ಕರ್ನಾಟಕ

karnataka

ETV Bharat / sports

ಐಪಿಎಲ್​ಗೆ ಗುಡ್​ಬೈ ಹೇಳಲಿರುವ ಸ್ಟಾರ್​ ಆಲ್​ರೌಂಡರ್​: ಮೆಗಾ ಹರಾಜಿನಿಂದಲೂ ಹಿಂದೆ ಸರಿದ ಆಟಗಾರ - BEN STOKES

ಐಪಿಎಲ್​ 2025ರ ಮೆಗಾ ಹರಾಜಿನಿಂದ ಸ್ಟಾರ್​ ಆಲ್​ರೌಂಡರ್​ ಹಿಂದೆ ಸರಿದಿದ್ದು, ನಿವೃತ್ತಿ ಘೋಷಿಸಲು ಮುಂದಾಗಿದ್ದಾರೆ.

ಐಪಿಎಲ್​ ಕಪ್​
ಐಪಿಎಲ್​ ಕಪ್​ (IANS)

By ETV Bharat Sports Team

Published : Nov 3, 2024, 11:58 AM IST

Updated : Nov 3, 2024, 2:16 PM IST

ಹೈದರಾಬಾದ್​: ಐಪಿಎಲ್​ 2025ಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ದೀಪಾವಳಿ ವೇಳೆ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳಲ್ಲಿ ಉಳಿಸಿಕೊಂಡಿರುವ ಆಟಗಾರರ ರಿಟೈನ್​ ಪಟ್ಟಿ ಬಿಡುಗಡೆ ಮಾಡಿವೆ. ಇದರ ನಡುವೆ ಸ್ಟಾರ್​ ಆಲ್​ರೌಂಡರ್​ ಒಬ್ಬರು ಐಪಿಎಲ್​ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ.

ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ 2025ರ ಐಪಿಎಲ್ ಸೀಸನ್ ಮೆಗಾ ಹರಾಜಿನಿಂದ ಹಿಂದೆ ಸರಿಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಹರಾಜಿನಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಬೆನ್​ ಸ್ಟೋಕ್ಸ್​ (IANS)

ಮುಂಬರುವ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳ ಮೇಲೆ ಕೇಂದ್ರೀಕರಿಸಲು ಅವರು 2025ರ ಐಪಿಎಲ್ ಋತುವಿನ ಮೆಗಾ ಹರಾಜಿನಿಂದ ಹೊರಗುಳಿಯಲು ಯೋಜಿಸುತ್ತಿದ್ದಾರೆ. ಬೆನ್ ಸ್ಟೋಕ್ಸ್ ಕೊನೆಯ ಬಾರಿಗೆ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಈ ಆವೃತ್ತಿಯಲ್ಲಿ ಕೇವಲ ಎರಡು ಪಂದ್ಯವಾಡಿದ್ದ ಸ್ಟೋಕ್ಸ್​, ಗಾಯದ ಸಮಸ್ಯೆಯಿಂದಾಗಿ ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಾಗಿರಲಿಲ್ಲ. ನಂತರ ಫಿಟ್​ನೆಸ್​ ಮತ್ತು ಕೆಲಸದ ಕಾರಣ 2024ರ ಐಪಿಎಲ್‌ನಲ್ಲಿ ಪಾಲ್ಗೊಂಡಿರಲಿಲ್ಲ.

ಮುಂದಿನ ವರ್ಷ ಜೂನ್‌ನಲ್ಲಿ ಭಾರತ 5 ಟೆಸ್ಟ್‌ಗಳ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯನ್ನು ಪೂರ್ಣಗೊಳಿಸಿದ ನಂತರ, ಇಂಗ್ಲೆಂಡ್ ತಂಡ 5 ಪಂದ್ಯಗಳ ಆ್ಯಶಸ್ ಟೆಸ್ಟ್ ಸರಣಿ ಆಡಲು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದೆ.

ಬೆನ್​ ಸ್ಟೋಕ್ಸ್​ (IANS)

ಬೆನ್​ ಸ್ಟೋಕ್ಸ್​ ಐಪಿಎಲ್​ ದಾಖಲೆ:​ಸ್ಟೋಕ್ಸ್​ ಇದುವರೆಗೂ ಒಟ್ಟು 45 ಐಪಿಎಲ್​ ಪಂದ್ಯಗಳನ್ನು ಆಡಿದ್ದು 935 ರನ್​ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಹಾಗು ಎರಡು ಶತಕಗಳು ಸೇರಿವೆ. 107 ಹೈ ಸ್ಕೋರ್​ ಆಗಿದೆ.

ಬೌಲಿಂಗ್​ ದಾಖಲೆ:ಐಪಿಎಲ್​ನಲ್ಲಿ 38 ಪಂದ್ಯಗಳಲ್ಲಿ ಬೌಲಿಂಗ್​ ಮಾಡಿರುವ ಸ್ಟೋಕ್ಸ್​, 28 ವಿಕೆಟ್​ ಪಡೆದಿದ್ದಾರೆ. 15ಕ್ಕೆ 3 ಇವರ ಅತ್ಯುತ್ತಮ ಬೌಲಿಂಗ್​ ಆಗಿದೆ.

ಕೊನೆಯ ಸೀಸನ್​:2023 ಹರಾಜಿನಲ್ಲಿ ಬೆನ್​ಸ್ಟೋಕ್ಸ್​ ಅವರನ್ನು ಚೆನ್ನೈ ಸೂಪರ್​ಕಿಂಗ್ಸ್ 16.25 ಕೋಟಿ ರೂ.ಗೆ ಖರೀದಿಸಿತ್ತು. ಈ ಬಾರಿಯೂ ಉತ್ತಮ ಮೊತ್ತಕ್ಕೆ ಬಿಕರಿಯಾಗುತ್ತಾರೆ ಎಂದೇ ಹೇಳಲಾಗಿತ್ತು.​

ಇದನ್ನೂ ಓದಿ:ಆರ್​ಸಿಬಿ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ

Last Updated : Nov 3, 2024, 2:16 PM IST

ABOUT THE AUTHOR

...view details