CSK Skipper Ruturaj Gaikwad Trolls RCB:ವಿಶ್ವದ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾದ ಐಪಿಎಲ್‌ನ ಮೆಗಾ ಹರಾಜು ಇತ್ತೀಚೆಗೆ ಮುಕ್ತಾಯಗೊಂಡಿದ್ದು, ಇದೀಗ ಎಲ್ಲರ ಕಣ್ಣು ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಆರಂಭವಾಗಲಿರುವ 18ನೇ ಆವೃತ್ತಿಯ ಐಪಿಎಲ್ನತ್ತ ನೆಟ್ಟಿದೆ. ಇದಕ್ಕೂ ಮುನ್ನವೇ ಕೆಲ ತಂಡಗಳ ಮುಂದಿನ ನಾಯಕರ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ.
ಇವುಗಳ ನಡುವೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದು RCBಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ರುತುರಾಜ್ ಮಾಡಿರುವ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ರುತುರಾಜ್ ಗಾಯಕ್ವಾಡ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ, ಗಾಯಕ್ವಾಡ್ ಅವರನ್ನು ವೇದಿಕೆ ಆಹ್ವಾನಿಸಲಾಯಿತು. ಬಳಿಕ ಅವರನ್ನು ಮಾತನಾಡಿಸಲು ನಿರೂಪಕರು ಪ್ರಾರಂಭಿಸಿದರು. ಪ್ರಶ್ನೆಯೊಂದನ್ನು ಕೇಳಿದರು. ಆದರೆ ಅದಕ್ಕೆ ಪ್ರತಿಕ್ರಿಯೆ ನೀಡಲು ಮುಂದಾದ ರುತುರಾಜ್ ಅವರ ಮೈಕ್ ಆಫ್ ಆಗಿತ್ತು. ಇದರಿಂದ ರುತುರಾಜ್ ಕೊಂಚ ಇರಿಸು ಮುರಿಸುಗೊಂಡರು.
ಬಳಿಕ ನಿರೂಪಕರು, "ರುತುರಾಜ್ ಅವರ ಮೈಕ್ ಅನ್ನು ನೀವು ಹೇಗೆ ಆಫ್ ಮಾಡಬಹುದು ಎಂದು ಮೈಕ್ ಆಪ್ರೇಟರ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಗಾಯಕ್ವಾಡ್, ಬಹುಶ ಆರ್‌ಸಿಬಿಯವರು ಯಾರೋ ಮೈಕ್ ಆಫ್ ಮಾಡಿರಬೇಕು ಎಂದು ಹೇಳಿದ್ದಾರೆ.