ಕರ್ನಾಟಕ

karnataka

ETV Bharat / sports

ಸೈಕಲ್​ ತುಳಿಯುತ್ತಾ 271 ರೂಬಿಕ್ಸ್​ ಕ್ಯೂಬ್ ಸರಿಯಾಗಿ​ ಜೋಡಿಸಿ ಗಿನ್ನಿಸ್​ ದಾಖಲೆ ಬರೆದ ಬಾಲಕ - Rubiks Cube Guinness Record - RUBIKS CUBE GUINNESS RECORD

ಸೈಕಲ್​ ತುಳಿಯುತ್ತ 271 ರೂಬಿಕ್ಸ್​ ಕ್ಯೂಬ್​ ಜೋಡಿಸಿ​ ಇಲ್ಲೊಬ್ಬ ಬಾಲಕ ಗಿನ್ನಿಸ್​​ ದಾಖಲೆ ನಿರ್ಮಿಸಿದ್ದಾನೆ.

ಗಿನ್ನಿಸ್​ ದಾಖಲೆ ನಿರ್ಮಿಸಿದ ಬಾಲಕ
ರೂಬಿಕ್ಸ್​ ಕ್ಯೂಬ್‌ನಲ್ಲಿ ಗಿನ್ನಿಸ್​ ದಾಖಲೆ ನಿರ್ಮಿಸಿದ ಬಾಲಕ (ETV Bharat)

By ETV Bharat Sports Team

Published : Oct 1, 2024, 3:48 PM IST

ನೆಲ್ಲೂರು(ಆಂಧ್ರ ಪ್ರದೇಶ):ರಾಜ್ಯದ ನೆಲ್ಲೂರಿನ ಬಾಲಕನೋರ್ವ ರೂಬಿಕ್ಸ್​ ಕ್ಯೂಬ್​ ಅನ್ನು ಸರಿಯಾಗಿ ಜೋಡಿಸುವ ​ಮೂಲಕ ಗಿನ್ನಿಸ್​ ವಿಶ್ವದಾಖಲೆಯ ಪುಟ ಸೇರ್ಪಡೆಯಾಗಿದ್ದಾನೆ​. ಶ್ರೀನಿವಾಸ್ ಮತ್ತು ಸ್ವಪ್ನಾ ದಂಪತಿಯ ಹಿರಿಯ ಮಗ ನಯನ್ ಮೌರ್ಯ, ಸೈಕಲ್​ ಚಲಾಯಿಸುತ್ತಲೇ 271 ರೂಬಿಕ್ಸ್​ ಕ್ಯೂಬ್​ ಬಗೆಹರಿಸಿದ್ದು ವಿಶೇಷ.

ನಯನ್​ ಮೌರ್ಯ ಪೋಷಕರೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದ. 2020ರಲ್ಲಿ ಭಾರತಕ್ಕೆ ವಾಪಸಾದ ಕುಟುಂಬ ನೆಲ್ಲೂರಿನಲ್ಲಿ ಗಾರ್ಮೆಂಟ್ಸ್ ವ್ಯಾಪಾರ ಆರಂಭಿಸಿತ್ತು. ಮೌರ್ಯ ಅಮೆರಿಕದಲ್ಲಿದ್ದಾಗ ಶಾಲೆಯಲ್ಲೊಮ್ಮೆ ತನ್ನ ಸ್ನೇಹಿತರು ರೂಬಿಕ್ಸ್ ಕ್ಯೂಬ್ ಸಾಲ್ವ್​ ಮಾಡುತ್ತಿರುವುದನ್ನು ನೋಡಿ ಅದರ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದಾನೆ. ಮಗನ ಆಸಕ್ತಿ ಗಮನಿಸಿದ ಪೋಷಕರು ಆತನ ಹುಟ್ಟುಹಬ್ಬದಂದು ರೂಬಿಕ್ಸ್ ಕ್ಯೂಬ್ ಅನ್ನೇ ಉಡುಗೊರೆ ನೀಡಿದ್ದರು.

