ಕರ್ನಾಟಕ

karnataka

ETV Bharat / sports

ಚಾಂಪಿಯನ್ಸ್​ ಟ್ರೋಫಿಗೆ ಸಿದ್ಧಗೊಳ್ಳುತ್ತಿರುವ ಭಾರತ; ಹಿಮದಲ್ಲಿಯೂ ಟೆನ್ಷನ್​ ತಡೆಯೋಕೆ ಆಗ್ತಿಲ್ಲ ಎನ್ನುತ್ತಿರುವ ಧೋನಿ!! - MS DHONI

ಚಾಂಪಿಯನ್ಸ್​ ಟ್ರೋಫಿಗೆ ದಿನಗಣನೆ ಆರಂಭವಾಗಿದೆ. ಸದ್ಯ ಭಾರತ ತಂಡ ಭರ್ಜರಿ ತಯಾರಿ ನಡೆಸುತ್ತಿವೆ. ಪಂದ್ಯಗಳ ಕುರಿತು ಭಾರತ ತಂಡದ ಮಾಜಿ ನಾಯಕ ಧೋನಿಯ ಪ್ರೋಮೋ ರಿಲೀಸ್​ ಆಗಿದ್ದು, ವಿಡಿಯೋದಲ್ಲಿ ತಮ್ಮ ಟೆನ್ಷನ್​ ಬಗ್ಗೆ ಹೇಳಿಕೊಂಡಿದ್ದಾರೆ.

CHAMPIONS TROPHY 2025  CHAMPIONS TROPHY PROMO  PROMO AD BREAKS INTERNET  MS DHONI NEWS
ಹಿಮದಲ್ಲಿಯೂ ಟೆನ್ಷನ್​ ತಡೆಯೋಕೆ ಆಗ್ತಿಲ್ಲ ಎನ್ನುತ್ತಿರುವ ಧೋನಿ (Photo Credit: X/Star Sports)

By ETV Bharat Sports Team

Published : Jan 29, 2025, 3:50 PM IST

Champions Trophy 2025:ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಏಕದಿನ ಮತ್ತು ಟಿ20 ವಿಶ್ವಕಪ್‌ಗಳನ್ನು ಮಾತ್ರ ಗೆದ್ದುಕೊಂಡಿಲ್ಲ.. ಇದರ ಜೊತೆಗೆ ಚಾಂಪಿಯನ್ಸ್ ಟ್ರೋಫಿಯನ್ನೂ ಸಹ ಗೆದ್ದಿರುವುದು ಗೊತ್ತಿರುವ ಸಂಗತಿ. ಈ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ಟೀಮ್ ಇಂಡಿಯಾ ನಾಯಕ ಕೂಡ ಧೋನಿ ಅವರೇ.. ಈಗ ಅವರು ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿಗೆ ತಯಾರಿ ನಡೆಸುತ್ತಿದ್ದಾರೆ. ಆದರೆ, ಇದು ನಾಯಕನಾಗಿ ಅಲ್ಲ..

ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಟೀಂ ಇಂಡಿಯಾಗೆ ಚಾಂಪಿಯನ್ಸ್​ ಟ್ರೋಫಿಯನ್ನು ಗೆದ್ದು ಅರ್ಪಿಸಿದ್ದರು. 2013ರಲ್ಲಿ ಭಾರತ ಚಾಂಪಿಯನ್ಸ್​ ಟ್ರೋಫಿ ಗೆದ್ದು ಬೀಗಿತ್ತು. ಭಾರತ ಚಾಂಪಿಯನ್ಸ್​ ಟ್ರೋಫಿ ಗೆದ್ದು 12 ವರ್ಷಗಳೇ ಕಳೆದಿವೆ. ಈಗ ಮತ್ತೊಮ್ಮೆ ಚಾಂಪಿಯನ್ಸ್​ ಟ್ರೋಫಿಗೆ ಮುತ್ತಿಕ್ಕುವ ಕ್ಷಣ ಎದುರಾಗಿದೆ.

12 ವರ್ಷಗಳ ನಂತರ ಟೀಮ್ ಇಂಡಿಯಾ ಮತ್ತೆ ಈ ಐಸಿಸಿ ಟ್ರೋಫಿಯನ್ನು ಗೆಲ್ಲಲು ತಯಾರಿ ನಡೆಸುತ್ತಿದೆ. ಭಾರತ ತಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕೆ ಇಳಿಯಲಿದೆ. ಚಾಂಪಿಯನ್ಸ್ ಟ್ರೋಫಿ 2025 ಟೂರ್ನಮೆಂಟ್ ಫೆಬ್ರವರಿ 19 ರಿಂದ ಆರಂಭವಾಗಲಿದೆ. ರೋಹಿತ್ ಬಳಗ ಆಡುವ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ ಎಂಬುದು ಗಮನಾರ್ಹ..

