ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 68 ರನ್ ಗಳ ಭರ್ಜರಿ ಗೆಲುವು: ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ರೋಹಿತ್​ ಪಡೆ - India enter T20 World Cup final - INDIA ENTER T20 WORLD CUP FINAL

ಇಂಗ್ಲೆಂಡ್​ ವಿರುದ್ಧ ಭರ್ಜರಿ ಜಯಗಳಿಸುವ ಮೂಲಕ ಟೀಂ ಇಂಡಿಯಾ ಟಿ-20 ವಿಶ್ವಕಪ್​ ಫೈನಲ್​ ಪ್ರವೇಶ ಮಾಡಿದೆ.

Dominant India storm into T20 World Cup final with 68-run drubbing of England
ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 68 ರನ್ ಗಳ ಭರ್ಜರಿ ಗೆಲುವು: ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ರೋಹಿತ್​ ಪಡೆ (IANS)

By PTI

Published : Jun 28, 2024, 6:12 AM IST

Updated : Jun 28, 2024, 6:45 AM IST

ಜಾರ್ಜ್‌ಟೌನ್ (ಗಯಾನಾ); ಗುರುವಾರ ಇಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 68 ರನ್‌ಗಳಿಂದ ಗೆಲುವು ಸಾಧಿಸಿ ಟಿ20 ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಿದೆ. ವರುಣನ ಅವಕೃಪೆ ಮಧ್ಯೆಯೂ ಭಾರತ ಭರ್ಜರಿ ಜಯ ಸಾಧಿಸುವ ಮೂಲಕ ಕಳೆದ ಬಾರಿಯ ಸೇಡನ್ನು ತೀರಿಸಿಕೊಂಡಿದೆ. ರೋಹಿತ್​ ಶರ್ಮಾ ಮತ್ತೊಮ್ಮೆ ನಾಯಕನ ಜವಾಬ್ದಾರಿಯುತ ಆಟ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

39 ಎಸೆತಗಳಲ್ಲಿ ಆಕ್ರಮಣಕಾರಿ 57 ರನ್‌ಗಳೊಂದಿಗೆ ಭದ್ರ ಅಡಿಪಾಯ ಹಾಕಿದ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ನಾಯಕನಿಗೆ ಸೂರ್ಯಕುಮಾರ್ ಯಾದವ್ (36 ಎಸೆತಗಳಲ್ಲಿ 47) ಉತ್ತಮ ಬೆಂಬಲ ನೀಡಿದರು, ಅಂತಿಮವಾಗಿ ಭಾರತವು ಏಳು ವಿಕೆಟ್‌ಗೆ 171 ರನ್ ಗಳಿಸಿತು. ಮಳೆಯ ನಡುವೆ ಮೊದಲು ಬ್ಯಾಟಿಂಗ್ ಮಾಡಿದ ತಂಡ ಉತ್ತಮ ಮೊತ್ತ ಕಲೆ ಹಾಕಿತು.

ಅತ್ತ ಭಾರತ 172 ರನ್​ಗಳ ಗೆಲುವಿನ ಸವಾಲು ಸ್ವೀಕರಿಸಿ ಕಣಕ್ಕೆ ಇಳಿದ ಇಂಗ್ಲೆಂಡ್​ 16.4 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು. ಇದು ವಿಶ್ವಕಪ್​ ಟೂರ್ನಿಯಲ್ಲಿ ಭಾರತಕ್ಕೆ ಮೂರನೇ ಬಾರಿ ಫೈನಲ್ ಪ್ರವೇಶವಾಗಿದೆ. ಕಡಿಮೆ ಬೌನ್ಸ್ ಹೊಂದಿರುವ ನಿಧಾನಗತಿಯ ಪಿಚ್‌ನಲ್ಲಿ ಎಡಗೈ ಬೌಲರ್​ ಅಕ್ಷರ್ ಪಟೇಲ್ 23ರನ್​ ನೀಡಿ ಪ್ರಮುಖ 3 ವಿಕೆಟ್​ಗಳನ್ನು ಕಿತ್ತರು.

ಭಾರತವು ತನ್ನ ಅದ್ಭುತ ಬೌಲಿಂಗ್‌ನೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಪಟೇಲ್​ ಸಹಾಯ ಮಾಡಿದರು. ಇವರಿಗೆ ಕುಲದೀಪ್ ಯಾದವ್ ಸಾಥ್ ನೀಡಿದರು, 19 ರನ್​ ನೀಡಿ ಅತ್ಯಮೂಲ್ಯವಾದ 2 ವಿಕೆಟ್​ ಕಬಳಿಸಿದರು. ಈ ಮೂಲಕ, 2022 ರ ಸೆಮಿಫೈನಲ್​್ ಸೇಡನ್ನು ಟೀಂ ಇಂಡಿಯಾ ಗಯಾನದಲ್ಲಿ ತೀರಿಸಿಕೊಂಡಿತು. ಅಡಿಲೇಡ್ ಓವಲ್‌ನಲ್ಲಿ 2022 ರ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ವಿರುದ್ಧ ಭಾರತೀಯ ತಂಡವು 10 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು.

