ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದೆ. ಈ ತಿಂಗಳ ಕೊನೆಯಲ್ಲಿ ಅಂದರೆ ನ.24-25ರಂದು ಎರಡು ದಿನಗಳ ಕಾಲ ಆಟಗಾರರ ಮೆಗಾ ಹರಾಜು ನಡೆಯಲಿದೆ. ಈಗಾಗಲೇ ದೇಶಿ, ವಿದೇಶಿ ಸೇರಿದಂತೆ ಒಟ್ಟು 1,574 ಆಟಗಾರರು ಹರಾಜಿಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 1,165 ಭಾರತೀಯ, 409 ವಿದೇಶಿ ಆಟಗಾರರಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಅತಿ ಹೆಚ್ಚು 91 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದರೆ, ಆಸ್ಟ್ರೇಲಿಯಾದಿಂದ 76, ಇಂಗ್ಲೆಂಡ್ನಿಂದ 52, ನ್ಯೂಜಿಲೆಂಡ್ನಿಂದ 39, ವೆಸ್ಟ್ ಇಂಡೀಸ್ 33, ಅಫ್ಘಾನಿಸ್ತಾನ-ಶ್ರೀಲಂಕಾದಿಂದ ತಲಾ 13 ಆಟಗಾರರು ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಆದರೆ ಅಚ್ಚರಿ ಎಂಬಂತೆ 42 ವರ್ಷದ ನಿವೃತ್ತ ಬೌಲರ್ ಕೂಡ ತಮ್ಮ ಹೆಸರನ್ನು ನೋಂದಾಯಿಸಿರುವುದು ವಿಶೇಷ.
ಹೌದು, ಇಂಗ್ಲೆಂಡ್ ತಂಡದ ಪ್ರಸ್ತುತ ಕೋಚ್ ಮತ್ತು ಮಾಜಿ ಬೌಲರ್ ಜೇಮ್ಸ್ ಆ್ಯಂಡರ್ಸನ್ ಐಪಿಎಲ್ ಆಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಹರಾಜು ಪಟ್ಟಿಗೆ ತಮ್ಮ ಹೆಸರು ಸೇರಿಸಿದ್ದಾರೆ. ವಿಶ್ವದ ಅತ್ಯುತ್ತಮ ಬೌಲರ್ ಆಗಿರುವ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ನಲ್ಲಿ ಹಲವು ದಾಖಲೆಗಳನ್ನು ಬರೆದವರು. ಅಲ್ಲದೇ, ಟೆಸ್ಟ್‌ನಲ್ಲಿ ಅತಿ ಹೆಚ್ಚು 704 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಕೂಡ ಆಗಿದ್ದಾರೆ.
ಇದನ್ನೂ ಓದಿ:"RCB ಜೊತೆಗಿನ ನನ್ನ ಪ್ರಯಾಣ ಇನ್ನೂ ಮುಗಿದಿಲ್ಲ": ಮತ್ತೆ ತಂಡಕ್ಕೆ ಬರುವ ಸುಳಿವು ಕೊಟ್ಟ ಸ್ಪೋಟಕ ಬ್ಯಾಟರ್!