ಕರ್ನಾಟಕ

karnataka

ETV Bharat / sports

ಮುಂದಿನ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹಾಕಿ, ಕ್ರಿಕೆಟ್​, ಬ್ಯಾಡ್ಮಿಂಟನ್​, ಕುಸ್ತಿ ಇಲ್ಲ! ಭಾರತಕ್ಕೆ ನಿರಾಶೆ

2026ರ ಕಾಮನ್​ವೆಲ್ತ್​ ಕ್ರೀಡಾಕೂಟದಿಂದ ಒಟ್ಟು 11 ಕ್ರೀಡೆಗಳನ್ನು ತೆಗೆದು ಹಾಕಿರುವುದಾಗಿ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ಹೇಳಿದೆ.

ಕಾಮನ್‌ವೆಲ್ತ್ ಗೇಮ್ಸ್ 2026
ಕಾಮನ್‌ವೆಲ್ತ್ ಗೇಮ್ಸ್ 2026 (IANS)

By ETV Bharat Sports Team

Published : 5 hours ago

ನವದೆಹಲಿ: 2026ರಲ್ಲಿ ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೂ ಮೊದಲೇ 10 ಕ್ರೀಡೆಗಳನ್ನು ಟೂರ್ನಿಯಿಂದ ತೆಗೆದು ಹಾಕಲಾಗಿದೆ. ಇದರಲ್ಲಿ ಭಾರತ ಪ್ರತಿನಿಧಿಸುವ 6 ಪಂದ್ಯಗಳೂ ಸೇರಿವೆ. ಹಾಕಿ, ಕ್ರಿಕೆಟ್​, ಬ್ಯಾಡ್ಮಿಂಟನ್​, ಕುಸ್ತಿ, ಟೇಬಲ್​ ಟೆನ್ನಿಸ್​, ಡೈವಿಂಗ್​, ರಗ್ಬಿ ಸೆವೆನ್ಸ್​, ಬೀಚ್​ ವಾಲಿಬಾಲ್​, ಮೌಂಟೆನ್​ ಬೈಕಿಂಗ್​, ಸ್ಕ್ವಾಷ್​​ ಮತ್ತು ರಿದಮಿಕ್​ ಜಿಮ್ನ್ಯಾಸ್ಟಿಕ್​ ಕ್ರೀಡೆಗಳಿವೆ. ಈ ಬಗ್ಗೆ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ಹೇಳಿಕೆ ಬಿಡುಗಡೆ ಮಾಡಿದೆ.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯುತ್ತದೆ. 2026ರಲ್ಲಿ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯಲಿದೆ. 23ನೇ ಕಾಮನ್‌ವೆಲ್ತ್ ಗೇಮ್ಸ್ ಜುಲೈ 23ರಿಂದ ಆರಂಭವಾಗಲಿದ್ದು, ಆಗಸ್ಟ್ 2ರವರೆಗೆ ನಡೆಯುತ್ತದೆ. 2014ರಲ್ಲಿ ಗ್ಲಾಸ್ಗೋದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆದಿತ್ತು. ಇದೀಗ 12 ವರ್ಷಗಳ ನಂತರ ನಗರ ಮತ್ತೊಮ್ಮೆ ಆತಿಥ್ಯವಹಿಸುತ್ತಿದೆ.

ವಾಸ್ತವವಾಗಿ, ಈ ಕ್ರೀಡಾಕೂಟ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆಯಬೇಕಿತ್ತು. ಹೆಚ್ಚಿನ ಹಣ ವ್ಯಯಿಸಬೇಕಾದ ಕಾರಣ ಹೋಸ್ಟಿಂಗ್ ಹಕ್ಕನ್ನು ಅದು ಕೈಬಿಟ್ಟಿದೆ. 2022ರಲ್ಲಿ ಬರ್ಮಿಂಗ್ಹ್ಯಾಮ್​ನಲ್ಲಿ ನಡೆದಿದ್ದ ಕೂಟದಲ್ಲಿ ಒಟ್ಟು 19 ಕ್ರೀಡೆಗಳಿದ್ದವು. ಇದೀಗ 2026ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ವೆಚ್ಚ ಕಡಿತಗೊಳಿಸಲು ಕೇವಲ 10 ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ. ಅಲ್ಲದೇ ಕೇವಲ ನಾಲ್ಕು ಸ್ಥಳಗಳಲ್ಲಿ ಪಂದ್ಯಾವಳಿಗಳು ನಡೆಯಲಿವೆ.

ಭಾರತ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 61 ಪದಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿತ್ತು. ಇದರಲ್ಲಿ 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕಗಳು ಸೇರಿದ್ದವು. ಕುಸ್ತಿಯಲ್ಲಿ ಅತಿ ಹೆಚ್ಚು 12 ಪದಕಗಳನ್ನು ಬಾಚಿಕೊಂಡಿತ್ತು. ಇದಲ್ಲದೇ ವೇಟ್‌ಲಿಫ್ಟಿಂಗ್‌ನಲ್ಲಿ 10 ಪದಕಗಳು ಬಂದಿದ್ದವು. ಕಾಮನ್ ವೆಲ್ತ್ ಗೇಮ್ಸ್ ಫೆಡರೇಷನ್​ನ ಈ ನಿರ್ಧಾರದಿಂದ ಭಾರತಕ್ಕೆ ನಿರಾಸೆಯಾಗಿದೆ. ಏಕೆಂದರೆ ಹಾಕಿ, ಬ್ಯಾಡ್ಮಿಂಟನ್, ಕುಸ್ತಿ, ಕ್ರಿಕೆಟ್, ಶೂಟಿಂಗ್​ನಲ್ಲಿ ಭಾರತ ಹೆಚ್ಚು ಪದಕಗಳನ್ನು ಗೆಲ್ಲುವ ತಂಡವಾಗಿದೆ.

ಇದನ್ನೂ ಓದಿ:'ಆ ದಿನ ಹೋಟೆಲ್​ ಕೋಣೆಗೆ ಕರೆದು ನನ್ನ ಮೇಲೆ'!: ಬ್ರಿಜ್​ ಭೂಷಣ್​ ವಿರುದ್ದ ಸಾಕ್ಷಿ ಗಂಭೀರ ಆರೋಪ

ABOUT THE AUTHOR

...view details