ನವದೆಹಲಿ: ಭಾರತ ಸೇರಿದಂತೆ ವಿಶ್ವಾದ್ಯಂತ ನಾನಾ ಬಗೆಯ ಕ್ರೀಡೆಗಳನ್ನು ಆಡಲಾಗುತ್ತದೆ. ಆದರೆ ಕೆಲವು ಕ್ರೀಡೆಗಳು ವಿಶ್ವದೆಲ್ಲೆಡೆ ಜನಪ್ರಿಯತೆ ಪಡೆದುಕೊಂಡಿವೆ. ಇವುಗಳ ಅಭಿಮಾನಿಗಳ ಸಂಖ್ಯೆಯೂ ಕೋಟಿಗಳಲ್ಲಿದೆ. ಹಾಗಾದರೆ, ಯಾವುವು ಆ ಹತ್ತು ವಿಶ್ವವಿಖ್ಯಾತ ಆಟಗಳು ಎಂಬುದನ್ನು ನೋಡೋಣ.
ವಿಶ್ವದ 10 ಅತ್ಯಂತ ಜನಪ್ರಿಯ ಕ್ರೀಡೆಗಳು ಯಾವುವು ಹೇಳಿ ನೋಡೋಣ! - Most Popular Sports - MOST POPULAR SPORTS
ವಿಶ್ವದಲ್ಲಿ ಅತ್ಯಂತ ಜನಪ್ರಿಯತೆ ಪಡೆದಿರುವ ಟಾಪ್ 10 ಕ್ರೀಡೆಗಳು ಯಾವುವು? ಅವು ಹೊಂದಿರುವ ಅಭಿಮಾನಿಗಳ ಸಂಖ್ಯೆಯ ಕುರಿತಾದ ವಿಶೇಷ ವರದಿ ಇಲ್ಲಿದೆ.
ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳು (ANI)
Published : Aug 23, 2024, 3:56 PM IST
ಪ್ರಪಂಚದ 10 ಜನಪ್ರಿಯ ಕ್ರೀಡೆಗಳು:
- ಫುಟ್ಬಾಲ್:ಫುಟ್ಬಾಲ್ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಮೊದಲ ಸ್ಥಾನದಲ್ಲಿದೆ. 12ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಹುಟ್ಟಿಕೊಂಡ ಇದು ಇಂದು ವಿಶ್ವವಿಖ್ಯಾತಿ ಗಳಿಸಿದೆ. ಫುಟ್ಬಾಲ್ ಕ್ರೀಡೆ 208 ದೇಶಗಳಲ್ಲಿ ಖ್ಯಾತಿ ಪಡೆದಿದೆ. 93 ದೇಶಗಳಲ್ಲಿ ಇದು ಅಚ್ಚುಮೆಚ್ಚಿನ ಕ್ರೀಡೆ. 4 ಬಿಲಿಯನ್(ಶತಕೋಟಿ) ಅಭಿಮಾನಿಗಳನ್ನು ಹೊಂದಿದೆ. ಒಟ್ಟು 22 ಆಟಗಾರರು ಈ ಆಟದಲ್ಲಿ ಭಾಗವಹಿಸುತ್ತಾರೆ. ಇತ್ತಂಡಗಳು ತಲಾ 11 ಆಟಗಾರರನ್ನು ಹೊಂದಿರುತ್ತವೆ.
- ಕ್ರಿಕೆಟ್:ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಕ್ರಿಕೆಟ್ ಎರಡನೇ ಸ್ಥಾನದಲ್ಲಿದೆ. ಈ ಆಟ 16ನೇ ಶತಮಾನದ ಕೊನೆಯಲ್ಲಿ ಇಂಗ್ಲೆಂಡ್‌ನಲ್ಲಿ ಪ್ರಾರಂಭವಾಯಿತು. ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಆಟವಾಗಿದ್ದು ಇಂದು 100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. 3 ಶತಕೋಟಿ ಅಭಿಮಾನಿಗಳನ್ನು ಹೊಂದಿದೆ. ಐಸಿಸಿ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಟೆಸ್ಟ್ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ನ ದೊಡ್ಡ ಈವೆಂಟ್ಗಳು.