ಅಮೆರಿಕದಿಂದ ಭಾರತಕ್ಕೆ ಬಂದ ಬಳಿಕ ನಯನ್​ಗೆ ರೂಬಿಕ್ಸ್ ಕ್ಯೂಬ್ ಮೇಲಿನ ಆಸಕ್ತಿ ಮತ್ತಷ್ಟು ಹೆಚ್ಚಾಗಿತ್ತು. ಮಗನ ಪ್ರತಿಭೆ ಗುರುತಿಸಿದ ತಾಯಿ 20 ಬಗೆಯ ರೂಬಿಕ್ಸ್ ಕ್ಯೂಬ್‌ಗಳನ್ನು ಖರೀದಿಸಿ ಕೊಟ್ಟಿದ್ದರು. ಇದರಲ್ಲಿಯೇ ಸಂಪೂರ್ಣವಾಗಿ ತೊಡಗಿಕೊಂಡು ಆಟದ ತಂತ್ರಗಳನ್ನು ಕಲಿತಿದ್ದಾನೆ. ಅಲ್ಲದೇ ಟೈಮರ್​ ಇಟ್ಟು ಪಜಲ್​ ಸಾಲ್ವ್​ ಮಾಡಲು ಆರಂಭಿಸಿದ್ದಾನೆ. ಇದರೊಂದಿಗೆ ಹಲವೆಡೆ ನಡೆದ ಸ್ಪರ್ಧೆಗಳಲ್ಲೂ ಪಾಲ್ಗೊಂಡು ಸಾಕಷ್ಟು ಪಶಸ್ತಿಗಳನ್ನು ಬಾಚಿಕೊಂಡಿದ್ದಾನೆ.

ನಯನ್​ ಕ್ಯೂಬರ್ಸ್ ಅಸೋಸಿಯೇಷನ್ ​​ಸದಸ್ಯ ಕೂಡ ಹೌದು. ಅಲ್ಲಿಯೂ ಹೊಸ ತಂತ್ರಗಳನ್ನು ಕಲಿತಿದ್ದಾನೆ. ಬಳಿಕ ಗಿನ್ನಿಸ್ ದಾಖಲೆ ಬಗ್ಗೆ ತಿಳಿದುಕೊಂಡು ಇದೀಗ ಸೈಕಲ್ ತುಳಿಯುತ್ತಲೇ ಕ್ಯೂಬ್ ಸಾಲ್ವ್ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಚೆನ್ನೈನಲ್ಲಿ ನಡೆದ ಗಿನ್ನಿಸ್​​ ದಾಖಲೆ ಸ್ಪರ್ಧೆಯಲ್ಲಿ ಭಾಗವಹಿಸಿ ಕಡಿಮೆ ಸಮಯದಲ್ಲಿ ಪಜಲ್​ ಸಾಲ್ವ್​ ಮಾಡಿದ್ದಾನೆ. ಅದೂ ಕೂಡ ಸೈಕಲ್ ಓಡಿಸುತ್ತಲೇ ಎಂಬುದು ಅತ್ಯಂತ ಕುತೂಹಲದ ಸಂಗತಿ. ಇದರೊಂದಿಗೆ ಗಿನ್ನಿಸ್​ ಪುಟದಲ್ಲಿ ತಮ್ಮ ಹೆಸರು ಸೇರಿಸಿದ್ದಾನೆ.

ರೂಬಿಕ್ಸ್ ಕ್ಯೂಬ್ ಸಾಲ್ವ್ ಮಾಡುವುದರ ಜೊತೆಗೆ ನಯನ್, ರಾಜ್ಯ ಮಟ್ಟದ ಫುಟ್‌ಬಾಲ್ ಆಟಗಾರ ಕೂಡಾ. ಇದರಲ್ಲೂ ಅನೇಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದಿದ್ದಾನೆ. ಅಧ್ಯಯನದಲ್ಲೂ ಮುಂದಿದ್ದಾನೆ. ರೊಬೊಟಿಕ್ ವಿಷಯದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಮುಂದುವರಿಸುವುದಾಗಿ ಹೇಳಿದ್ದಾನೆ.

ಇದನ್ನೂ ಓದಿ:ಬಾಂಗ್ಲಾ ವಿರುದ್ಧ 2ನೇ ಟೆಸ್ಟ್​ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ: ತವರಿನಲ್ಲಿ ಇದು ಸತತ 18ನೇ ಸರಣಿ ಗೆಲುವು! - India Beat Bangladesh

ABOUT THE AUTHOR

...view details