ಕರ್ನಾಟಕ

karnataka

ETV Bharat / sports

ಅಮೆರಿಕನ್​ ಫುಟ್ಬಾಲ್​ ದಂತಕಥೆ ಓಜೆ ಸಿಂಪ್ಸನ್​ ಇನ್ನಿಲ್ಲ - OJ Simpson passes away

ಅಮೆರಿಕನ್ ಫುಟ್ಬಾಲ್​ ದಂತಕಥೆ ಓಜೆ ಸಿಂಪ್ಸನ್​​ 76ನೇ ವಯಸ್ಸಿನಲ್ಲಿ ಬುಧವಾರ ನಿಧನರಾಗಿದ್ದಾರೆ.

Etv BharatAmerican football legend OJ Simpson passes away at 76
Etv Bhಅಮೆರಿಕನ್​ ಫುಟ್ಬಾಲ್​ ದಂತಕಥೆ ಓಜೆ ಸಿಂಪ್ಸನ್​ ನಿಧನarat

By ETV Bharat Karnataka Team

Published : Apr 12, 2024, 7:29 AM IST

ನ್ಯೂಯಾರ್ಕ್: ಅಮೆರಿಕದ ಫುಟ್‌ಬಾಲ್ ಐಕಾನ್ ಓಜೆ ಸಿಂಪ್ಸನ್ 76 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕ್ರೀಡಾ ಮಾಧ್ಯಮದ ವರದಿ ಪ್ರಕಾರ, ಫುಟ್ಬಾಲ್ ಐಕಾನ್ ಬುಧವಾರ ಇಹಲೋಕ ತ್ಯಜಿಸಿದರು. ಈ ಬಗ್ಗೆ ಅವರ ಕುಟುಂಬ, ಸಿಂಪ್ಸನ್​ ಅವರ ಅಧಿಕೃತ X (ಹಿಂದಿನ ಟ್ವಿಟರ್) ಖಾತೆಯ ಮೂಲಕ ನಿಧನದ ಸುದ್ದಿಯನ್ನು ದೃಢಪಡಿಸಿದೆ.

ಏಪ್ರಿಲ್ 10 ರಂದು ನಮ್ಮ ತಂದೆ ಒರೆಂತಾಲ್ ಜೇಮ್ಸ್ ಸಿಂಪ್ಸನ್ ಅವರು ಕ್ಯಾನ್ಸರ್​​​ನೊಂದಿಗಿನ ಯುದ್ಧದಲ್ಲಿ ಸೋಲು ಅನುಭವಿಸಿ, ಮರಣ ಹೊಂದಿದ್ದಾರೆ. ಸಿಂಪ್ಸನ್​ ಅವರು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬವು ಗೌಪ್ಯತೆ ಮತ್ತು ದೇವರ ಅನುಗ್ರಹಕ್ಕಾಗಿ ಅವರ ಆಶಯಗಳನ್ನು ದಯವಿಟ್ಟು ಗೌರವಿಸುವಂತೆ ಕೇಳಿಕೊಳ್ಳುತ್ತೇವೆ ಎಂದು ಅವರ ಕುಟುಂಬವು ಸಿಂಪ್ಸನ್ ಅವರ X ಖಾತೆಯಿಂದ ಪೋಸ್ಟ್ ಮಾಡಿ ಮನವಿ ಮಾಡಿಕೊಂಡಿದೆ.

1994 ರಲ್ಲಿ ಪತ್ನಿ ಮತ್ತು ಅವಳ ಸ್ನೇಹಿತನನ್ನು ಕೊಂದ ಆರೋಪದಲ್ಲಿ ಅವರು ಸಿಲುಕಿಕೊಂಡಿದ್ದರು. ಆ ಬಳಿಕ ಅವರ ಅದ್ಬುತವಾದ ಕ್ರೀಡಾ ವೃತ್ತಿ ಜೀವನ ಹಾದಿ ತಪ್ಪಿತು. ಲಾಸ್ ಏಂಜಲೀಸ್‌ನಲ್ಲಿ ಅವರ ಪತ್ನಿ ನಿಕೋಲ್ ಬ್ರೌನ್ ಸಿಂಪ್ಸನ್ ಮತ್ತು ಅವರ ಸ್ನೇಹಿತ ರೊನಾಲ್ಡ್ ಗೋಲ್ಡ್‌ಮನ್‌ ಕೊಲೆ ಪ್ರಕರಣದಲ್ಲಿ ಅಂತಿಮವಾಗಿ ಸಿಂಪ್ಸನ್​ ದೋಷಮುಕ್ತರಾಗಿದ್ದರು. ಈ ಘಟನೆ ಆ ಕಾಲದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಆ ಬಳಿಕ ಸಿಂಪ್ಸನ್​ ಅವರ ಜೀವನ ಬದಲಾಯಿತು. ಅಷ್ಟೇ ಅಲ್ಲ ಕ್ರೀಡಾ ಐಕಾನ್‌ ಆಗಿದ್ದ ಸಿಂಪ್ಸನ್​​ ವಿವಾದಾತ್ಮಕ ಸೆಲೆಬ್ರಿಟಿ ಆದರು.