ಸದ್ಯ ಭಾರತದ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಸುದ್ದಿಯಲ್ಲಿದ್ದಾರೆ. ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಮಾಜಿ ನಾಯಕ ಎಂಎಸ್ ಧೋನಿ ಅವರ ಪ್ರೋಮೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಈಗ ಅದು ಸಖತ್​ ವೈರಲ್ ಆಗ್ತಿದೆ. ಐಸಿಸಿ ಟೂರ್ನಮೆಂಟ್‌ನಲ್ಲಿನ ಸ್ಪರ್ಧೆಯ ಕುರಿತು ಧೋನಿ ಆಸಕ್ತಿದಾಯಕ ಮಾತುಗಳನ್ನು ಸಹ ಆಡಿದ್ದಾರೆ. ನಾಯಕನಾಗಿ ತಾನು ಯಾವಾಗಲೂ ಕೂಲ್ ಆಗಿರುತ್ತೇನೆ. ಆದರೆ ಈಗ ಅಭಿಮಾನಿಯಾಗಿ ಪಂದ್ಯಗಳನ್ನು ನೋಡುವಾಗ ತುಂಬಾ ಟೆನ್ಷನ್​ ಆಗಿರುತ್ತೇನೆ ಎಂದು ಧೋನಿ ಹೇಳಿದ್ದಾರೆ. ಇದಕ್ಕಾಗಿ ಡಿಆರ್‌ಎಸ್ (ಧೋನಿ ರೆಫ್ರಿಜರೇಷನ್ ಸಿಸ್ಟಮ್) ಸಿದ್ಧಪಡಿಸಲಾಗಿದ್ದರೂ, ಅದು ಸಾಕಾಗುವುದಿಲ್ಲ ಎಂದು ಅವರು ಬಹಿರಂಗಪಡಿಸಿದರು.

ಇದರ ಲೆಕ್ಕಾಚಾರ ನೋಡಿದರೆ ಈ ಪಂದ್ಯಗಳು ರೋಮಾಂಚಕಾರಿಯಾಗಿರಲಿವೆ ಎಂದು ತೋರುತ್ತಿದೆ. ನಮ್ಮ ತಂಡ ಬಲಿಷ್ಠವಾಗಿದ್ದರೂ, ನಾವು ಕೇವಲ ಒಂದು ಪಂದ್ಯ ಸೋತರೆ ಪಂದ್ಯಾವಳಿಯಿಂದ ಹೊರಹೋಗಬೇಕಾಗುತ್ತದೆ. "ಈ ಟೆನ್ಷನ್​ ನಡುವೆ ಹೊರಗೆ ಮಾತ್ರವಲ್ಲದೆ ನನ್ನೊಳಗೂ ಟೆಂಪರೇಚರ್​ ಏರುತ್ತಿದೆ" ಎಂದು ಧೋನಿ ವಿಡಿಯೋದಲ್ಲಿ ಹೇಳಿದ್ದಾರೆ.

ವಿಡಿಯೋದಲ್ಲಿ ಧೋನಿ ಎಷ್ಟು ಟೆನ್ಷನ್​ ಆಗಿದ್ದಾರೆ ಎಂಬುದನ್ನು ತೋರಿಸಲಾಗಿದೆ. ಧೋನಿ ಹಿಮಾಲಯದಲ್ಲಿಯೂ ಕುಳಿತರೂ ಸಹ ಅವರು ಬೆವರುತ್ತಿರುವುದಾಗಿ ತೋರಿಸಿದ್ದಾರೆ. ಅಷ್ಟೇ ಅಲ್ಲ, ಅವರ ತಲೆ ಮೇಲೆ ಐಸ್​ ಕ್ಯೂಬ್​ನಿಂದ ಮಾಡಿದ ಟೋಪಿ ಧರಿಸಿದ್ರೂ ಸಹ ಅವರ ಟೆನ್ಷನ್​ ಮಾತ್ರ ಕಡಿಮೆಯಾಗುತ್ತಿಲ್ಲ. ಹಿಮ ಮಳೆ, ಟ್ಯಾಂಕರ್‌ಗಳ ಮೂಲಕ ಐಸ್ ತಂದು ಅವರ ಮೇಲೆ ಸುರಿದರೂ ಸಹ ಹೀಟ್​ ಕಡಿಮೆಯಾಗ್ತಿಲ್ಲ ಎಂದು ಧೋನಿ ಹೇಳುತ್ತಿದ್ದ ಸನ್ನೆಗಳು ಎಲ್ಲರನ್ನೂ ಬೆರಗುಗೊಳಿಸುತ್ತಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಓದಿ:'ಸವಾಲಿಗೆ ಸಿದ್ಧ': ವಿರಾಟ್ ಕೊಹ್ಲಿ ಬಯೋಪಿಕ್​ನಲ್ಲಿ ನಟಿಸುವ ಪ್ರಶ್ನೆಗೆ ವೀರ್ ಉತ್ತರ ಹೀಗಿದೆ

ABOUT THE AUTHOR

...view details