ಬೆಂಗಳೂರು:ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡಿಪಿ ವರ್ಲ್ಡ್ ದೀರ್ಘಾವಧಿಯ ಟೈಟಲ್ ಸ್ಪಾನ್ಸರ್ಶಿಪ್ ಘೋಷಿಸಿದೆ. ಸ್ಮಾರ್ಟ್ ಎಂಡ್-ಟು-ಎಂಡ್ ಸಪ್ಲೈ ಪೂರೈಕೆ ಚೈನ್ ಸೊಲ್ಯೂಷನ್ ಪೂರೈಕೆದಾರರಾದ ಡಿಪಿ ವರ್ಲ್ಡ್ 2024 ರಿಂದ ದೆಹಲಿ ಕ್ಯಾಪಿಟಲ್ಸ್‌ನ ಮಹಿಳಾ ತಂಡದ ಶೀರ್ಷಿಕೆ ಪಾಲುದಾರಿಕೆ ಹೊಂದಿದೆ. ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಡೆಲ್ಲಿ ಫ್ರ್ಯಾಂಚೈಸಿಯೊಂದಿಗೆ ತನ್ನ ಪಾಲುದಾರಿಕೆ ಬಗ್ಗೆ ಡಿಪಿ ವರ್ಲ್ಡ್ ಘೋಷಣೆ ಮಾಡಿದೆ.
ಭಾರತದಲ್ಲಿ ಕ್ರಿಕೆಟ್ನ್ನು ಪೋಷಣೆ ಮತ್ತು ಉನ್ನತೀಕರಿಸಲು ವ್ಯಾಪಕ ಪ್ರಯತ್ನ ಹಾಗೂ ಕ್ರಮ ಕೈಗೊಳ್ಳಲಾಗಿದೆ. ಈ ಪಾಲುದಾರಿಕೆ ಮೂಲಕ ನಾವು ಕ್ರಿಕೆಟ್‌ನಲ್ಲಿ ಪ್ರತಿಭಾನ್ವೇಷಣೆಯನ್ನು ಮತ್ತಷ್ಟು ವಿಸ್ತರಿಸಲು ಹೂಡಿಕೆ ಮಾಡಲಾಗುತ್ತಿದೆ. ಪ್ರಸ್ತುತ ದೆಹಲಿ ಕ್ಯಾಪಿಟಲ್ಸ್ ಪುರುಷರ ತಂಡದ ಜಾಗತಿಕ ಲಾಜಿಸ್ಟಿಕ್ಸ್ ಪಾಲುದಾರರಾಗಿದ್ದು, ಈಗ ಮಹಿಳಾ ತಂಡಕ್ಕೆ ಟೈಟಲ್ ಸ್ಪಾನ್ಸರ್ಶಿಪ್ ವಿಸ್ತರಿಸಲು ಹೆಮ್ಮೆಪಡುತ್ತೇವೆ ಎಂದು ಡಿಪಿ ವರ್ಲ್ಡ್ ತಿಳಿಸಿದೆ.
ಈ ಸಂದರ್ಭದಲ್ಲಿ ಡಿಪಿ ವರ್ಲ್ಡ್ ಸಬ್‌ಕಾಂಟಿನೆಂಟ್‌ನ ಲಾಜಿಸ್ಟಿಕ್ಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಅಶ್ವನಿನಾಥ್ ಮಾತನಾಡಿ, "ದೆಹಲಿ ಕ್ಯಾಪಿಟಲ್ಸ್‌ನೊಂದಿಗಿನ ನಮ್ಮ ಪಾಲುದಾರಿಕೆಯನ್ನು ಅವರ ಮಹಿಳಾ ತಂಡಕ್ಕೆ ಟೈಟಲ್ ಸ್ಪಾನ್ಸರ್ ಆಗಿ ವಿಸ್ತರಿಸಲು ನಾವು ಉತ್ಸುಕರಾಗಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಮಹಿಳಾ ಕ್ರಿಕೆಟ್ ಸಾಕಷ್ಟು ಪರಿವರ್ತನೆ ಹೊಂದಿದೆ. ಕ್ರಿಕೆಟ್ ಹಿಂದೆಂದಿಗಿಂತಲೂ ಹೆಚ್ಚು ಆಟಗಾರರು ಮತ್ತು ಅಭಿಮಾನಿಗಳನ್ನು ತಲುಪಿದೆ'' ಎಂದರು.