ಕರ್ನಾಟಕ

karnataka

ETV Bharat / sports

ಇಂಜಿನಿಯರ್​ ಪದವಿ ಹೊಂದಿರುವ ಭಾರತೀಯ ಕ್ರಿಕೆಟರ್​ಗಳು ಯಾರೆಂದು ಗೊತ್ತಾ? - Engineers Day 2024 - ENGINEERS DAY 2024

Engineer's Day 2024 : ಇಂದು ಭಾರತದಲ್ಲಿ ಇಂಜಿನಿಯರ್ಸ್ ಡೇ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಭಾರತ ಕ್ರಿಕೆಟ್​ ತಂಡದ ಯಾವೆಲ್ಲ ಆಟಗಾರರು ಇಂಜಿನಿಯರ್​ ಪದವಿ ಪಡೆದಿದ್ದಾರೆ ಎಂಬುದರ ಕುರಿತು ತಿಳಿಯಲು ಸಂಪೂರ್ಣ ಸುದ್ದಿ ಓದಿ.

ಇಂಜಿನಿಯರ್​ ಪದವಿ ಪಡೆದ ಕ್ರಿಕೆಟರ್ಸ್​
ಇಂಜಿನಿಯರ್​ ಪದವಿ ಪಡೆದ ಕ್ರಿಕೆಟರ್ಸ್​ (IANS)

By ETV Bharat Sports Team

Published : Sep 15, 2024, 5:43 PM IST

ನವದೆಹಲಿ: ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ ಡೇ (ಅಭಿಯಂತರರ ದಿನ) ಆಚರಿಸಲಾಗುತ್ತದೆ. ಭಾರತದ ಸರ್ವಶ್ರೇಷ್ಠ ಇಂಜಿನಿಯರ್​ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸರ್​ ಎಂ ವಿಶ್ವೇಶ್ವರಯ್ಯ (ಮೋಕ್ಷಗುಂಡಂ ವಿಶ್ವೇಶ್ವರಯ್ಯ) ಅವರು ಹುಟ್ಟಿದ್ದು ಇದೇ ದಿನ. ಆಧುನಿಕ ಮೈಸೂರು ಸಂಸ್ಥಾನದ ಪಿತಾಮಹ ಎಂದು ಕರೆಯಲ್ಪಡುವ ವಿಶ್ವೇಶ್ವರಯ್ಯನವರು ಎಂಜಿನಿಯರಿಂಗ್ ಕ್ಷೇತ್ರಕ್ಕೆ ಅಪರಾವಾದ ಕೊಡುಗೆ ನೀಡಿದ್ದಾರೆ. ದೇಶಾದ್ಯಂತ ನಿರ್ಮಿಸಲಾದ ಅಣೆಕಟ್ಟುಗಳು ಮತ್ತು ಸೇತುವೆಗಳ ಯಶಸ್ಸಿನಲ್ಲೂ ಇವರ ಪಾತ್ರವಿದೆ. ಈ ಹಿನ್ನೆಲೆ ಅವರ ನೆನೆಪಿನ ಸ್ಮರಣಾರ್ಥವಾಗಿ ಈ ದಿನವನ್ನು 'ಎಂಜಿನಿಯರ್ಸ್​ ಡೇ' ಎಂದು ಘೋಷಿಸಲಾಗಿದೆ.

ಭಾರತ ಸೇರಿದಂತೆ ವಿದೇಶಗಳಲ್ಲಿ ಇಂಜಿನಿಯರ್​ಗಳು ತಮ್ಮ ಕೌಶಲ್ಯದಿಂದ ದೇಶ ಮತ್ತು ಜಗತ್ತನ್ನು ಪ್ರಗತಿಯತ್ತ ಕೊಂಡೊಯ್ಯಲು ಅವರಿಗೆ ಪ್ರೋತ್ಸಾಹಿಸಲು ಪ್ರಪಂಚದಾದ್ಯಂತ ವಿವಿಧ ದಿನಾಂಕದಂದು ಈ ದಿನ ಆಚರಿಸಲಾಗುತ್ತದೆ. ಆದ್ರೆ ನಿಮಗೆ ಗೊತ್ತಾ ಇಂಜಿನಿಯರ್​ ಪದವಿ ಪಡೆದಿರುವ ಹಲವಾರು ಜನ ಕ್ರೀಡಾ ಲೋಕದಲ್ಲೂ ಯಶಸ್ಸು ಕಂಡಿದ್ದಾರೆ ಎಂದು. ಹಾಗಾದ್ರೆ ಬನ್ನಿ ಇಂಜಿನಿಯರ್​ ಪದವಿ ಹೊಂದಿರುವ ಸ್ಟಾರ್​ ಕ್ರಿಕೆಟಿಗರು ಯಾರೆಂದು ತಿಳಿದುಕೊಳ್ಳೋಣ..

