Mohammed Shami 4 Wicket:ಟೀಂ ಇಂಡಿಯಾ (Team India)ದ ಅನುಭವಿ ವೇಗದ ಬೌಲರ್ ಮೊಹ್ಮದ್ ಶಮಿ (Mohammed Shami)ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. 360 ದಿನಗಳ ಬಳಿಕ ಮೈದಾನಕ್ಕೆ ಕಾಲಿಟ್ಟಿರುವ ಅವರು ರಣಜಿ ಟ್ರೋಫಿ (Ranji Trophy)ಯ ತಮ್ಮ ಮೊದಲ ಪಂದ್ಯದಲ್ಲೇ ಮಾರಕ ಬೌಲಿಂಗ್ ಮಾಡಿದ್ದಾರೆ. ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸುತ್ತಿರುವ ಶಮಿ ಕಮ್ಬ್ಯಾಕ್ ಪಂದ್ಯದಲ್ಲೇ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ.
ಇಂದೋರ್ನಲ್ಲಿ ನಡೆದ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಶಮಿ ಬರೋಬ್ಬರಿ 4 ವಿಕೆಟ್ ಕಬಳಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 19 ಓವರ್ ಬೌಲಿಂಗ್ ಮಾಡಿದ ಅವರು ನಾಲ್ಕು ವಿಕೆಟ್ ಪಡೆದರು. ಕಳೆದ ವರ್ಷ ODI ವಿಶ್ವಕಪ್ ಫೈನಲ್ ಬಳಿಕ ಗಾಯಕ್ಕೆ ತುತ್ತಾಗಿದ್ದ ಶಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು. ಇದರಿಂದಾಗಿ ಸುಮಾರು ಒಂದು ವರ್ಷ ಕಾಲ ಆಟದಿಂದಲೇ ದೂರವಿದ್ದರು. ನಿನ್ನೆ ನಡೆದ ಮಧ್ಯಪ್ರದೇಶ ವಿರುದ್ಧ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಬಂಗಾಳದ ಪರ ಆಡಿದ ಶಮಿ, ಮೊದಲ ದಿನ 10 ಓವರ್ ಬೌಲ್ ಮಾಡಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ, ಇಂದು ಉತ್ತಮ ಫಿಟ್ನೆಸ್‌ನೊಂದಿಗೆ ಕಾಣಿಸಿಕೊಂಡರು. 19 ಓವರ್ಗಳ ಬೌಲಿಂಗ್ ಮಾಡಿ ತಮ್ಮ ಖಾತೆಗೆ 4 ವಿಕೆಟ್ಗಳನ್ನು ಸೇರಿಸಿದರು. ಇದರೊಂದಿಗೆ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡುವ ಸಂದೇಶ ನೀಡಿದ್ದಾರೆ.