ಫುಟ್ಬಾಲ್​ ಅಂಗಳದಲ್ಲಿ ಸಿಂಪ್ಸನ್​ಗೆ ದೊಡ್ಡ ಹೆಸರಿದೆ. ಸಾರ್ವಕಾಲಿಕ ಅತ್ಯುತ್ತಮ ರನ್ನಿಂಗ್ ಬ್ಯಾಕ್‌ಗಳಲ್ಲಿ ಒಬ್ಬರಾಗಿ ವೃತ್ತಿಜೀವನ ಶುರು ಮಾಡಿದ್ದರು. ತಮ್ಮ ಆಟದ ದಿನಗಳಲ್ಲಿ ಬಫಲೋ ಬಿಲ್ಸ್ (1969-1977) ಮತ್ತು ಸ್ಯಾನ್ ಫ್ರಾನ್ಸಿಸ್ಕೊ ​​49ers (1978-1979) ತಂಡಗಳನ್ನು ಪ್ರತಿನಿಧಿಸುತ್ತಿದ್ದರು. 1968 ರಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ (USC) ಗಾಗಿ ಹೈಸ್ಮನ್ ಟ್ರೋಫಿ ಗೆದ್ದುಕೊಂಡಿದ್ದರು. ಇದು ಅವರಿಗೆ ಅತ್ಯುತ್ತಮ ಕಾಲೇಜು ಫುಟ್ಬಾಲ್ ಆಟಗಾರನ ಗೌರವ ತಂದುಕೊಟ್ಟಿತ್ತು. ವಿಶ್ವವಿದ್ಯಾನಿಲಯ ಮಟ್ಟದ ಪುಟ್ಬಾಲ್​ನಲ್ಲಿ ಮಿಂಚಿದ ಸಿಂಪ್ಸನ್​, ನ್ಯಾಷನಲ್ ಫುಟ್‌ಬಾಲ್ ಲೀಗ್ (NFL) ನಲ್ಲಿ ಮಿಂಚಿದರು.

1973ರ ಲೀಗ್‌ನಲ್ಲಿ ಅತ್ಯಂತ ಮೌಲ್ಯಯುತ ಆಟಗಾರ ಎಂಬ ಗರಿಮೆಗೆ ಪಾತ್ರರಾದರು. ಒಂದು ಋತುವಿನಲ್ಲಿ 2,000 ಯಾರ್ಡ್​​ಗಳಷ್ಟು ರಶ್ ಮಾಡಿದ ಮೊದಲ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಸಿಂಪ್ಸನ್ 1985 ರಲ್ಲಿ ಪ್ರೊ ಫುಟ್ಬಾಲ್ ಹಾಲ್ ಆಫ್ ಫೇಮ್​ಗೆ ಸೇರ್ಪಡೆಗೊಂಡರು. ಕ್ರೀಡೆಯಿಂದ ನಿವೃತ್ತರಾದ ನಂತರವೂ ಅವರು ಕ್ರೀಡಾ ವೃತ್ತಿ ಜೀವನದಲ್ಲಿ ಪ್ರಸ್ತುತತೆ ಕಾಪಾಡಿಕೊಂಡಿದ್ದರು. ಕಾಮೆಂಟರಿ ಮತ್ತು ನಟನೆಯ ಮೂಲಕ ಗಮನ ಸೆಳೆದರು. 1994 ರಲ್ಲಿ ಸಿಂಪ್ಸನ್ ಅವರ ಜೀವನವು ಹದಗೆಟ್ಟಿತು. ಅವರ ಮನೆಯ ಹೊರಗಡೆ ಅವರ ಹೆಂಡತಿ ಮತ್ತು ಸ್ನೇಹಿತನ ದೇಹಗಳು ಸಿಕ್ಕಿದ್ದವು. ಸಿಂಪ್ಸನ್ ವಿರುದ್ಧ ಕೊಲೆ ಪ್ರಕರಣ ದಾಖಲಾಯಿತು, ಇದು ಅಮೆರಿಕದಾದ್ಯಂತ ಭಾರಿ ಸದ್ದು ಮಾಡಿತು. ಅಂತಿಮವಾಗಿ ಸಿಂಪ್ಸನ್ ಪೊಲೀಸರಿಗೆ ಶರಣಾದರು. ಬಳಿಕ ನಡೆದ ಕಾನೂನು ಹೋರಾಟದಲ್ಲಿ ಅವರು ದೋಷ ಮುಕ್ತರಾಗಿ ಹೊರ ಬಂದರು.

1997 ರಲ್ಲಿ ಗೋಲ್ಡ್ಮನ್ ಕುಟುಂಬವು ಸಿಂಪ್ಸನ್ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿತು. ಸಿಂಪ್ಸನ್ ಅಂತಿಮವಾಗಿ ಫ್ಲೋರಿಡಾದಿಂದ ಕ್ಯಾಲಿಫೋರ್ನಿಯಾಗೆ ಸ್ಥಳಾಂತರಗೊಂಡರು. ಈ ಮೂಲಕ ಅವರು ಸಾರ್ವಜನಿಕ ಬದುಕಿನಿಂದ ದೂರವುಳಿದರು. ಆದರೆ 13 ವರ್ಷಗಳ ಬಳಿಕ ಅವರು ಶಸ್ತ್ರಸಜ್ಜಿತ ದರೋಡೆ ಮತ್ತು ಅಪಹರಣದ ಪ್ರಕರಣದಲ್ಲಿ ಅವರು ಶಿಕ್ಷೆಗೊಳಗಾದರು. ಅವರಿಗೆ 33 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. 2017ರ ಅಕ್ಟೋಬರ್​ನಲ್ಲಿ ಅವರು ಪೆರೋಲ್‌ ಮೂಲಕ ಬಿಡುಗಡೆಯಾಗಿದ್ದರು.

ಇದನ್ನು ಓದಿ:ತಮಿಳುನಾಡಲ್ಲಿ ನಡೆದ ರಸ್ತೆ ಅಪಘಾತ: ಕರ್ನಾಟಕ ಮೀಸಲು ಪಡೆಯ ಹಿರಿಯ ಅಧಿಕಾರಿ, ಕಾನ್ಸ್​ಟೇಬಲ್​ಗಳು ಸಾವು - Road accident

ABOUT THE AUTHOR

...view details