  1. ಶ್ರೀನಿವಾಸ್ ವೆಂಕಟರಾಘವನ್:ಭಾರತ ಕ್ರಿಕೆಟ್ ತಂಡದ ಮಾಜಿ ಆಫ್ ಬ್ರೇಕ್ ಬೌಲರ್ ಮತ್ತು ಅಂಪೈರ್​ ಶ್ರೀನಿವಾಸ್ ವೆಂಕಟರಾಘವನ್ ಅವರು ಎಂಜಿನಿಯರ್​ ಪದವೀಧರರು. ಇವರು ಚೆನ್ನೈನ ಗಿಂಡಿಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿದರು.
    ಶ್ರೀನಿವಾಸ್ ವೆಂಕಟರಾಘವನ್ (Getty Image)
  2. ಇಎಎಸ್ ಪ್ರಸನ್ನ:ಭಾರತದ ಮಾಜಿ ಆಫ್ ಸ್ಪಿನ್ನರ್ ಇಎಎಸ್ ಪ್ರಸನ್ನ ಅವರನ್ನು ಮೊದಲ ಇಂಜಿನಿಯರ್​ ಪದವೀಧರ ಕ್ರಿಕೆಟರ್ ಎಂದು ಹೇಳಲಾಗುತ್ತದೆ. ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಅವರು ಬಿಇ ಪದವಿ ಪಡೆದಿದ್ದರು.
    ಇಎಎಸ್ ಪ್ರಸನ್ನ (Getty Image)
  3. ಕೆ ಶ್ರೀಕಾಂತ್:80​​ರ ದಶಕದ ಭಾರತದ ಆಕ್ರಮಣಕಾರಿ ಆರಂಭಿಕ ಬ್ಯಾಟ್ಸ್‌ಮನ್ ಕೃಷ್ಣಮಾಚಾರಿ ಶ್ರೀಕಾಂತ್, ಚೆನ್ನೈನ ಗಿಂಡಿಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು.
    ಕೆ ಶ್ರೀಕಾಂತ್ (Getty Image)
  4. ಅನಿಲ್ ಕುಂಬ್ಳೆ:ಕರ್ನಾಟಕದಶ್ರೇಷ್ಠ ಲೆಗ್ ಸ್ಪಿನ್ನರ್ ಮತ್ತು ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ಕೂಡ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಅವರು ರಾಷ್ಟ್ರೀಯ ವಿದ್ಯಾಲಯ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಪದವಿಯನ್ನು ಪೂರ್ಣಗೊಳಿಸಿದ್ದರು.
    ಅನಿಲ್​ ಕುಂಬ್ಳೆ (Getty Image)
  5. ಜಾವಗಲ್ ಶ್ರೀನಾಥ್:ಐಸಿಸಿ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್, ಜಾವಗಲ್ ಶ್ರೀನಾಥ್ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜ್ (SJCE) ನಲ್ಲಿ ವಾದ್ಯ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದರು.
    ಜಾವಗಲ್​ ಶ್ರೀನಾಥ್​ (Getty Image)
  6. ರವಿಚಂದ್ರನ್ ಅಶ್ವಿನ್:ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಅಶ್ವಿನ್ ಈಗಲೂ ಭಾರತ ತಂಡದಲ್ಲಿ ಆಡುತ್ತಿದ್ದಾರೆ. ಅವರು ಟೆಸ್ಟ್‌ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ.
    ಆರ್​ ಅಶ್ವಿನ್​ (Getty Image)
  7. ಶಿಖಾ ಪಾಂಡೆ:ಭಾರತೀಯ ಮಹಿಳಾ ಕ್ರಿಕೆಟ್​ನ ವೇಗದ ಬೌಲರ್ ಶಿಖಾ ಪಾಂಡೆ ಗೋವಾದ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಪ್ರಸ್ತುತ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
    ಶಿಖಾ ಪಾಂಡೆ (Getty Image)
  8. ಆಕಾಶ್ ಮಧ್ವಲ್:ಐಪಿಎಲ್ 2023ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದ ಆಕಾಶ್​ 2016ರಲ್ಲಿ ರೂರ್ಕಿಯ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.
    ಆಕಾಶ್ ಮಧ್ವಲ್ (Getty Image)

ಇದನ್ನೂ ಓದಿ:ಡೈಮೆಂಡ್​ ಲೀಗ್​ನಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾದ ನೀರಜ್​ ಚೋಪ್ರಾ: ಅದಕ್ಕೆ ಕಾರಣ ಇದೇ ನೋಡಿ - Neeraj Chopra

ABOUT THE AUTHOR

...view details