- ಫೀಲ್ಡ್ ಹಾಕಿ:ಹಾಕಿ ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಪ್ರಾರಂಭವಾಗಿದೆ. ಸುಮಾರು 2-3 ಬಿಲಿಯನ್ ಜನರು ಈ ಆಟವನ್ನು ಇಷ್ಟಪಡುತ್ತಾರೆ. ವಿಶ್ವದ ಮೂರನೇ ಅತ್ಯಂತ ಜನಪ್ರಿಯ ಆಟವೂ ಹೌದು. ತಲಾ 11 ಆಟಗಾರರ ಎರಡು ತಂಡಗಳಲ್ಲಿ ಭಾಗವಹಿಸುತ್ತವೆ. ಫೀಲ್ಡ್ ಹಾಕಿ ಯುರೋಪ್, ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾ ಮತ್ತು ಭಾರತದಲ್ಲಿ ಹೆಚ್ಚು ಜನಪ್ರಿಯ.
- ಟೆನಿಸ್:ಟೆನಿಸ್ 14ನೇ ಶತಮಾನದಲ್ಲಿ ಫ್ರಾನ್ಸ್‌ನಲ್ಲಿ ಹುಟ್ಟಿಕೊಂಡಿತು. ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯಗಳು ನಡೆಯುತ್ತವೆ. ವಿಶ್ವಾದ್ಯಂತ ಸರಿಸುಮಾರು 1 ಶತಕೋಟಿ ಅಭಿಮಾನಿಗಳನ್ನು ಹೊಂದಿದೆ.
- ವಾಲಿಬಾಲ್:ಈ ಆಟ 1895ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಾರಂಭವಾಯಿತು. ವಾಲಿಬಾಲ್ 900 ಮಿಲಿಯನ್ ಜಾಗತಿಕ ಅಭಿಮಾನಿಗಳನ್ನು ಹೊಂದಿದೆ.
- ಟೇಬಲ್ ಟೆನಿಸ್:19ನೇ ಶತಮಾನದಲ್ಲಿ ಪ್ರಾರಂಭವಾದ ಟೇಬಲ್ ಟೆನ್ನಿಸ್ ಇಂದು ವಿಶ್ವದ ಜನಪ್ರಿಯ ಆಟ. ಚೀನಾದ ರಾಷ್ಟ್ರೀಯ ಆಟವೂ ಹೌದು. ಈ ಆಟವನ್ನು ಸಿಂಗಲ್ಸ್ ಮತ್ತು ಡಬಲ್ಸ್ ಎಂದು ಎರಡು ಸ್ಪರ್ಧೆಗಳಲ್ಲಿ ಆಡಿಸಲಾಗುತ್ತದೆ. ಚೀನಾ, ಇಂಡೋನೇಷ್ಯಾ ಮತ್ತು ಮಲೇಷ್ಯಾದಲ್ಲಿ ಟೇಬಲ್ ಟೆನಿಸ್ ಬಹಳ ಪ್ರಸಿದ್ಧ. ಈ ಕ್ರೀಡೆಗಿರುವ ಅಭಿಮಾನಿಗಳ ಸಂಖ್ಯೆ ಅಂದಾಜು 850 ಮಿಲಿಯನ್.