ರೋಹಿತ್​ ದಾಖಲೆ:12 ತಿಂಗಳ ಅಂತರದಲ್ಲಿ ಮೂರು ICCಯ ಮೂರು ಫೈನಲ್‌ಗಳಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದ ಮೊದಲ ಭಾರತೀಯ ನಾಯಕರು ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾದರು. 2023 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, 2023 ODI ವಿಶ್ವಕಪ್ ಮತ್ತು ಈಗ T20 ವಿಶ್ವಕಪ್ ಪಂದ್ಯಗಳಲ್ಲಿ ರೋಹಿತ್​ ಶರ್ಮಾ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ.

ಪವರ್‌ಪ್ಲೇನಲ್ಲಿ ಅಕ್ಷರ ಪಟೇಲ್​ ಅವರನ್ನು ಬಳಸಿಕೊಳ್ಳುವ ರೋಹಿತ್​ ಶರ್ಮಾ ಅವರ ನಿರ್ಧಾರವು ಮಾಸ್ಟರ್‌ಸ್ಟ್ರೋಕ್ ಎಂದು ಸಾಬೀತಾಯಿತು. ಎಡಗೈ ಸ್ಪಿನ್ನರ್ ತ್ವರಿತವಾಗಿ ಎರಡು ವಿಕೆಟ್​ ಪಡೆದುಕೊಂಡಿದ್ದರಿಂದ ಇಂಗ್ಲೆಂಡ್ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಕೂಡ ಸ್ಪಿನ್ನರ್‌ಗಳಿಗೆ ಸೂಕ್ತವಾದ ಪಿಚ್‌ನಲ್ಲಿ ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದರು.

ಜೋಸ್ ಬಟ್ಲರ್ (15 ಎಸೆತಗಳಲ್ಲಿ 23), ಹ್ಯಾರಿ ಬ್ರೂಕ್ (19 ಎಸೆತಗಳಲ್ಲಿ 25) ಮತ್ತು ಜೋಫ್ರಾ ಆರ್ಚರ್ (15 ಎಸೆತಗಳಲ್ಲಿ 21) ಮಾತ್ರ ಎರಡಂಕಿ ತಲುಪಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಬಟ್ಲರ್ ಮತ್ತು ಬ್ರೂಕ್ ಇಬ್ಬರೂ ಕ್ರಮವಾಗಿ ಅಕ್ಸರ್ ಮತ್ತು ಕುಲದೀಪ್ ವಿರುದ್ಧ ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದಾಗ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ದಾರಿ ಹಿಡಿದರು.

ಮಳೆಯದ್ದೇ ಆಟ, ಆದರೂ ಗೆದ್ದಿತು ಟೀಂ ಇಂಡಿಯಾ ಆಟ:ತೀವ್ರ ಕಾತರದಿಂದ ಕಾಯುತ್ತಿದ್ದ ಪಂದ್ಯವು ಆಗಾಗ ಸುರಿದ ಮಳೆಯಿಂದಾಗಿ ಒಂದು ಗಂಟೆ 15 ನಿಮಿಷಗಳಷ್ಟು ವಿಳಂಬವಾಯಿತು. ಭಾರತ ಎಂಟು ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 65 ರನ್ ಗಳಿಸಿದಾಗ ಮತ್ತೆ ಮಳೆ ಬಂದಿತು. ಹೀಗಾಗಿ ಪಂದ್ಯವನ್ನು ಸ್ಥಗಿತಗೊಳಿಸಬೇಕಾಯಿತು. ಇನ್ನು ಐಸಿಸಿ ಮೊದಲೇ ಆಟಕ್ಕೆ 250 ನಿಮಿಷಗಳ ಹೆಚ್ಚುವರಿ ಸಮಯ ನಿಗದಿ ಮಾಡಲಾಗಿತ್ತು. ಆದರೆ ಯಾವುದೇ ಮೀಸಲು ದಿನ ಇರಲಿಲ್ಲ.

ಇದನ್ನು ಓದಿ:India vs England, Semi Final 2: ಭಾರತ-ಇಂಗ್ಲೆಂಡ್‌ ಸೆಮಿಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿ - T20 World Cup


Last Updated : Jun 28, 2024, 6:45 AM IST

ABOUT THE AUTHOR

...view details