ಉಜ್ಬೇಕಿಸ್ಥಾನ್:ಇಲ್ಲಿನ ತಾಷ್ಕೆಂಟ್ನಲ್ಲಿ ನಡೆದಏಷ್ಯನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ದೀಪಾ ಕರ್ಮಾಕರ್ಭಾರತಕ್ಕೆ ಮೊದಲ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದರು.
30 ವರ್ಷದ ದೀಪಾ ಕರ್ಮಾಕರ್ ಮಹಿಳೆಯರ ವಾಲ್ಟ್ ಫೈನಲ್ನಲ್ಲಿ ಒಟ್ಟು 13.566 ಅಂಕ ಗಳಿಸುವ ಮೂಲಕ ಈ ಚಾರಿತ್ರಿಕ ಸಾಧನೆ ಮಾಡಿದರು.
ದಕ್ಷಿಣ ಕೊರಿಯಾದ ಕಿಮ್ ಸನ್ ಹಯಾಂಗ್ 13.466 ಅಂಕಗಳೊಂದಿಗೆ ಬೆಳ್ಳಿ ಮತ್ತು ಜ್ಯೋ ಕ್ಯೊಂಗ್ ಬಿಯಾಲ್ 12.966 ಅಂಕ ಪಡೆದು ಕಂಚು ಗಳಿಸಿದರು.
ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಭಾರತದ ಜಿಮ್ನಾಸ್ಟ್ಗಳು ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು. ಈ ಹಿಂದೆ, ಕಾಂಟಿನೆಂಟಲ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಕಂಚಿನ ಪದಕಗಳು ಬಂದಿದ್ದವು.
ಭಾರತೀಯ ಕ್ರೀಡಾ ಪ್ರಾಧಿಕಾರ ಪ್ರತಿಕ್ರಿಯೆ:'ಏಷ್ಯನ್ ಜಿಮ್ನಾಸ್ಟಿಕ್ ಚಾಂಪಿಯನ್ಶಿಪ್ನಲ್ಲಿ ಇತಿಹಾಸ ನಿರ್ಮಾಣವಾಗಿದೆ. ಪ್ರತಿಷ್ಟಿತ ಚಾಂಪಿಯನ್ಶಿಪ್ನಲ್ಲಿ ದೀಪಾ ಕರ್ಮಾಕರ್ ಚಿನ್ನ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಜಿಮ್ನಾಸ್ಟ್ ಆಗಿ ಹೊರಹೊಮ್ಮಿದ್ದಾರೆ. ಈ ಹಿಂದೆ, 2015ರಲ್ಲಿ ಇವರು ಕಂಚಿನ ಪದಕ ಗೆದ್ದಿದ್ದರು' ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಐಪಿಎಲ್ ಚಾಂಪಿಯನ್ಸ್ಗೆ ₹20 ಕೋಟಿ ಬಹುಮಾನ: ವಿರಾಟ್ಗೆ ಆರೆಂಜ್ ಕ್ಯಾಪ್: ಯಾರಿಗೆಲ್ಲ ಪ್ರಶಸ್ತಿ? - IPL 2024 Award Winners