- ಬೇಸ್‌ಬಾಲ್:ಬೇಸ್‌ಬಾಲ್ 18ನೇ ಶತಮಾನದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹುಟ್ಟಿಕೊಂಡಿತು. ಮೊದಲ ಲೀಗ್ ಅನ್ನು 1870ರ ದಶಕದಲ್ಲಿ ಆಯೋಜಿಸಲಾಗಿತ್ತು. ಯುನೈಟೆಡ್ ಸ್ಟೇಟ್ಸ್ ಹೊರತುಪಡಿಸಿ ಕ್ಯೂಬಾ, ಡೊಮಿನಿಕನ್ ರಿಪಬ್ಲಿಕ್, ಪೋರ್ಟೊ ರಿಕೊ, ಜಪಾನ್ ಮತ್ತು ವೆನೆಜುವೆಲಾದಂತಹ ದೇಶಗಳಲ್ಲೂ ಬೇಸ್‌ಬಾಲ್ ಸಾಕಷ್ಟು ಜನಪ್ರಿಯವಾಗಿದೆ.
- ಗಾಲ್ಫ್:15ನೇ ಶತಮಾನದಲ್ಲಿ ಸ್ಕಾಟ್ಲೆಂಡ್‌ನಲ್ಲಿ ಈ ಕ್ರೀಡೆ ಶುರುವಾಗಿದೆ. ರಾಯಲ್ ಕಲ್ಕತ್ತಾ ಗಾಲ್ಫ್ ಕ್ಲಬ್ ಅನ್ನು 1829ರಲ್ಲಿ ಸ್ಥಾಪಿಸಲಾಯಿತು. ಕ್ರಮೇಣ ಇದು ಐರ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೆನಡಾ ಮತ್ತು ಸಿಂಗಾಪುರ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಪ್ರಸಿದ್ಧಿ ಪಡೆಯಲಾರಂಭಿಸಿತು. ಯುರೋಪ್ನ ಅನೇಕ ಭಾಗಗಳಲ್ಲಿ ಹೆಚ್ಚಾಗಿ ಆಡುತ್ತಾರೆ.
- ಬಾಸ್ಕೆಟ್‌ಬಾಲ್:1891ರಲ್ಲಿ ಈ ಆಟ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದೆ. ಬಾಸ್ಕೆಟ್‌ಬಾಲ್ ಅಮೆರಿಕದ ರಾಷ್ಟ್ರೀಯ ಆಟವೂ ಆಗಿದೆ. ಯುನೈಟೆಡ್ ಸ್ಟೇಟ್ಸ್, ಕೆನಡಾ, ಆಸ್ಟ್ರೇಲಿಯಾ, ಅರ್ಜೆಂಟೀನಾ ಮತ್ತು ಬ್ರೆಜಿಲ್ ಬಲಿಷ್ಠ ತಂಡಗಳಾಗಿವೆ. ಇದರಲ್ಲಿ ಒಟ್ಟು 10 ಆಟಗಾರರು ಭಾಗವಹಿಸುತ್ತಾರೆ. ಪ್ರತಿ ತಂಡ ಐದು ಆಟಗಾರರನ್ನು ಹೊಂದಿರುತ್ತದೆ.
- ರಗ್ಬಿ:19ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ರಗ್ಬಿ ಪ್ರಾರಂಭವಾಯಿತು. ಇದನ್ನು ಎರಡು ತಂಡಗಳು ತಲಾ 7 ಆಟಗಾರರೊಂದಿಗೆ ಆಡಲಾಗುತ್ತದೆ. ಇಂಗ್ಲೆಂಡ್, ವೇಲ್ಸ್ ಮತ್ತು ಸ್ಕಾಟ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದಲ್ಲಿ ರಗ್ಬಿ ಹೆಚ್ಚು ಜನಪ್ರಿಯ. ರಗ್ಬಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ವೇಲ್ಸ್, ಫಿಜಿ, ಸಮೋವಾ, ಟೊಂಗಾ ಮತ್ತು ಮಡಗಾಸ್ಕರ್‌ನ ರಾಷ್ಟ್ರೀಯ ಆಟವಾಗಿದೆ.
ಇದನ್ನೂ ಓದಿ:ನಿವೃತ್ತಿ ಘೋಷಣೆ ಪೋಸ್ಟರ್ ವೈರಲ್: ಮೌನ ಮುರಿದ ಕೆ ಎಲ್ ರಾಹುಲ್ - KL Rahul Retirement