರಾಜಸ್ಥಾನ ರಾಯಲ್ಸ್ (ಆರ್ಆರ್) ವಿರುದ್ಧ ಎಲಿಮಿನೇಟರ್ ಪಂದ್ಯ ಆಡಲಿದೆ.
ಮಹತ್ವದ ಪಂದ್ಯಕ್ಕೆ ಆರ್‌ಸಿಬಿ ತಂಡದ ಆಟಗಾರರು ಅಭ್ಯಾಸ ನಡೆಸಿಲ್ಲ. ಇದಕ್ಕೆ ಭದ್ರತಾ ಕಾರಣ ಇತ್ತು ಎಂದು ಹೇಳಲಾಗಿದೆ. ಈಚೆಗೆ ನಾಲ್ವರು ಉಗ್ರರನ್ನು ಬಂಧಿಸಲಾಗಿದೆ. ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿತ್ತು. ಆದರೆ, ಇದನ್ನು ಗುಜರಾತ್ ಕ್ರಿಕೆಟ್ ಸಂಸ್ಥೆ (ಜಿಸಿಎ) ಅಲ್ಲಗಳೆದಿದೆ.
ಆರ್‌ಸಿಬಿ ತಂಡ ಅಭ್ಯಾಸದ ಅವಧಿಯನ್ನು ರದ್ದು ಮಾಡಲು ಭದ್ರತಾ ಕಾರಣವಲ್ಲ ಎಂದಿದೆ. ರಾಜಸ್ಥಾನ್ ರಾಯಲ್ಸ್ (RR) ತಂಡ ಅಭ್ಯಾಸ ನಡೆಸಿದೆ. ಭದ್ರತಾ ಕಾರಣಗಳಿಂದ ಆರ್‌ಸಿಬಿ ತಮ್ಮ ಅಭ್ಯಾಸದ ಅವಧಿಯನ್ನು ಕೈಬಿಟ್ಟಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗಿವೆ. ಇದು ನಿಜವಲ್ಲ ಎಂದಿದೆ.
ಬಿಸಿಗಾಳಿಯಿಂದಾಗಿ ಅಭ್ಯಾಸ ಮಿಸ್:ಮೇ 21 ರಂದು ಮೊದಲ ಕ್ವಾಲಿಫೈಯರ್ ಪಂದ್ಯದ ಹಿನ್ನೆಲೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅವಕಾಶ ನೀಡಿರಲಿಲ್ಲ. ಇದರ ಬದಲಿಗೆ ಗುಜರಾತ್ ಕಾಲೇಜು ಮೈದಾನದಲ್ಲಿ ಪ್ರಾಕ್ಟೀಸ್ ನಡೆಸಲು ಎರಡೂ ತಂಡಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಆರ್‌ಸಿಬಿ ತಮ್ಮ ಅಭ್ಯಾಸದ ಅವಧಿಯನ್ನು ಅತಿಯಾದ ಶಾಖದ ಅಲೆಯಿಂದಾಗಿ ರದ್ದುಗೊಳಿಸಿದೆ. ಗುಜರಾತ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ ಮಾಡಲಾಗಿತ್ತು ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಪಟೇಲ್ "ಈಟಿವಿ ಭಾರತ"ಕ್ಕೆ ತಿಳಿಸಿದರು.
ಗುಜರಾತ್ ಕಾಲೇಜಿನಲ್ಲಿ ಲೋಕಸಭಾ ಚುನಾವಣೆಯ ಮತಯಂತ್ರಗಳನ್ನು (ಇವಿಎಂ) ಇಡಲಾಗಿದೆ. ಇಲ್ಲಿ ಅತಿಯಾದ ಭದ್ರತೆ ಇದೆ. ಜಿಲ್ಲಾಡಳಿತದಿಂದ ಕ್ರಿಕೆಟ್ ಅಭ್ಯಾಸಕ್ಕಾಗಿ ಅಧಿಕೃತ ಅನುಮತಿಯನ್ನೂ ಪಡೆಯಲಾಗಿದೆ. ಬಿಸಿಗಾಳಿಯಿಂದಾಗಿ ಆರ್‌ಸಿಬಿ ಅಭ್ಯಾಸವನ್ನು ರದ್ದುಗೊಳಿಸಿದೆ ಎಂದು ಜಿಸಿಎ ಕಾರ್ಯದರ್ಶಿ ಮಾಹಿತಿ ನೀಡಿದರು.
ಬೆಂಗಳೂರು ಮತ್ತು ರಾಜಸ್ಥಾನ ನಡುವೆ ಗೆದ್ದ ತಂಡ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮೇ 24 ರಂದು ನಡೆಯುವ ಎರಡನೇ ಕ್ವಾಲಿಫೈಯರ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ:ವಿರಾಟ್ ಕೊಹ್ಲಿಗೆ ಬೆದರಿಕೆ: ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ತಂಡದ ಅಭ್ಯಾಸ, ಮಾಧ್ಯಮಗೋಷ್ಟಿ ರದ್ದು - security threat to virat kohli